ಚುಟುಕು ಕವನ-42




      🌹ಕಾಗದ🌹

ಕಾಗದದ ಹಾಳೆಯಲಿ ಬರೆದಿಹೇನು ಕಥೆಯ

ನೋವುಂಡ ಮನಸಿನ ಭಾವನೆಗಳ ವ್ಯೆಥೆಯ

ಪ್ರೀತಿಯಾ ಕನಸುಗಳು ಚಿಗುರಿದ ಹೊಸ ಬಗೆಯ

ಕಣ್ಣೀರ ಹನಿಯಲಿ ಹೊತ್ತಿ ಉರಿದ ಚೀತೆಯ


          🌹 ಪತ್ರ 🌹

ಪ್ರೀತಿಯಾ ಪತ್ರದಲ್ಲಿ ನಿನ್ನಯ ಚಿತ್ರ

ಅಳಿಸದ ನೋವುಗಳ ಸುಳಿಯ ತಂತ್ರ

ಕಂಡ ಬದುಕಿನ ಬಣ್ಣಗಳವಿನಿಮಯ

ಕಾಣದ ಆಸೆಗಳ ನೋವಿನ ಸವಿಮಯ

        

         🌹 ಓಲೆ 🌹

ಬರೆದೇನು ನಾನು ಕಣ್ಣಿರಲಿ ಓಲೆಯ

ಗುರುತೇ ಸಿಗದ ಬಣ್ಣದ ಕಾಗದದ ಹಾಳೆಯ

ನಿನ್ನಯ ಕೆಂಪು ತುಟಿಯ ಒತ್ತಿದ ಚಿತ್ರ

ಜೀವನದ ತಿರುವುಗಳು ಕಾಲಿ ಕಾಗದದ ಪತ್ರ


**********ರಚನೆ********

ಡಾ.ಚಂದ್ರಶೇಖರ್. ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35