ಸನಿಹವಿದ್ದರೂ ದೂರ






ಚೆಲುವೆ ನೀ ಸನಿಹವಿದ್ದರು ದೂರ

ತಾಳಲಾರೆನು ವಿರಹದ ನೋವಿನ ಭಾರ

ಕಡಲಿನ ಅಲೆಯಂತೆ ನಿನ್ನಯ ಪ್ರೀತಿ ಚಿಂತೆ

ಸುನಾಮಿ ದಡಕೆ ಬಡಿದಂತೆ ದುಃಖದ ಸಂತೆ


ದಡದಿ ಕಲ್ಲುಗಳು ಹೇಳಿವೆ ಪ್ರೀತಿಯಾ ಗಾನ

ಹಸಿರು ಮರಗಳು ತೂಗಿವೆ ಮೌನದ ಯಾನ

ಕಡಲು ಬೋರ್ಗರೆದಿದೆ ಅಲೆಗಳ ಸಪ್ಪಳಕೆ

ನೆಲವು ನಡುಗಿದೆ ಜಲದ ನರ್ತನಕೆ 


ಮೂಕವಾಗಿವೆ ಜಲಚರ ಜೀವಿಗಳು

ದಡದಲ್ಲಿ ಸತ್ತು ಬಿದ್ದಿವೆ ನಕ್ಷತ್ರ ಮೀನುಗಳು

ಅಲೆಯಲಿ ತೇಲಿವೆ ಮರದ ದೋಣಿಗಳು

ಸೋತಿವೆ ಏಕೋ ಅಂಬಿಗನ ಕನಸುಗಳು


ನಾವಿಕನಿಲ್ಲದ ದೋಣಿ ತಲುಪಿತೆ ದಡವ

ಸ್ವರಗಳಿಲ್ಲದ ಹಾಡು ಕೊಟ್ಟಿತೆ ವರವ

 ನೋವಿನ ಯಾತ್ರೆಯಲ್ಲಿ ಮನಸು ಮರುಗಿದೆ

ನಿನ್ನಯ ಸನಿಹದಲ್ಲಿ ಕನಸು ಚಿಗುರಿದೇ 

*********ರಚನೆ**********

ಡಾ. ಚಂದ್ರಶೇಖರ್ . ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35