ಚುಟುಕು ಕವನ -30
🌹 ಮಳೆ 🌹
ಕಂಬನಿಯಲಿ ಕಣ್ಣ ಹನಿಯ ಮಳೆ
ಬದುಕಿನಲಿ ಏಕೋ ಇಲ್ಲ ಜೀವ ಕಳೆ
ಭಾವದ ಭಕ್ತಿಗೆ ಮೂಡಲಿಲ್ಲ ಬೆಳೆ
ಬರಡಾದ ಜೀವ ಹಸಿರಿಲ್ಲದ ಇಳೆ
🌹 ವರ್ಷ 🌹
ಉರುಳಿದವು ಬಾಳಿನಲ್ಲಿ ವರ್ಷ
ಮೂಡಲಿಲ್ಲ ಏಕೊಪ್ರೀತಿ ಹರ್ಷ
ಬದುಕಿಗೆ ಬೇಕು ಪ್ರೇಮದ ಸ್ಪರ್ಷ
ಬಾಳು ಒಂದು ಉಲ್ಲಾಸದ ಉತ್ಕರ್ಷ
🌹 ಸೋನೆ 🌹
ಹನಿ ಹನಿ ಮಳೆ ಹನಿ ಚಿಟಪಟ ಮಳೆ ಹನಿ
ಬರಡು ನೆಲದಲ್ಲಿ ಸೋನೆ ಮಳೆ ಹನಿ
ಹಸಿರಿನ ಮೇಲೆ ಕುಣಿದಿಹ ಪ್ರೀತಿ ಇಬ್ಬನಿ
ನವ ಹೊಸ ವರ್ಷಕ್ಕೆ ಮಿಡಿದ ಬಾಷ್ಪನೀ
*******ರಚನೆ**********
ಡಾ. ಚಂದ್ರಶೇಖರ ಸಿ ಹೆಚ್
Comments
Post a Comment