ಚುಟುಕು ಕವನ-35

 



     🌹ಹೃದಯ🌹

ಹೃದಯದೊಳಗೆ ನೂರು ಕವನ

ಗೀಚಲೆನೆ ಸುಮ್ಮನೆ

ಕನಸಿನೊಳಗೆ ಬಂದು ಬಿಡು

ಹಾಗೆ ನೀನು ಮೆಲ್ಲನೆ

ಮನಸು ಮನಸು ತಾಕಿದಾಗ

ಪ್ರೀತಿಯಾಯ್ತು ಗಮ್ಮನೆ

ನೀನು ನಾನು ಹಾಡುವಾಗ

ಸಂಗೀತವಾಯ್ತು ಗಲ್ಲನೆ


         🌹ಎದೆ🌹

ಎದೆಯ ಮೇಲೆ ನಿನ್ನ ಹಚ್ಚೆ

ಕಾಡಿತೇಕೋ ಕೆನ್ನೆ ಮಚ್ಛೆ

ಪ್ರೀತಿಯಲಿ ಮನಸು ಬಿಚ್ಚೆ

ಓದುವೆ ನಾನು ಸ್ವರವನು

ರಾಗ ಮಿಡಿದ ಒಲವನು 


     🌹ನಾಡಿ ಮಿಡಿತ 🌹

ಕಣ ಕಣದಲ್ಲೂ ನಾಡಿ ಮಿಡಿತ

ನಿನ್ನ ಮೇಲೆ ನನ್ನ ಪ್ರೀತಿ ತುಡಿತ

ಒಲವು ಒಂದು ಖುಷಿಯ ಹಿತ

ನೀನು ತಾನೇ ನನಗೆ ಸ್ವಂತ 


********ರಚನೆ ********

ಡಾ. ಚಂದ್ರಶೇಖರ್ ಸಿ.ಹೆಚ್

Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ