ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ
ಲೇಖಕರ ನುಡಿ
ವ್ಯಕ್ತಿತ್ವ ವಿಕಸನ
ನಾನು ಸಸ್ಯಹಾರಿಯಾಗಿ ಹುಟ್ಟಿ ನನ್ನ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಇದೆ ಎಂದು ತಿಳಿದು ನಾನು ಚಿಕ್ಕವನಿದ್ದಾಗ ಕೋಳಿ ಮೊಟ್ಟೆಯನ್ನು ಸೇವಿಸಿ ಮತ್ತು ನನ್ನ ಶಿಕ್ಷಣಕ್ಕಾಗಿ ನಗರದಲ್ಲಿ ವಾಸಿಸಿ ಆಹಾರವನ್ನು ನಾನೇ ಸಿದ್ಧಪಡಿಸಿ ತಿನ್ನಲು ತಯಾರಾದಾಗ ರಾತ್ರಿಯ ವೇಳೆ ಸಾಂಬಾರನ್ನು ಹೋಟೆಲ್ಗಳಲ್ಲಿ ತಂದು ತಿನ್ನುವಾಗ ಒಮ್ಮೊಮ್ಮೆ ವಾಕರಿಕೆ ಬಂದಂತಾದರೂ ಅದನ್ನೇ ತಿಂದು ಅರ್ಧ ರಾತ್ರಿಯಲ್ಲಿ ಹೊಟ್ಟೆ ಹಸಿದು ಮಲಗುವಾಗ ಆದ ಪೋಷ್ಟಕಾಂಶದ ತೊಂದರೆ. ಊಟ ಮಾಡುವ ಆಹಾರದಲ್ಲಿ ರಾಸಾಯನಿಕ ಮಿಶ್ರಿತ ಆಹಾರದಿಂದ ನಾನು ಪಿ.ಎಚ್.ಡಿ ಮಾಡುವ ಸಂದರ್ಭದಲ್ಲಿ ನನ್ನನ್ನು ಮಾನಸಿಕ ತಜ್ಞರ ಬಳಿ ಸೇರುವಂತೆ ಮಾಡಿದ ನನ್ನ ಗೆಳೆಯರು ಮತ್ತು ನನ್ನ ಶಿಕ್ಷಕರು ಅಂದಿನಿಂದಲೂ ಇದುವರೆಗೆ ರಾಸಾಯನಿಕ ಯುಕ್ತ ಆಹಾರಗಳನ್ನು ತಿಂದು ದೇಹದಲ್ಲಿ ಅನಾರೋಗ್ಯ ಕಾಡಿ ಬಳಲಿ ಸುಮಾರು 20 ವರ್ಷಗಳು ಕಳೆದು ನನ್ನ ಸ್ಕೀಜೋಫ್ರೇಣೀಯ ಖಾಯಿಲೆಗೆ ಮತ್ತು ನಿದ್ರಾಹೀನತೆಗೆ ಔಷಧಿಯನ್ನು ಪಡೆದು ಗುಳಿಗೆ ನುಂಗುತ್ತಿರುವಾಗ, ನನ್ನ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡಾಗ, ನನ್ನ ಊಟದ ಆಹಾರಗಳಲ್ಲಿ ಇತ್ತೀಚಿಗೆ ಉತ್ತಮ ಪೋಷಕಾಂಶ ದೊರಕುತ್ತಿದೆ. ನಾನು ತಿನ್ನುವ ಆಹಾರ ರಾಸಾಯನಿಕ ಮುಕ್ತವಾಗಿದೆ. ಇದರಿಂದ ನಾನು ದೇವರಿಗೆ ಧನ್ಯವಾದಗಳು ಹೇಳುತ್ತಿದ್ದೇನೆ. ನನಗೆ ತಿಳಿಯದೆ ಸಕ್ಕರೆ ಕಾಯಿಲೆ ವಕ್ಕರಿಸಿದಾಗ ಜೀವನವೇ ಬೇಡವೆನೆಸಿತು. ಯಾರದೋ ಕುತಂತ್ರದಿಂದ ನನ್ನ ಜೀವನ ಬಲಿಯಾಯಿತು ಅನಿಸಿತು. ಇನ್ನು ನಾನು ಸಕ್ಕರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದೇನೆ.
ನಾನು ಒಂದನೇ ತರಗತಿಯಿಂದ ಒಂಬತ್ತನೇ ನೇ ತರಗತಿಯವರೆಗೆ ಮನೆಯ ಊಟ ನನ್ನನ್ನು ಶಕ್ತಿಯುತನಾಗಿ ಮಾಡಿತ್ತು ತದನಂತರ ಹಾಸ್ಟೆಲ್ ಊಟ ಹೋಟೆಲ್ ಊಟ ನನ್ನನ್ನು ಶಕ್ತಿ ಹೀನನಾಗಿ ಮಾಡಿತ್ತು ಇದರಿಂದ ನಾನು ನೊಂದು ಯಾವ ಆಹಾರ ತಿನ್ನಲಿ ಎಂದು ಪುಸ್ತಕಗಳನ್ನು ಹುಡುಕಿ ಓದಿ ನಮ್ಮ ದೇಹಕ್ಕೆ ಬೇಕಾದ ಆಹಾರಗಳು, ಪೌಷ್ಟಿಕಾಂಶಗಳು ವಿಟಮಿನ್ ಗಳು, ಎಲ್ಲದರ ಬಗ್ಗೆ ತಿಳಿದು ನಮ್ಮ ಆಹಾರಗಳು, ನಮ್ಮಲ್ಲಿನ ಭಾವನೆಗಳನ್ನು, ನಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಸುತ್ತವೆ, ಎಂದು ತಿಳಿದು. ನಮ್ಮಲ್ಲಿನ ಮೆದುಳಿನ ರಚನೆ ನಮ್ಮ ದೇಹದ ಮತ್ತು ಮೆದುಳಿನ ಸಂತೋಷ ಮತ್ತು ದುಃಖಕ್ಕೆ ಕಾರಣಗಳೇನು ಎಂದು ತಿಳಿದು ವಿಷಯಗಳನ್ನು ಹುಡುಕುತ್ತಾ ಹೋದಾಗ ನಮ್ಮ ಸಂತೋಷದ ಭಾವನೆಗಳು ಹಾಗೂ ದುಃಖ ನಾವು ತಿನ್ನುವ ಆಹಾರದಿಂದ ಎಂದು ತಿಳಿದಾಗ ಉತ್ತಮ ಆಹಾರದ ಕೊರತೆ, ಪೌಷ್ಟಿಕಾಂಶಗಳ ಕೊರತೆ ನಮ್ಮಲ್ಲಿ ಮಾನಸಿಕ ಖಿನ್ನತೆ ಉಂಟುಮಾಡುತ್ತವೆ ಹಾಗೂ ಮಾನಸಿಕ ಕಾಯಿಲೆಗಳು ನಮ್ಮನ್ನು ಶಕ್ತಿ ಹೀನನಾಗಿ ಮಾಡುತ್ತವೆ ಎಂದು ತಿಳಿದಾಗ ನನ್ನ ಕಾಯಿಲೆ ನಿದ್ರಾಹೀನತೆ ಮತ್ತು ಸ್ಕೀಜೋಫ್ರೇಣಿಯ ಖಾಯಿಲೆಯಿಂದ ಗುಣಮುಖನಾಗಲು ಪ್ರಯತ್ನಿಸುತ್ತ ಹಾಗೂ ನಾನು ಸಂತೋಷವಾಗಿರಲು ಮಾಡಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ತಿಳಿದು ಓದಿ ಅದನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದೇನೆ ಅದುವೇ ಸಂತೋಷವಾಗಿರಲು ಪ್ರಯತ್ನಿಸೋಣವೇ???
ಇಂತಿ ನಿಮ್ಮ ಪ್ರೀತಿಯ
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment