ಅಮ್ಮಾ ಎಂದರೆ ಆನಂದ
🌹 ಅಮ್ಮಾ 🌹
ಅಮ್ಮಾ ಎನ್ನುವ ಪದವೇ ಒಂದು ಆನಂದ
ಮಗುವಿನ ಮಮತೆಯೇ ಬಿಡಿಸದ ಬಂದ
ಅಮ್ಮನ ಪ್ರೀತಿಗೆ ಸಾಟಿ ಎಲ್ಲಿದೆ ಹೇಳು ಕಂದ
ದೇವರು ನಮಗೆ ಅಮ್ಮನ ಸೃಷ್ಟಿಸಿ ತಂದ
ಅಮ್ಮಾ ನಿನ್ನಯ ಪ್ರೀತಿ ಮಡಿಲಲಿ ನಾನು
ತುತ್ತನಿಟ್ಟು ಸಾಕಿ ಸಲುಹಿದೆ ನೀನು
ನಿನ್ನಯ ಋಣವ ತೀರಿಸಲಿ ಹೇಗೆ ಇನ್ನು
ನಿನ್ನಯ ವಾತ್ಸಲ್ಯದಿ ಕಳೆದು ಹೋದೆ ನಾನು
ಬದುಕನ್ನು ಕೊಟ್ಟು ನನ್ನನು ಪೋರೆದೆ
ಪ್ರೀತಿಯಲಿ ಹೃದಯ ನನಗೆ ತೆರೆದೆ
ಕೈಯನ್ನು ಇಡಿದು ದಾರಿ ತೋರಿದೆ
ನೀ ಇಲ್ಲದ ಈ ಜೀವನ ಬರಿದೆ
**********ರಚನೆ********.*
ಡಾ ಚಂದ್ರಶೇಖರ್ ಸಿ.ಹೆಚ್
Comments
Post a Comment