ಚುಟುಕು ಕವನ-39

 



       🌹ಒಲವು🌹


ಒಲವು ಮೂಡಿತು ನಲ್ಲೆ ಸುಮ್ಮನೇ ಹಾಗೆ

ಕನಸಿನಲ್ಲಿ ಬಂದು ಹೋಗೆ ತಣ್ಣನೆ ಇಗೆ

ಬಂದ ಮೇಲೆ ನೀನು ತಾಳಲಾರೆ ಬಿಸಿ ಬೇಗೆ

ನೀನು ಇಂಗೆ ಕಾಡಿದರೆ ನಾನು ಬದುಕಲಿ ಹೇಗೆ


         🌹 ಪ್ರೀತಿ 🌹

ನಕ್ಷತ್ರ ಕಂಡ ಹಾಗೆ ಪ್ರೀತಿ ಬಂತು ನನಗೆ

ಉಲ್ಕೆ ಉದುರಿದಂಗೆ ನಿನ್ನ ನಗು ಹಂಗೆ

ಚಂದ್ರ ಮೂಡಿದಂಗೆ ನಿನ್ನ ಮೊಗದ ಕಾಂತಿ

ನೋಡಿ ನಿನ್ನ ನಾನು ಮಾಡಿಸಬೇಕು ಮನಕೆ ಶಾಂತಿ 


         🌹ಒಲುಮೆ🌹

ಒಲುಮೆಯಿಂದ ಪ್ರೀತಿ ಹೇಳು ನಲ್ಲೆ

ಕಾದು ಕಾದು ಸುಮ್ಮನಾದೆ ನನ್ನ ಮಲ್ಲೆ

ಕಣ್ಣ ನೋಟ ಹೇಳುವ ಕಥೆಯನ್ನು ಬಲ್ಲೆ

ಬಳಿ ಬಂದಳು ನೋಡು ನನ್ನ ಸೂಜಿಮಲ್ಲೇ 


*********ರಚನೆ********* 

ಡಾ. ಚಂದ್ರಶೇಖರ್ ಸಿ.ಹೆ ಚ್

Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35