ಚುಟುಕು ಕವನ-38




     🌹ಮುನಿಸು🌹


ನಲ್ಲೆ ನನ್ನ ಮೇಲೆ ಏಕೆ ಮುನಿಸು

ಕೊಡುವೆನು ನಿನಗೆ ತಿಂಡಿ ತಿನಿಸು

ಸಿಟ್ಟನು ಹಾಗೆ ಓಮ್ಮೆ ನೀ ದಹಿಸು

ಪ್ರೀತಿಯಿಂದ ನನ್ನನ್ನು ನೀನು ಕ್ಷಮಿಸು


        🌹 ಕೋಪ 🌹

ಮೂಗಿನ ತುದಿಯಾಗ ಯಾಕೆ ಕೋಪ 

ಓ ನನ್ನ ಪ್ರೀತಿಯ ತರುಣಿ ರೂಪಾ

ಮಾಡುತಿಯ ಯಾಕೆ ಸಿಟ್ಟಲಿ ರಂಪಾ

ಕುಣಿಸುತ್ತಿನಿ ನಿನ್ನನು ಮಾಡಿ ಜಂಪಾ

          

           🌹ಸಿಟ್ಟು🌹

ಸಿಟ್ಟ್ಯಾಕೆ ಸಿಡುಕ್ಯಾಕೆ ನನ್ನ ಗೆಳತಿ

ನೀನು ತಾನೇ ನನ್ನ ಹೃದಯದ ಒಡತಿ

ಕೊಟ್ಟ ಮೂಗುತಿ ನೀ ಯಾಕೆ ಮರೆತಿ

ಕಣ್ಣಾ ಕಾಡಿಗೆ ಕೂಗೈತಿ ಮನದೊಡತಿ


      🌹 ಮುಂಗೋಪ 🌹

ಮೂತಿಯಲ್ಲೇ ಸ್ವಲ್ಪ ಮುಂಗೋಪ 

ನಿನ್ನ ನೋಡಿದ್ರೆ ಅಯ್ಯೋ ಪಾಪ

ಮುಖದಲ್ಲಿ ಏಕೆ ಶಾನೆ ಕೋಪ

ಕೋಪ ತಾಪ ತಡಿ ನೀ ಸ್ವಲ್ಪ

ನನ್ನ ಮುದ್ದು ಬಂಗಾರಿ ರೂಪ


********ರಚನೆ************

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35