ಶಿಶು ಗೀತೆ -9



🌹ಎದ್ದು ಬಿದ್ದ ಕಂದಮ್ಮ🌹

ಕಂದ ನಿನ್ನಯ ನಗುವು

ಕಾಡಿತು ಯಾಕೋ ನನ್ನೆ 

ನಿನ್ನ ನೋಟ ಮನವ

ಕಲಕಿತು ಹಾಗೆ  ಸುಮ್ನೆ 


ಹೆಜ್ಜೆಯ ಮೇಲೆ ಹೆಜ್ಜೆ 

ಕುಣಿಯಿತು ನಿನ್ನ ಗೆಜ್ಜೆ 

ನಿನ್ನ ನಡುಗೆ ನೋಡಿ 

ಮನಕೆ ಆಯ್ತು ಮೋಡಿ 


ಎಡವಿ ಬಿದ್ದು ನೀನು 

ಗಾಯವು ಆಯಿತು ತುಟಿಗೆ 

ಅಮ್ಮ ಎಂದು ನೀನು 

ಕೂಗಿ ಕರೆದೆ ಕೊನೆಗೆ 


ಎಡವೇ ಬಿದ್ದರೂ ಛಲವ ಬಿಡೆ 

ಮತ್ತೆ ಎದ್ದು ಹಠವ ಮಾಡಿಹೆ 

ಪ್ರೀತಿಯಲ್ಲಿ  ಅಮ್ಮ ಎಂದಿಹೆ 

ನೋವನ್ನು ನೀನು ಮರೆತು ಓಡಿಹೆ


ಕಣ್ಣ ಹನಿಯು ಜಾರಿ ಬಿತ್ತು 

ಕೆನ್ನೆಯ ಮೇಲೆ  ಕರಗಿತು 

ಮುದ್ದು ಮೊಗವು ನಗುತಲಿತ್ತು 

ತುಟಿಯ ಮೇಲಿನ ಗಾಯ ಕಾಣುತ್ತಿತ್ತು


ಕಂದ ನಿನ್ನಯ ನಗುವು

ಕಾಡಿತು ಯಾಕೋ ನನ್ನೆ 

ನಿನ್ನ ನೋಟ ಮನವ

ಕಲಕಿತು ಹಾಗೆ ಸುಮ್ಮನೆ 


********ರಚನೆ**********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Post a Comment

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa