ಹಣತೆ ಆಳುತಿದೆ

 


ಬೆಳಕು ನೀಡುವ ಮುನ್ನವೇ ಒತ್ತಿದ ಹಣತೆ ಹಾರಿದೆ 

ಹೊತ್ತ ಕನಸುಗಳ ಕತ್ತಲೆ ಮಸಣಕ್ಕೆ ಹಾಗೆ ತಳ್ಳಿದೆ 


ಮತ್ತೆ ಹಣತೆ ಬೆಳಗಲು ಯಾರು ಹಚ್ಚಬೇಕು ಬೆಂಕಿ 

ಕೋಣೆ ಒಳಗಡೆ ಮೌನದ ಸೂತಕದ ಛಾಯೆ 


ಅವಳ ನೆನೆದು ಕಣ್ಣೀರು ಸಮುದ್ರದಿ ಬತ್ತಿದೆ 

ಹೃದಯದ ಒಳಗೆ ರಕ್ತ ಕೆಂಪಾಗಿ ಕುದಿದೀದೆ 


ಮನಕೆ ಏಕೋ ಕರ್ಮೋಡದ ಸಿಡಿಲು ಬಡಿದಿದೆ 

ಮಳೆ ಬಂದೀತೆ ಮಿಂಚಿನ ಸಂಚಿನ ಸೆಳೆತಕೆ 


ಸುನಾಮಿ ಎದ್ದಿತೆ ಅಲೆಗಳ ಸಿಟ್ಟಿನ ಒಡೆತಕೆ 

ದಡವು ಕೊಚ್ಚಿತೆ ನೀರಿನ ರಭಸದ ಆ ಸೆಳೆತಕೇ 


ಯಾರೋ ಗೀಚಿದ ಹಣೆಬರಹಕ್ಕೆ ನೋವು ಬಂದಿದೆ 

ತನ್ನನ್ನು ತಾನೇ ಶಪಿಸಿ ವಿದೀಬರಹ ಅಳುತಿದೆ 


ಇಬ್ಬನಿಯ ಹನಿ ಮುತ್ತು ಕೆದಕಿದೆ ಈ ಜಗವ 

ಕಾಣದಾ ಬೆಳಕೊಂದು ಈಣುಕಿ ನೋಡಿದೆ ಈ ಯುಗವ 


**********ರಚನೆ********** 

ಡಾ. ಚಂದ್ರಶೇಖರ್ ಚನ್ನಾ ಪುರ ಹಾಲಪ್ಪ

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple