ನೋವು ತುಂಬಿ

 



ಭಾವದಲ್ಲಿ ನೋವು ತುಂಬಿ 

ಹಾಡನ್ನು ಹೇಗೆ ಹಾಡಲಿ

ಕಣ್ಣ ಹನಿಯ ಭೂಮಿ ತಾಗಿ 

ಕೊಟ್ಟ ನೋವಾ ಹೇಗೆ ಮರೆಯಲಿ 


ಹೃದಯ ವೀಣೆ ಮಿಡಿಯುತ್ತಿದೆ 

ನಿನ್ನ ಪ್ರೀತಿ ನೆನಪಲಿ 

ರಕ್ತವೆಕೋ ಕುದಿಯುತ್ತಿದೆ 

ನಿನ್ನ ಮೋಸದ ಬಲೆಯಲಿ 


ಹುಡುಕಿ ಹುಡುಕಿ ಸೋತೆ 

ಕನಸ್ಸುಗಳ ನೆನಪನು 

ಕದವ ತಟ್ಟಿ ಕೂಗಿ ಕರೆದೆ 

ತಿರುಗಿ ಏಕೋ ಮತ್ತೆ ಬಾರದೇ 


ಶೋಕವೇಕೋ ತುಂಬಿದೆ 

ಭಾವನೆಗಳ ಬಯಕೆ ಗೂಡಲಿ 

ನೋವು ಏಕೋ ಕಾಡಿದೆ 

ಈ ಹುಣ್ಣು ಹಣ್ಣಿನ ದೇಹದಲಿ 


ಚಿಗುರಿತೆಗೆ ಪ್ರೀತೀ ಕಡಲು 

ಬದುಕು ಬಿರಿವ ಸಮುದ್ರದಿ 

ಜೀವನವ ನಡೆಸಲೆಗೆ ನಾನು

ನಾವಿಕನಿಲ್ಲದ ಹಡಗಲಿ 


ಮನವು ಮೂಕವಾಗಿ ಆಸೆಗಳ 

ಗೂಡಿಗೆ ಬೆಂಕಿ ಬಿದ್ದಿದೆ 

ಹೊತ್ತ ಕನಸುಗಳು ಸುಟ್ಟಿದೆ 

ತಂಪಲೆಗೆ ನಾನು ಹೆದ್ದಲಿ 

*********ರಚನೆ*********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ