ಬಾರ್ ನನ್ನ ಗೆಳೆಯ

 


ಓಣಿಯಲ್ಲಿ ಹೋಗ್ತಾ ಇದ್ದೆ ಹಾಗೆ ನಡ್ಕೊಂಡು 

ಪೋರಿಯೊಬ್ಬಳು ಬರ್ತಾ ಇದ್ಲು ಮಲ್ಲಿಗೆ ಮುಡ್ಕೊಂಡು 

ನನ್ನ ನೋಡಿ ಇಟ್ಟೆಬಿಟ್ಲು  ಮನಸ್ಸಿಗೆ  ಗುನ್ನಾ 

ಹಾಕಿಬಿಟ್ಲು ನನ್ನ ಖಾಲಿ ಹೃದಯಕ್ಕೆ ಕನ್ನಾ 


ಕಣ್ಣ ನೋಟಕ್ಕೆ ಹದಿರಿ ಹೋಯಿತು

 ಯಾಕೋ ಈ ಹೃದಯ 

ಸುಮ್ನೆ ಒಮ್ಮೆ ಹೇಳಿ ಬಿಡ್ಲಾ, 

ಲವ್ ಯು ಬಾರೆ ನೀ ಸನಿಹ 


ಪ್ರೀತಿಯಲ್ಲಿ ಮುಳುಗಿದ ಮೇಲೆ  ಬಾರ್ ನನ್ನ ಗೆಳೆಯ 

ವೋಡ್ಕಾ  ಹೊಡ್ಕೊಂಡ್ ನಶೆಯಲ್ಲಿ ತೇಲುತ್ತಿದ್ದೆ ಬಾರ್ ನನ್ನ ಇನಿಯ 

ಎಣ್ಣೆ ನನ್ನೊಳಗೆ ಹೋದ ಮೇಲೆ ಮರೆತೆ ಈ ಪ್ರಪಂಚ 

ಹೊಡ್ದಂಗ್ ಹೊಡ್ದಂಗ್ ಏರ್ತಾಯಿತ್ತು ಕಿಕ್ಕು ನನ್ನೊಳಗೆ ಕೊಂಚ 


ಏರಿಯಾದಲ್ಲಿ ಹುಡುಕುತ ಹೊರಟೆ ಎಣ್ಣೆಯ ಬಾರ್ 

ಸ್ವಲ್ಪ ಕುಡಿದು ನೆಕ್ಕಿ ಬಿಟ್ಟೆ ಮೀನಿನ ಸಾರು 

ಬಾಟಲ್ ಏಕೋ ಬಿಡ್ತಾ ಇಲ್ಲಾ ನನ್ನಯ  ಕೈಯ 

ಮಲ್ಲಿಗೆ ಮುಡಿದ ಹುಡುಗಿ ಟಚ್ ಮಾಡಿದ್ಲು ಮೈಯ 


ನಶೆಯ ಒಳಗೆ ಮುಳುಗಿ ಹೋದೆನು ನಾನು 

ಎಣ್ಣೆ ದೇವರು ಆಡಿಸಿದಂಗೆ ಆಡಬೇಕು ಮತ್ತೆ ಇನ್ನೇನು 

ನಡೆಯೋಕೆ  ಸುಮ್ಮನೆ ಆಗ್ತಾ ಇಲ್ಲ ಬಾರೆ ನನ್ನವಳೇ 

ತಲುಪಿಸು ನನ್ನ ಮನೆಯ ಗಂಟ ಕೈಯ  ಹಿಡಿದವಳೇ


ಭೂಮಿ ಏಕೋ ತಿರುಗ್ತಾ ಐತೆ

ದಾರಿ ಏಕೋ ನಡುಗ್ತಾ ಐತೆ 

ಬಾಡಿ ಬ್ಯಾಲೆನ್ಸ್ ತಪ್ಪೋಗೈತೆ 

ಇಲ್ಲಿ ಹುಡುಕಿದ್ರೂ ಸಿಕ್ತಾ ಇಲ್ಲ ಆ ನನ್ನ ಪ್ಯಾಲೇಸ್

ನಡೆಯೋಕೆ ಸುಮ್ಮನೆ ಆಗ್ತಾ ಇಲ್ಲ ಬಾರೆ ನನ್ನವಳೇ 

ತಲುಪಿಸು ನನ್ನ ಮನೆಯ ಗಂಟ ಕೈಯ  ಹಿಡಿದವಳೇ


ಓಣಿಯಲ್ಲಿ ಹೋಗ್ತಾ ಇದ್ದೆ ಹಾಗೆ ನಡ್ಕೊಂಡು 

ಪೋರಿಯೊಬ್ಬಳು ಬರ್ತಾ ಇದ್ಲು ಮಲ್ಲಿಗೆ ಮುಡ್ಕೊಂಡು 

ಕಣ್ಣ ನೋಟಕ್ಕೆ ಹದಿರಿ ಹೋಯಿತು ಯಾಕೋ ಈ ಹೃದಯ 

ಸುಮ್ನೆ ಒಮ್ಮೆ ಹೇಳಿ ಬಿಡ್ಲಾ, ಲವ್ ಯು ಬಾರೆ ನೀ ಸನಿಹ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ