ಸಂತೋಷವಾಗಿರಲು ಪ್ರಯತ್ನಿಸೋಣ



ಸಂತೋಷ ಎಂದರೇನು???

ನಾವು ಗೆಳೆಯರು , ಮನೆಯವರು ಮತ್ತು ಸಂಬಂಧಿಕರ ಬಳಿ ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ ಅವರು ನಾವು ಎಲ್ಲರೂ ಸಂತೋಷದಿಂದಿದ್ದೇವೆ ಅಥವಾ ಸಮಸ್ಯೆ ಇದ್ದಲ್ಲಿ ನಾವು ದುಃಖದಿಂದ ಇದ್ದೇವೆ ಎಂದು ಹೇಳಬಹುದು. ಹಾಗಿದ್ದರೆ ಸಂತೋಷ ಎಂದರೆ ನಮ್ಮ ಮನಸ್ಸು ಉಲ್ಲಾಸದಿಂದ ಉತ್ಸಾಹದಿಂದ ದೇಹವು ಯಾವುದೇ ಅನಾರೋಗ್ಯವಿಲ್ಲದೆ ಶಕ್ತಿಯುತವಾಗಿ ಕೂಡಿರುವುದು ಎಂದು ತಿಳಿಯಬಹುದು ಮತ್ತು ನಾವು ಅಂದುಕೊಂಡ ಎಲ್ಲಾ ಕೆಲಸಗಳು ಕೈಗೂಡಿ ಎಲ್ಲವೂ ಗೆಲುವಿನಿಂದ ಕೂಡಿದ್ದರೆ ಅದನ್ನು ಸಂತೋಷ ಅನ್ನಬಹುದು. ಅದೇ ದುಃಖ ಎಂದರೆ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ರೋಗರುಜಿನಗಳಿಂದ  ಬಳಲುತ್ತಿರುವುದು ಎಂದು ತಿಳಿಯಬಹುದು ಮತ್ತು ನಾವು ಮಾಡುವ ಕೆಲಸಗಳಲ್ಲಿ ಸರಿಯಾದ ರೀತಿ ಗೆಲುವು ಸಿಗದಿದ್ದಲ್ಲಿ ನಮ್ಮ ಮಾನಸಿಕ ಭಾವನೆಗಳು ಸಿಟ್ಟು, ಕೋಪ, ನಿರುತ್ಸಾಹ ಮತ್ತು ದುಃಖದಿಂದ ಕೂಡಿರುವುದು ಎಂದು ತಿಳಿಯಬಹುದು.

ಇದೇ ರೀತಿ ನಮ್ಮ ದೈನಂದಿನ ಸಂತೋಷಗಳು ನಮ್ಮ ಭಾವನೆಗಳ ಮೇಲೆ ನಿಂತಿರುತ್ತವೆ. ನಮ್ಮ ಭಾವನೆಗಳು ಎರಡು ವಿಧದಲ್ಲಿ ನಾವು ತಿಳಿಯಬಹುದು. 

1. ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳು. 

2. ನಕಾರಾತ್ಮಕ ಭಾವನೆಗಳು. 

ಈ ಭಾವನೆಗಳು ಮನುಷ್ಯನಲ್ಲಿ ಬಂದಾಗ ಮನುಷ್ಯನ ಮನಸ್ಸು ತನ್ನಷ್ಟಕ್ಕೆ ತಕ್ಕಂತೆ ಮಾತನಾಡಲು ಶುರುಮಾಡುತ್ತದೆ. ಅಂದರೆ ಮನಸ್ಸು ಚಂಚಲವಾಗುತ್ತದೆ ಹಾಗೂ ಭಾವನೆಗಳು ನಮ್ಮ ಮೆದುಳಿನ ಮೇಲೆ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ದೇಹದಲ್ಲಿರುವ ಹಾರ್ಮೋನ್ ಗಳ ವ್ಯತ್ಯಾಸದಿಂದ ನಾವು ನಮ್ಮ ಭಾವನೆಗಳಿಗೆ ಅನುಸಾರವಾಗಿ ಸಂತೋಷವಾಗಿರುವುದು ಅಥವಾ ದುಃಖಿತರಾಗುವುದು ಸರ್ವೇಸಾಮಾನ್ಯ. ನಮ್ಮ ಭಾವನೆಗಳು ಪ್ರತಿ ಕ್ಷಣವು ಬದಲಾಗುತ್ತಿರುತ್ತದೆ ಹಾಗೂ ಪ್ರತಿದಿನವೂ ಬದಲಾಗುತ್ತವೆ. ಇದರಿಂದ ನಾವು ಪ್ರತಿದಿನ ಹಾಗೂ ಪ್ರತಿವಾರ ಎಷ್ಟು ಪರ್ಸೆಂಟ್ ಖುಷಿಯಾಗಿರುತ್ತೇವೆ ಎಂದು ತಿಳಿಯಬಹುದು. ನಾವು ಸಂತೋಷವಾಗಿರಲು ನಮ್ಮ ದೇಹದ ಆರೋಗ್ಯ, ಆಹಾರ, ಆಸ್ತಿ ಅಂತಸ್ತು, ಮುದ್ದಾದ ಹೆಂಡತಿ, ಸರ್ಕಾರಿ ಹುದ್ದೆ, ವಿಧಿ ಮತ್ತು ಅದೃಷ್ಟ ಇವುಗಳು  ಸಂತೋಷವಾಗಿರಲು ಸಹಾಯ ಮಾಡುತ್ತವೆಯೆ. ಹಾಗಿದ್ದರೆ ಈ ಪ್ರಪಂಚದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ, ಆಗ ನಮ್ಮ ಭಾವನೆಗಳು ನಮ್ಮನ್ನು  ಸಂತೋಷ ಅಥವಾ ದುಃಖ ಯಾವುದನ್ನು ಬೇಕಾದರೂ ನಮಗೆ ನೀಡಬಹುದು. ಹೀಗಿದ್ದಾಗ ನಾವು ಸಂತೋಷವಾಗಿರುವುದು ಹೇಗೆ ನಮ್ಮ ಅಕ್ಕ ಪಕ್ಕ ನಡೆಯುವ ಆಗುಹೋಗುಗಳು ಹಾಗೂ ಸಂಬಂಧಗಳು ನಮ್ಮನ್ನು ಸಂತೋಷವಾಗಿರಲು ನಿಜವಾಗಿಯೂ ಬಿಡುತ್ತವೆಯೆ. ನಮ್ಮ ಮನಸ್ಸು ಯಾವಾಗಲೂ ಯಾವುದೇ ವಸ್ತುಗಳನ್ನು ನೋಡಿದರೆ ಸಾಕು ತನಿಷ್ಟಕ್ಕೆ ತಾನು ಮಾತನಾಡಲು ಶುರುಮಾಡುತ್ತದೆ. ಇಂತಹ ಮನಸ್ಸು ಉತ್ಪತ್ತಿ ಮಾಡುವ ಭಾವನೆಗಳ ನಿಯಂತ್ರಣ ಸಾಧ್ಯವೇ ಸಾಧ್ಯವಾದರೆ ನಾವು ಸಂತೋಷದಿಂದ ಇರಲು ಸಾಧ್ಯವೇ. ನಾವು ಸಂತೋಷದಿಂದಿರಲು ಏನೇನು ಮಾಡಬಹುದು ಎಂದು ತಿಳಿಯಲು ಪ್ರಯತ್ನಿಸೋಣವೇ. 


***********ಲೇಖಕರು *******

 ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಹೆತ್ತು ಹೊತ್ತ ತಾಯಿ