ಚುಟುಕು ಕವನ-27
🌹ಆರಂಭ 🌹
ಬದುಕಿನ ಬಂಡಿಯ ಆರಂಭ
ಸುಖ ದುಃಖಗಳ ಪ್ರಾರಂಭ
ಪ್ರೀತಿ ಪ್ರೇಮಗಳ ಪ್ರತಿಬಿಂಬ
ಜೀವನ ಖುಷಿಯ ನಗು ಕಂಬ
🌹ನೂರು ಆಸೆ🌹
ನೂರು ಆಸೆಗಳ ಈ ಜೀವನ
ಬದುಕಿನ ನಡೆಯೇ ಪಾವನ
ಸಣ್ಣ ಕಣ್ಣ ಹನಿಯ ಆರಂಭ
ನೋವು ನಲಿವಿನ ಪ್ರತಿ ಬಿಂಬ
🌹ತುಂಟ ನಗು 🌹
ತುಂಟ ನೋಟದಿ ನಗು ಆರಂಭ
ನಕ್ಕು ಕರೆದಳು ನನ್ನಯ ರಂಭಾ
ಕನಸಲಿ ಕಂಡೆ ನಾ ಪ್ರತಿಬಿಂಬ
ಮೂಗು ಮುರಿದಳು ತೋರಿ ಜಂಭ
*********ರಚನೆ***********
ಡಾ.ಚಂದ್ರಶೇಖರ್ ಸಿ ಹೆಚ್
Very nice sir
ReplyDelete