ಹೆತ್ತು ಹೊತ್ತ ತಾಯಿ

  


🌹ತಾಯಿ🌹

ಹೆತ್ತವಳು ಹೊತ್ತವಳು ತಾಯಿ ಅಲ್ಲವೇ

ಸಾಕಿ ಸಲುಹಿದವಳು ತಾಯಿ ಅಲ್ಲವೇ

ಕರುಣೆಯ ಸಿಂದು  ಬಂದು ತಾಯಿ ಅಲ್ಲವೇ

ಜೀವಕೆ ಜೀವ ತೇಯ್ದವಳು ತಾಯಿ ಅಲ್ಲವೇ


ನೋವಲು ನೀನು ಖುಷಿಯನ್ನು ಕೊಟ್ಟೆ

ಹರಿದ ಬದುಕನ್ನು ನೀ ಜೋಡಿಸಿ  ಬಿಟ್ಟೆ

ತುಂಬಿದೆ ನೀನು ಅನ್ನದಿ ಖಾಲಿಯ ತಟ್ಟೆ

ಪಾವನವಾಯಿತು ಈ ಹಸಿದ ಹೊಟ್ಟೆ 


ತಾಯಿ ಎನ್ನುವ ಪದವೇ ಅಮೃತ

ನೀನು ನಮ್ಮ ಬೆಳಸಿದ ರೀತಿ ಅದ್ಬುತ

ಬದುಕನ್ನು ಕಳೆವೆವು ನಾವು ನಿನ್ನ ನೆನೆಯುತ

ಉಸಿರು ಮತ್ತು ಹೆಸರು  ನಿನ್ನದೇ ಈ ಜೀವಿತ 

***********ರಚನೆ***************

           ಡಾ.ಚಂದ್ರಶೇಖರ್ ಸಿ. ಹೆಚ್ 

      

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa