ಮಾತೆ ನೀನು ಅಮೃತದಾತೆ
🌹 ಮಾತೆ 🌹
ಬದುಕನ್ನು ತೋರಿ ಬೆಳೆಸಿದ ಮಾತೆ
ಜೀವನ ಪಾವನ ಮಾಡಿದ ಅಮೃತದಾತೆ
ದಯಾಮಯಿ ನೀನು ನಮ್ಮ ಬಾಳಲಿ
ಆನಂದಬಾಷ್ಪ ನೀನು ಕಣ್ಣ ಹನಿಯಲಿ
ನೀ ಇರದ ಜೀವ ಬಾಳಿ ಬದುಕುವುದೆಲ್ಲಿ
ಕಷ್ಟದ ನೋವನು ಸಹಿಸಿ ಬಾಗುವುದೆ ಇಲ್ಲಿ
ಕಣ್ಣೀರ ಹನಿಯೇ ಕೊನೆ ಆಗುವುದೆಲ್ಲಿ
ನಿನ್ನ ನಗುವಲಿ ಬೆಳಕು ಮೂಡುವುದೇ ಇಲ್ಲಿ
ಮಾತೆ ನೀನು ಒಂದು ವಜ್ರದ ಮುತ್ತು
ನೀ ಬಳಿ ಇದ್ದರೆ ನಮಗೆ ಬಾರದು ಕುತ್ತು
ನಿನ್ನ ಖುಷಿಯಲ್ಲಿ ಕಳೆವುದು ಹೊತ್ತು
ನೀನೆ ನಮ್ಮ ಬದುಕಿನ ದಾರಿಯ ಸ್ವತ್ತು
***************ರಚನೆ*********
ಡಾ. ಚಂದ್ರಶೇಖರ್. ಸಿ.ಹೆಚ್
Comments
Post a Comment