ಚುಟುಕು ಕವನ -53
🌹 ಚಿನ್ನ 🌹
ಹೇಳೇ ಹೇಳೇ ನನ್ನ ಮುದ್ದು ಚಿನ್ನ
ನೀನೆ ನನ್ನ ಬಾಳಿನ ಬೆಳಕಿನ ರನ್ನ
ನೀನು ಬದುಕಲಿ ನೆನಪಾದೇ ಇನ್ನ
ನೂರು ಜನುಮ ಬಾಳಿ ಮರೆಯೋ ಮುನ್ನ
🌹 ಬಂಗಾರ 🌹
ನೀನು ಮರೆಯದ ಮುದ್ದಿನ ಬಂಗಾರ
ಕಂಡೆ ನಾನು ನಿನ್ನಯ ಒಲವ ಹಾರ
ನೀನು ಒಳೆಯುವ ಪ್ರೀತಿ ಸಿಂಗಾರ
ನನ್ನ ಬಾಳಿಗೆ ನಿನ್ನ ನಗುವೆ ಆಧಾರ
🌹 ನಗ 🌹
ಬೇಕು ಬೇಕು ಗೆಲುವಿನ ನಗ
ಹಾಡಿದೆ ನೀನು ಪ್ರೇಮದ ರಾಗ
ಬದುಕಲಿ ಏಳು ಬಣ್ಣದ ಯೋಗ
ಪ್ರೀತಿಯ ಬಲಿದಾನ ನಿನ್ನ ತ್ಯಾಗ
🌹 ಸ್ವರ್ಣ 🌹
ಈ ಜಗವು ಒಂದು ಸ್ವರ್ಣದ ಯುಗ
ಹುಡುಕಿದರೆ ಸಿಗುವ ಗೆಲುವಿನ ನಗ
ಇರದಿದ್ದರೆ ಯಾಕೋ ಇದುವೇ ಮೃಗ
ಎಳು ಸ್ವರದಿ ಕುಣಿವ ಹಾಡಿನ ರಾಗ
*********ರಚನೆ**********
ಡಾ.ಚಂದ್ರಶೇಖರ್ . ಸಿ. ಹೆಚ್
Comments
Post a Comment