ಪ್ರೇಮೋತ್ಸವ- ಭಾವಗೀತೆ ಸಂಕಲನ
ಭಾವ ಗೀತೆ ಸಂಕಲನ
ಲೇಖಕರ ನುಡಿ
ಪ್ರೇಮೋತ್ಸವ
ನಾನು ಕವಿಯಾಗಿ ಕೆಲವು ಪುಸ್ತಕಗಳನ್ನು ಹೊರ ತಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ಜಿಲ್ಲಾಧ್ಯಕ್ಷರಾಗಿದ್ದ ಸೂರಿ ಶ್ರೀನಿವಾಸ್ ಅವರು ಆಯೋಜಿಸಿದ್ದ ಕವಿ ಸಮ್ಮೇಳನ, ಖಾಂಡ್ಯದಲ್ಲಿ ನಡೆಯಿತು . ಆ ಸಮ್ಮೇಳನದಲ್ಲಿ ಪಾಲ್ಗೊಂಡು. ಕವಿ ದುಂಡಿರಾಜ್ ಮತ್ತು ಸವಿತಾ ನಾಗಭೂಷಣ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಕವಿಯಾದ ಕಾವೆಂ .ಶ್ರೀನಿವಾಸ್ ಮೂರ್ತಿ ಅವರ ನುಡಿಗಳನ್ನು ಕೇಳಿ ಆನಂದಿಸಿ ಹಾಗೆಯೇ ಕಾವೆಂ ಶ್ರೀನಿವಾಸ್ ಮೂರ್ತಿ ಅವರು ತಿಳಿಸಿದ ಭಾವಗೀತೆಗಳನ್ನು ಹೇಗೆ ರಚಿಸಬಹುದು ಎಂಬ ಬೋಧನೆ ಮತ್ತು ಅವರು ಗೀತೆ ರಚನೆಯ ಬಗ್ಗೆ ಬರೆದಿದ್ದ ಪುಸ್ತಕ ಮತ್ತು ಅವರು ಬರೆದ ಭಾವಗೀತೆಗಳ ಪುಸ್ತಕ ಹಾಗೂ ಆ ಪುಸ್ತಕದ ಹಾಡುಗಳು ಯೂಟ್ಯೂಬಲ್ಲಿ ಬಿಡುಗಡೆಗೊಂಡು ಅವುಗಳನ್ನು ಕೇಳಿ ಸವಿದು ಮತ್ತು ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಕೆ ಎಸ್ ನಿಸಾರ್ ಅಹ್ಮದ್ ಅವರ ಭಾವಗೀತೆ ಪುಸ್ತಕವನ್ನು ಓದಿ ನಾನು ಕೂಡ ಇವೆಲ್ಲಾ ಪುಸ್ತಕಗಳಿಂದ ಉತ್ತೇಜಿತನಾಗಿ ನಾನು ಕೂಡ ಭಾವಗೀತೆಗಳನ್ನು ರಚಿಸಲು ಶುರು ಮಾಡಿ ಸುಮಾರು 72 ಭಾವಗೀತೆಗಳನ್ನು ಬರೆದಿದ್ದೇನೆ ಆ ಗೀತೆಗಳನ್ನು ಹಾಡಲು ಮತ್ತು ಸಂಗೀತ ಸಂಯೋಜನೆ ಮಾಡಲು ಯಾರನ್ನು ಸಂಪರ್ಕಿಸುವುದು ಎಂದು ತಿಳಿಯದಾಗಿ ನನ್ನ ಗೆಳೆಯರ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟವರನ್ನು ನಾನು ಬರೆದ ಗೀತೆಗಳನ್ನು ಓದಲು ಕೇಳಿಕೊಂಡು ಆ ಗೀತೆಗಳು ಭಾವಗೀತೆಗಳಾಗುತ್ತವೆಯೇ ರಾಗ ಸಂಯೋಜನೆ ಮಾಡಿ ಸಂಗೀತವನ್ನು ನುಡಿಸಿದರೆ ಎಂದು ಓದಿದವರನ್ನು ಕೇಳಿಕೊಂಡಾಗ ಖಂಡಿತ ಉತ್ತಮವಾಗಿವೆ ಎಂದು ಹೇಳಿದಾಗ ತುಂಬಾ ಸಂತೋಷವಾಯಿತು. ಹಾಡುಗಳನ್ನು ಹಾಡಲು ಯಾರನ್ನು ಕೇಳಲಿ ಎಂದು ತಿಳಿಯದಾದಾಗ ಭಾವಗೀತೆಗಳ ಪುಸ್ತಕಗಳನ್ನು ಮಾಡಿ ಹೊರತಂದು ನೋಡೋಣ ಯಾರಾದರೂ ಆಸಕ್ತರು ರಾಗ ಸಂಯೋಜನೆ ಮಾಡಿ ಹಾಡುವವರು ಈ ಗೀತೆಗಳಿಗೆ ನನ್ನನ್ನು ಸಂಪರ್ಕಿಸಬಹುದು ಎಂದು ತಿಳಿಸಿ. ಈ ಭಾವಗೀತೆಯ ಪುಸ್ತಕಕ್ಕೆ ಪ್ರೇಮೋತ್ಸವ ಎಂದು ಹೆಸರಿಟ್ಟು ಆ ಭಾವಗೀತೆಯ ಸಂಕಲನವನ್ನು ನಿಮ್ಮ ಮುಂದೆ ತರಲು ಸಜ್ಜುಗೊಳಿಸಿದ್ದೇನೆ.
ನಾವು ಬರೆದ ಸಾಹಿತ್ಯಗಳಿಗೆ ಛಂದಸ್ಸು ಹಾಕಿದರೆ ಉತ್ತಮ ಸಾಹಿತ್ಯವಾಗುತ್ತದೆ. ಆದರೆ ಹಾಡುಗಳನ್ನು ಬರೆಯುವವರು ಯಾರು ಇತ್ತೀಚಿಗೆ ಛಂದಸ್ಸನ್ನು ಉಪಯೋಗಿಸುವುದು ಕಡಿಮೆ. ರಾಗ ಸಂಯೋಜನೆ ಮಾಡಿ ಹಾಡಿದರೆ ಉತ್ತಮ ಗೀತೆಗಳಾಗುತ್ತವೆ ಎಂದು ತಿಳಿದಿದ್ದೇನೆ.
ಈ ಪುಸ್ತಕವನ್ನು ಓದಿದ ಮೇಲೆ ಯಾವುದಾದರೂ ಗೀತೆಗಳು ಇಷ್ಟವಾಗಿದ್ದಲ್ಲಿ ರಾಗ ಸಂಯೋಜನೆ ಮಾಡಿ ಹಾಡುವವರು ನನ್ನನ್ನು ಸಂಪರ್ಕಿಸಬಹುದು ಇಂದು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿ ಬರೆದ ಎಲ್ಲಾ ಗೀತೆಗಳು ಕವಿಗಳ ಗೀತ ರಚನೆಯನ್ನು ಕೇಳಿ ಹಾಗೂ ಅವರು ಬರೆದ ಪುಸ್ತಕಗಳನ್ನು ಓದಿ ನನ್ನ ಭಾವನೆಗಳಿಗೆ ಬಣ್ಣ ಕೊಟ್ಟು ಬರೆದ ಭಾವಗೀತೆಗಳಾಗಿವೆ ಎಂದು ಹೇಳಲು ಇಚ್ಚಿಸುತ್ತಿದ್ದೇನೆ.
ಗೀತೆಯ ಬರೆಯಲು ಓದಿದೆ ಕವಿತೆ
ಯೋಚನೆ ಮಾಡುತ ಪದಗಳ ಕಲತೆ
ಭಾವನೆಗಳಿಗೆ ಬಣ್ಣ ಕೊಟ್ಟು ಬರೆದೆ
ಕನಸುಗಳ ಕೂಡಿ ಗುಣಿಸಿ ಕಳೆದೆ
ಪ್ರೇಮೋತ್ಸವ ಎಂಬ ಪುಸ್ತಕ ಹೊರ ತಂದೆ
ರಾಗ ಸಂಯೋಜಿಸಿ ಹಾಡಿ ಕೇಳುವೆ ಎಂದೇ
ಈ ಭಾವಗೀತೆ ಸಂಕಲನ ಬರೆಯಲು ಸ್ಪೂರ್ತಿಯಾದ ಎಲ್ಲಾ ಕವಿಗಳಿಗೆ ಹಾಗೂ ಅವರು ರಚಿಸಿದ ಭಾವಗೀತೆಗಳಿಗೆ ಹಾಗೂ ಪುಸ್ತಕಗಳಿಗೆ ಮತ್ತು ನನ್ನನ್ನು ಗುರುತಿಸಿ ಪ್ರೋತ್ಸಾಹ ನೀಡಿದ ಹೃದಯಗಳಿಗೆ ಮತ್ತು ಬೆನ್ನು ತಟ್ಟಿದ ಗುರು ಹಿರಿಯರಿಗೆ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪ್ರೇಮೋತ್ಸವ ಭಾವಗೀತೆ ಸಂಕಲನ ಜನಮನ ತಲುಪಲಿ ಎಂದು ಆ ದೇವರಲ್ಲಿ ಬೇಡುತ್ತಾ ಈ ಪುಸ್ತಕವನ್ನು ಹೊರ ತರುತ್ತಿದ್ದೇನೆ.
ಇಂತಿ ನಿಮ್ಮ ಪ್ರೀತಿಯ
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment