ಚುಟುಕು ಕವನ-44
🌹ಮಳೆ🌹
ಮುಂಗಾರು ಮಳೆಗೆ ಮನವು ಹೂವಾಗಿದೆ
ತಣ್ಣನೆ ಚಳಿ ಗಾಳಿಗೆ ತನುವು ಕಾವಾಗಿದೆ
ಹರೆಯದ ವಯಸ್ಸು ಮತ್ತೇನನು ಬೇಡಿದೆ
ನಮ್ಮಯ ಖುಷಿಗೆ ಚಂದಿರನ ಬೆಳಕು ಮೂಡಿದೆ
🌹ವರ್ಷ🌹
ನೋವಿನ ಮನಕೆ ಕಣ್ಣೀರ ವರ್ಷಧಾರೆ
ತುಂತುರು ಹನಿಗೆ ನಗುವಿನ ಒಲವಾದಾರೆ
ಇಬ್ಬನಿಯೊಂದು ಹೂವಿಗೆ ಮುತ್ತಿಕ್ಕಿದೆ
ಪ್ರೀತಿಯಾ ಅಪ್ಪುಗೆಯ ಬೆಸೆದು ನಿಂತಿದೆ
🌹 ವೃಷ್ಟಿ 🌹
ಭೋರ್ಗರೆವ ಮನಕೆ ಇಂದು ಅತಿವೃಷ್ಟಿ
ಪ್ರಕೃತಿಯ ಮಡಿಲಲ್ಲಿ ಜೀವಗಳ ನವಸೃಷ್ಟಿ
ದೈವದ ಆಶೀರ್ವಾದದ ಕಣ್ಣಿನ ನೆರದೃಷ್ಟಿ
ನಮ್ಮಯ ಪ್ರೀತಿಗೆ ಮೋಡದ ಮಳೆ ಪುಷ್ಠಿ
************ರಚನೆ********
ಡಾ. ಚಂದ್ರಶೇಖರ್ ಸಿ. ಹೆಚ್
ಚೆನ್ನಾಗಿವೆ
ReplyDelete