ಶಿಶು ಗೀತೆ
🌹ಬಾನು ನೋಡು ಕಂದ 🌹
ಕಂದ ನೋಡು ಬಾನಲಿ ನೇಸರ ಸುಡುತಿಹನು
ಹುಣ್ಣಿಮೆ ಬೆಳಕಲಿ ಪೂರ್ಣ ಚಂದಿರ ನಗುತಿಹನು
ಆಕಾಶದೀ ನಕ್ಷತ್ರಗಳ ಸಾಲು ಮೀನುಗುತಿಹುದು
ಅಳುತ್ತಾ ಏಕೋ ಉಲ್ಕೆಗಳು ಉರಿದು ಬೀಳುತಿಹುದು
ಸೂರ್ಯನು ನಿನ್ನನ್ನು ಸುಡುವನು ಕಂದ
ಮನೆಯ ಒಳಗೆ ಹೋಗಿ ಆಡೋಣ
ಆಟದಿ ಹಸಿರು ಗೊಂಬೆಯ ಒಮ್ಮೆ ಮುದ್ದು ಮಾಡೋಣ
ಗೊಂಬೆಯು ನಿನ್ನನು ನೋಡಿ ಕರೆದು ಮುತ್ತು ಕೊಟ್ಟಿಹುದು
ಆಳುವ ಕಂದನ ತಬ್ಬಿ ಅಮ್ಮಾ ಗುಮ್ಮಾ ತೋರಿಹಳು
ಕಂದನು ನೋಡಿ ಚೀರುತ ಅಮ್ಮನ ಅಪ್ಪಿಹುದು
ಹೋಗು ಗುಮ್ಮಾ ನನ್ನ ಕಂದನ ಕೊಡುವುದಿಲ್ಲ
ಪಕ್ಕದ ಮನೆಯಲಿ ಹೋಗು ನೀನು ಬೆಕ್ಕು ಸಿಗುವುದಲ್ಲ
ಸೂರ್ಯ ಚಂದ್ರರ ನೋಡಿ ಕಂದನು ನಗುತಿಹನು
ಅಮ್ಮಾ ತೋರಿದ ಗುಮ್ಮ ನೋಡಿ ಕಂದಾ ಅಳುತಿಹನು
ಕಂದನ ಆಟವ ಕಂಡು ಅಮ್ಮನು ಕುಳಿತಿಹಳು
ಒಲೆಯ ಮೇಲಿನ ಹಾಲು ತಂದು ಕಂದಗೆ ಕೊಡುತಿಹಳು
ಹಾಲನು ಕುಡಿದ ಕಂದನು ತಣ್ಣಗೆ ಆಡಿರಲು
ಕಂದನ ನೋಡಿದ ಅಮ್ಮನ ಮೊಗವು ನಗುತಿರಲು
ನೂರು ಕನಸು ಹೊತ್ತ ಅಮ್ಮಾ ಕೇಳಿಹಳು
ಸೂರ್ಯ ಚಂದ್ರರೇ ಬಂದು ಭುವಿಯ ಬೆಳಗಿಹರು
*******ರಚನೆ**********
ಡಾ.ಚಂದ್ರಶೇಖರ್.ಸಿ.ಹೆಚ್
Good one,❤️
ReplyDelete