Posts

Showing posts from July, 2024

ಸನಿಹವಿದ್ದರೂ ದೂರ

Image
ಚೆಲುವೆ ನೀ ಸನಿಹವಿದ್ದರು ದೂರ ತಾಳಲಾರೆನು ವಿರಹದ ನೋವಿನ ಭಾರ ಕಡಲಿನ ಅಲೆಯಂತೆ ನಿನ್ನಯ ಪ್ರೀತಿ ಚಿಂತೆ ಸುನಾಮಿ ದಡಕೆ ಬಡಿದಂತೆ ದುಃಖದ ಸಂತೆ ದಡದಿ ಕಲ್ಲುಗಳು ಹೇಳಿವೆ ಪ್ರೀತಿಯಾ ಗಾನ ಹಸಿರು ಮರಗಳು ತೂಗಿವೆ ಮೌನದ ಯಾನ ಕಡಲು ಬೋರ್ಗರೆದಿದೆ ಅಲೆಗಳ ಸಪ್ಪಳಕೆ ನೆಲವು ನಡುಗಿದೆ ಜಲದ ನರ್ತನಕೆ  ಮೂಕವಾಗಿವೆ ಜಲಚರ ಜೀವಿಗಳು ದಡದಲ್ಲಿ ಸತ್ತು ಬಿದ್ದಿವೆ ನಕ್ಷತ್ರ ಮೀನುಗಳು ಅಲೆಯಲಿ ತೇಲಿವೆ ಮರದ ದೋಣಿಗಳು ಸೋತಿವೆ ಏಕೋ ಅಂಬಿಗನ ಕನಸುಗಳು ನಾವಿಕನಿಲ್ಲದ ದೋಣಿ ತಲುಪಿತೆ ದಡವ ಸ್ವರಗಳಿಲ್ಲದ ಹಾಡು ಕೊಟ್ಟಿತೆ ವರವ  ನೋವಿನ ಯಾತ್ರೆಯಲ್ಲಿ ಮನಸು ಮರುಗಿದೆ ನಿನ್ನಯ ಸನಿಹದಲ್ಲಿ ಕನಸು ಚಿಗುರಿದೇ  *********ರಚನೆ********** ಡಾ. ಚಂದ್ರಶೇಖರ್ . ಸಿ. ಹೆಚ್

ಶಿಶು ಗೀತೆ

Image
  🌹ಬಾನು ನೋಡು ಕಂದ 🌹 ಕಂದ ನೋಡು ಬಾನಲಿ ನೇಸರ ಸುಡುತಿಹನು  ಹುಣ್ಣಿಮೆ ಬೆಳಕಲಿ ಪೂರ್ಣ ಚಂದಿರ  ನಗುತಿಹನು ಆಕಾಶದೀ ನಕ್ಷತ್ರಗಳ ಸಾಲು ಮೀನುಗುತಿಹುದು ಅಳುತ್ತಾ ಏಕೋ ಉಲ್ಕೆಗಳು ಉರಿದು ಬೀಳುತಿಹುದು ಸೂರ್ಯನು ನಿನ್ನನ್ನು ಸುಡುವನು ಕಂದ ಮನೆಯ ಒಳಗೆ ಹೋಗಿ ಆಡೋಣ ಆಟದಿ ಹಸಿರು ಗೊಂಬೆಯ ಒಮ್ಮೆ ಮುದ್ದು ಮಾಡೋಣ ಗೊಂಬೆಯು ನಿನ್ನನು ನೋಡಿ ಕರೆದು ಮುತ್ತು ಕೊಟ್ಟಿಹುದು ಆಳುವ  ಕಂದನ ತಬ್ಬಿ ಅಮ್ಮಾ ಗುಮ್ಮಾ ತೋರಿಹಳು ಕಂದನು ನೋಡಿ ಚೀರುತ ಅಮ್ಮನ ಅಪ್ಪಿಹುದು ಹೋಗು ಗುಮ್ಮಾ ನನ್ನ ಕಂದನ ಕೊಡುವುದಿಲ್ಲ  ಪಕ್ಕದ ಮನೆಯಲಿ ಹೋಗು ನೀನು ಬೆಕ್ಕು ಸಿಗುವುದಲ್ಲ ಸೂರ್ಯ ಚಂದ್ರರ ನೋಡಿ ಕಂದನು ನಗುತಿಹನು ಅಮ್ಮಾ ತೋರಿದ ಗುಮ್ಮ ನೋಡಿ ಕಂದಾ ಅಳುತಿಹನು ಕಂದನ ಆಟವ ಕಂಡು ಅಮ್ಮನು ಕುಳಿತಿಹಳು  ಒಲೆಯ ಮೇಲಿನ ಹಾಲು ತಂದು ಕಂದಗೆ ಕೊಡುತಿಹಳು  ಹಾಲನು ಕುಡಿದ ಕಂದನು ತಣ್ಣಗೆ ಆಡಿರಲು ಕಂದನ ನೋಡಿದ ಅಮ್ಮನ ಮೊಗವು ನಗುತಿರಲು ನೂರು ಕನಸು ಹೊತ್ತ ಅಮ್ಮಾ ಕೇಳಿಹಳು ಸೂರ್ಯ ಚಂದ್ರರೇ ಬಂದು ಭುವಿಯ ಬೆಳಗಿಹರು  *******ರಚನೆ********** ಡಾ.ಚಂದ್ರಶೇಖರ್.ಸಿ.ಹೆಚ್

ಗುರುವೆಂದರೆ ಶಿಕ್ಷಕ

Image
         ಗುರುವೇ ನೀನು ತಾನೇ ಯುಕ್ತಿ ಗುರುವೇ ನೀನು ತಾನೇ ಭಕ್ತಿ ಗುರುವೇ ನೀನು ತಾನೇ ಶಕ್ತಿ  ಗುರುವೇ ನೀನು ತಾನೇ ಮುಕ್ತಿ ಗುರುವೇ ನಿನ್ನಿಂದ ಈ ಜಗವು ಗುರುವೇ ನಿನ್ನಿಂದ ಈ ಯುಗವು ಗುರುವೇ ನಿನ್ನಿಂದ ಈ ನಗುವು ಗುರುವೇ ನಿನ್ನಿಂದ ಈ ಗೆಲುವು       ಗುರುವೇ ನೀನು ತಾನೇ ಪ್ರೀತಿ ಶಿಕ್ಷಕ ಗುರುವೇ ನೀನು ತಾನೇ ನಮ್ಮ ರಕ್ಷಕ ಗುರುವೇ ನೀನು ತಾನೇ ಭಿಕ್ಷುಕ ಗುರುವೇ ನೀನು ನಮ್ಮ ಆರಕ್ಷಕ  ಗುರುವೇ ನೀನಿಲ್ಲದ ಕ್ಷಣ ಕ್ಷಣಿಕ ಗುರುವೇ ನೀನು ನಮ್ಮ ದನಿಕ  ಗುರುವೇ ನೀನು ಶ್ರದ್ದೆಯ ಜನಕ ಗುರುವೇ ವಿದ್ಯೆಯ ನಮ್ಮ ಗಣಕ   *********ರಚನೆ**********     ಡಾ.ಚಂದ್ರಶೇಖರ್ ಸಿ. ಹೆಚ್

ಮಾತೆ ನೀನು ಅಮೃತದಾತೆ

Image
  🌹 ಮಾತೆ 🌹 ಬದುಕನ್ನು ತೋರಿ ಬೆಳೆಸಿದ ಮಾತೆ ಜೀವನ ಪಾವನ ಮಾಡಿದ ಅಮೃತದಾತೆ ದಯಾಮಯಿ ನೀನು ನಮ್ಮ ಬಾಳಲಿ ಆನಂದಬಾಷ್ಪ ನೀನು  ಕಣ್ಣ ಹನಿಯಲಿ ನೀ ಇರದ ಜೀವ ಬಾಳಿ ಬದುಕುವುದೆಲ್ಲಿ ಕಷ್ಟದ ನೋವನು ಸಹಿಸಿ ಬಾಗುವುದೆ ಇಲ್ಲಿ  ಕಣ್ಣೀರ ಹನಿಯೇ ಕೊನೆ ಆಗುವುದೆಲ್ಲಿ ನಿನ್ನ ನಗುವಲಿ ಬೆಳಕು ಮೂಡುವುದೇ ಇಲ್ಲಿ ಮಾತೆ ನೀನು ಒಂದು ವಜ್ರದ ಮುತ್ತು ನೀ ಬಳಿ ಇದ್ದರೆ ನಮಗೆ ಬಾರದು ಕುತ್ತು ನಿನ್ನ ಖುಷಿಯಲ್ಲಿ ಕಳೆವುದು ಹೊತ್ತು ನೀನೆ ನಮ್ಮ ಬದುಕಿನ ದಾರಿಯ ಸ್ವತ್ತು  ***************ರಚನೆ*********          ಡಾ. ಚಂದ್ರಶೇಖರ್. ಸಿ.ಹೆಚ್

ಹೆತ್ತು ಹೊತ್ತ ತಾಯಿ

Image
   🌹ತಾಯಿ🌹 ಹೆತ್ತವಳು ಹೊತ್ತವಳು ತಾಯಿ ಅಲ್ಲವೇ ಸಾಕಿ ಸಲುಹಿದವಳು ತಾಯಿ ಅಲ್ಲವೇ ಕರುಣೆಯ ಸಿಂದು  ಬಂದು ತಾಯಿ ಅಲ್ಲವೇ ಜೀವಕೆ ಜೀವ ತೇಯ್ದವಳು ತಾಯಿ ಅಲ್ಲವೇ ನೋವಲು ನೀನು ಖುಷಿಯನ್ನು ಕೊಟ್ಟೆ ಹರಿದ ಬದುಕನ್ನು ನೀ ಜೋಡಿಸಿ  ಬಿಟ್ಟೆ ತುಂಬಿದೆ ನೀನು ಅನ್ನದಿ ಖಾಲಿಯ ತಟ್ಟೆ ಪಾವನವಾಯಿತು ಈ ಹಸಿದ ಹೊಟ್ಟೆ  ತಾಯಿ ಎನ್ನುವ ಪದವೇ ಅಮೃತ ನೀನು ನಮ್ಮ ಬೆಳಸಿದ ರೀತಿ ಅದ್ಬುತ ಬದುಕನ್ನು ಕಳೆವೆವು ನಾವು ನಿನ್ನ ನೆನೆಯುತ ಉಸಿರು ಮತ್ತು ಹೆಸರು  ನಿನ್ನದೇ ಈ ಜೀವಿತ  ***********ರಚನೆ***************            ಡಾ.ಚಂದ್ರಶೇಖರ್ ಸಿ. ಹೆಚ್        

ಅಮ್ಮಾ ಎಂದರೆ ಆನಂದ

Image
           🌹 ಅಮ್ಮಾ 🌹 ಅಮ್ಮಾ ಎನ್ನುವ ಪದವೇ ಒಂದು ಆನಂದ ಮಗುವಿನ ಮಮತೆಯೇ ಬಿಡಿಸದ ಬಂದ ಅಮ್ಮನ ಪ್ರೀತಿಗೆ ಸಾಟಿ ಎಲ್ಲಿದೆ ಹೇಳು ಕಂದ ದೇವರು ನಮಗೆ ಅಮ್ಮನ ಸೃಷ್ಟಿಸಿ ತಂದ ಅಮ್ಮಾ ನಿನ್ನಯ ಪ್ರೀತಿ ಮಡಿಲಲಿ ನಾನು  ತುತ್ತನಿಟ್ಟು ಸಾಕಿ ಸಲುಹಿದೆ ನೀನು ನಿನ್ನಯ ಋಣವ ತೀರಿಸಲಿ ಹೇಗೆ ಇನ್ನು ನಿನ್ನಯ ವಾತ್ಸಲ್ಯದಿ ಕಳೆದು ಹೋದೆ ನಾನು ಬದುಕನ್ನು ಕೊಟ್ಟು ನನ್ನನು ಪೋರೆದೆ  ಪ್ರೀತಿಯಲಿ ಹೃದಯ ನನಗೆ ತೆರೆದೆ  ಕೈಯನ್ನು ಇಡಿದು ದಾರಿ ತೋರಿದೆ ನೀ ಇಲ್ಲದ ಈ ಜೀವನ ಬರಿದೆ **********ರಚನೆ********.*        ಡಾ ಚಂದ್ರಶೇಖರ್ ಸಿ.ಹೆಚ್            

ಶಿಶು ಗೀತೆ

Image
        🌹ಬಾರೆ ಚಿನ್ನಮ್ಮ 🌹 ತೆವಳಿ  ಅಂಬೆಗಾಲು ಇಟ್ಟು  ಬಾರೆ ಚಿನ್ನಮ್ಮ ನನ್ನ ಪ್ರೀತಿ ಮುದ್ದು ದ್ರುವ ತಾರೆ ನೀನಮ್ಮ  ಮುಂದೆ ಮುಂದೆ ಸಾಗಿ ನೀನು ಬರಲು ನಾನು ಸಿದ್ಧ ನಿನ್ನ ಭುಜದ ಮೇಲೆ ಹೊರಲು ಕಾಲಿನ ಗೆಜ್ಜೆ ಸದ್ದು ನೀ ಇಡುವ ಹೆಜ್ಜೆಯಲ್ಲಿ ಕುಣಿವೆ ನಾನು ಪ್ರತಿದಿನವು ನಿನ್ನ ನಗುವಿನಲ್ಲಿ  ಕೂಸುಮರಿ ಮಾಡಿ ನಿನ್ನ ನಾನು ಕುಣಿಸುವೆ ಚಂದ್ರನನ್ನು ತೋರಿ ನಿನ್ನ ನಾನು ನಗಿಸುವೆ  ಮುದ್ದು ನಗುವಿನಲ್ಲಿ ನೋವನ್ನು ಮರೆಯುವೆ ನಿನ್ನ ಜೊತೆ ಆಡಿ ಹರುಷವನ್ನು ಪಡೆಯುವೆ ನೀನು ತಾನೇ ನನ್ನ ಪ್ರೀತಿ ಯುಗವು ನೀನು ನಕ್ಕರೆ ಅದುವೇ ಈ ಜಗದ ಗೆಲುವು  ಬಾರೆ ಬಾರೆ ನನ್ನ ಒಲವ ಚಿನ್ನಮ್ಮ ನೀನು ತಾನೇ ನನ್ನ ಮುದ್ದು ಕಂದಮ್ಮ ಓಡಿ ಓಡಿ ಬಾರೆ ನನ್ನ ಪ್ರೀತಿ ಗುಂಡಮ್ಮ  ನಾನು ತೋರಿಸುವೆನು  ನಿನಗೆ ಗುಮ್ಮಾ ********ರಚನೆ********** ಡಾ.ಚಂದ್ರಶೇಖರ್ ಸಿ .ಹೆಚ್

ಜ್ಞಾನಯೋಗಿಗೆ ನಮನ

Image
  ಓ ಜ್ಞಾನ ಯೋಗಿ ಕರೆದೆ ಬೆಳಕನ್ನು ಕೂಗಿ ಬದುಕು ಒಂದು ಸುಂದರ ಹಸಿವಿನ ಮಾಗಿ ಜೀವನದ ಪಾಠ ನಮ್ಮಯ್ಯ ಗೆಲುವಿನ ಓಟ ಸಂಸ್ಕಾರವಿಲ್ಲದ ಜೀವನ ದುಷ್ಟರಕೂಟ ಜೀವನದಿ ಭವ್ಯ ಬೆಳಕು ಮೂರು ಅರಿತು ಬಾಳು ಬದುಕು ಶಾಂತಿಯ ಸೂರು ಜ್ಞಾನವೇ ನಮ್ಮ ಮನಸ್ಸಿನ ಚಿನ್ನದ ತೇರು ಸಿದ್ದೇಶ್ವರರ ಮಾತು ನೂರು ಜ್ಞಾನದ ಬೆಳಕು ಜೋರು *************ರಚನೆ*************            ಡಾ. ಚಂದ್ರಶೇಖರ್ ಸಿ.ಹೆಚ್  *

ಸಂಗೀತ ಗುರುವಿಗೆ ನಮನ

Image
  ಕನ್ನಡದ ಪ್ರತಿ ಅಕ್ಷರದಲ್ಲೂ ಸಂಗೀತ ನಿಮ್ಮ ಹಾಡು ಭಾವ ಭಕ್ತಿಯ ವೇದಾಂತ ಅಂದರ ಪಾಲಿಗೆ ಬೆಳಕು ನಿಮ್ಮಿಂದ  ನೀವು ನಮ್ಮ ಸಂಗೀತದ ಗುರು ಮುಕುಂದ ಸಂಗೀತಕೆ ಯಾವ ಜಾತಿಯ ಬೇಧ ಇಲ್ಲ ಅಂಧಕಾರದ ಕತ್ತಲೆಯ ನೆನಪು ಇಲ್ಲ ಸಂಗೀತದ ಊಟ ನಾದಸ್ವರಗಳ ಪಾಠ ಏಳು ಬೀಳಿನ ಜೀವನದಿ ವಿಧಿಯಂತೆ ಆಟ ಪುಟ್ಟರಾಜ ಗವಾಯಿ ನೀವು ನಮ್ಮ ಸಂಗೀತದ ಕಿರೀಟ *************ರಚನೆ*************            ಡಾ. ಚಂದ್ರಶೇಖರ್ ಸಿ.ಹೆಚ್ 

ಪೂಜ್ಯರಿಗೆ ನಮನ

Image
ಬಡವರ ಪಾಲಿನ ಬಂದು ನೀನಯ್ಯ ಜ್ಞಾನ ದಾಹ ತಣಿಸಿದ ದೈವ ನೀನಯ್ಯ ಜಾತಿ ಭೇದ ಮರೆತು ಸಲುಹಿದ ತಂದೆ ನೀನಯ್ಯ ಹಸಿದ ಹೊಟ್ಟೆಗೆ ತುತ್ತು  ನೀಡಿದ ದೇವರು ನೀನಯ್ಯ ಜಾತಿಯ ಮರೆತು ನೀತಿಯ ಮೇರೆದೆ ಎಲ್ಲರನ್ನು ನನ್ನವರೆಂದು ತಿಳಿದೆ ಜೋಳಿಗೆ ಹಿಡಿದು ಭಿಕ್ಷೆ ಬೇಡಿದೆ ಜ್ಞಾನದ, ಅನ್ನದ ಹಸಿವಿಗೆ ತೃಪ್ತಿ ನೀಡಿದೆ ನಮ್ಮಯ ದೇವರು ಆ ಶಿವನೇ ನೀನಯ್ಯ *************ರಚನೆ*************            ಡಾ. ಚಂದ್ರಶೇಖರ್ ಸಿ.ಹೆಚ್ 

ಚುಟುಕು ಕವನ-31

Image
                              🌹ಜಡೆ🌹 ನೀಲಾ ಜಡೆಯ ನಾಗವೇಣಿ ನಿನ್ನ ಮೊಗವು ಕೋಮಲ ಮೂತಿಯಲಿ ಸಿಟ್ಟು ನೋಡಿ ನನ್ನ ಮನಸು  ಚಂಚಲ ಕಣ್ಣ ನೋಟ ಬಾಣದಾಗೆ ನನ್ನ ಚುಚ್ಚಿ ಇಂದು ಕೊಂದಿದೆ ಮೈಮಾಟ ನನ್ನಲಿ ಇಂದು ನೂರು ಕನಸು ತಂದಿದೆ        🌹 ನೀಲವೇಣಿ 🌹 ಪ್ರೀತಿ ಪರದೆ ಮೇಲೆ ನೀಲವೇಣಿ ನಿನ್ನಾ ನೋಡಲು ಕಾತುರ ಕಾದು ಕಾದು ಕೂತ ನನಗೆ ದಾಟಿದ ಆಗೆ ಆಯ್ತು ಸರೋವರ ಬಯಸಿ ಬಂದ ನನಗೆ ನೀನು ಕೊಟ್ಟೆ  ತಾಮ್ರದ ಚೆಂಬು ಸುತ್ತಿ ಸುತ್ತಿ ಕೊನೆಗೆ ನಾನು ಇಡಿದ ಆಗೆ ಆಯ್ತು ಬಿದಿರು ಬಂಬು                  🌹 ಕೂದಲು 🌹 ನಲ್ಲೆ ನಿನ್ನ ಮುಂಗುರುಳ ಕೂದಲು ನೋಡಿ ನಾ ಸೋತೆ ಏಕೋ ಏನೋ ತಿಳಿಯದೇನೆ ನನ್ನ ನಾ ದಿನವೂ ಮರೆತೇ ಏಳ ಹೊರಟೆ ಹುಚ್ಚು ಪ್ರೀತಿಯನ್ನ ನಿನಗೆ ಕೊಟ್ಟೆ  ಕೈಯನ್ನು ಏಕೆ ಮತ್ತೆ ನೀನು ಕೊನೆಗೆ ********ರಚನೆ********* ಡಾ.ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ -30

Image
          🌹 ಮಳೆ 🌹 ಕಂಬನಿಯಲಿ ಕಣ್ಣ ಹನಿಯ ಮಳೆ ಬದುಕಿನಲಿ ಏಕೋ ಇಲ್ಲ ಜೀವ ಕಳೆ ಭಾವದ ಭಕ್ತಿಗೆ ಮೂಡಲಿಲ್ಲ ಬೆಳೆ ಬರಡಾದ ಜೀವ  ಹಸಿರಿಲ್ಲದ ಇಳೆ          🌹 ವರ್ಷ 🌹 ಉರುಳಿದವು ಬಾಳಿನಲ್ಲಿ ವರ್ಷ ಮೂಡಲಿಲ್ಲ ಏಕೊಪ್ರೀತಿ ಹರ್ಷ ಬದುಕಿಗೆ ಬೇಕು ಪ್ರೇಮದ ಸ್ಪರ್ಷ ಬಾಳು ಒಂದು ಉಲ್ಲಾಸದ ಉತ್ಕರ್ಷ        🌹 ಸೋನೆ 🌹 ಹನಿ ಹನಿ ಮಳೆ ಹನಿ ಚಿಟಪಟ ಮಳೆ ಹನಿ ಬರಡು ನೆಲದಲ್ಲಿ ಸೋನೆ ಮಳೆ ಹನಿ ಹಸಿರಿನ ಮೇಲೆ ಕುಣಿದಿಹ ಪ್ರೀತಿ ಇಬ್ಬನಿ ನವ ಹೊಸ ವರ್ಷಕ್ಕೆ ಮಿಡಿದ ಬಾಷ್ಪನೀ    *******ರಚನೆ**********  ಡಾ. ಚಂದ್ರಶೇಖರ  ಸಿ ಹೆಚ್

ಚುಟುಕು ಕವನ -29

Image
  🌹 ಗಂಡ 🌹 ನನಗೆ ಒಬ್ಬ ಗಂಡ ಅವನ ಹೆಸರು ಗುಂಡ ಅವನು ಬಲು ಬಂಡ ಮಾಡೋ ಕೆಲಸಾ ದಂಡ     🌹 ಜೊತೆಗಾರ 🌹 ನನ್ನ ಪ್ರೀತಿಗೆ ಇವ ಜೊತೆಗಾರ ನನಗೆ ಇವನೇ ಸಾಹುಕಾರ ನೋಡಕೆ ಸುಂದರ ಪೊರ ಇವನೇ ನನ್ನ ಚೋರ ಚಿತ್ತ ಚೋರ        🌹ಇನಿಯ🌹 ನನ್ನವಳಿಗೆ ನಾನು ಇನಿಯ ಕಾಣೆ ನಾನು ಕಣ್ಣ ಹನಿಯ ಪ್ರೀತಿ ಪ್ರೇಮದ ಸಿಹಿಯಾ ಬಲ್ಲವನೇ ಬಲ್ಲ ಹರೆಯದ ಖುಷಿಯ *********ರಚನೆ******** ಡಾ.ಚಂದ್ರಶೇಖರ್ ಸಿ. ಹೆಚ್ 

ಚುಟುಕು ಕವನ-27

Image
  🌹ಆರಂಭ 🌹 ಬದುಕಿನ ಬಂಡಿಯ ಆರಂಭ ಸುಖ ದುಃಖಗಳ ಪ್ರಾರಂಭ ಪ್ರೀತಿ ಪ್ರೇಮಗಳ ಪ್ರತಿಬಿಂಬ ಜೀವನ ಖುಷಿಯ ನಗು ಕಂಬ  🌹ನೂರು ಆಸೆ🌹 ನೂರು ಆಸೆಗಳ ಈ ಜೀವನ ಬದುಕಿನ ನಡೆಯೇ ಪಾವನ ಸಣ್ಣ ಕಣ್ಣ ಹನಿಯ ಆರಂಭ ನೋವು ನಲಿವಿನ ಪ್ರತಿ ಬಿಂಬ 🌹ತುಂಟ ನಗು 🌹 ತುಂಟ ನೋಟದಿ ನಗು ಆರಂಭ ನಕ್ಕು ಕರೆದಳು ನನ್ನಯ ರಂಭಾ ಕನಸಲಿ ಕಂಡೆ ನಾ ಪ್ರತಿಬಿಂಬ ಮೂಗು ಮುರಿದಳು ತೋರಿ ಜಂಭ  *********ರಚನೆ*********** ಡಾ.ಚಂದ್ರಶೇಖರ್ ಸಿ ಹೆಚ್