ಚುಟುಕು ಕವನ-31
🌹ಜಡೆ🌹
ನೀಲಾ ಜಡೆಯ ನಾಗವೇಣಿ ನಿನ್ನ ಮೊಗವು ಕೋಮಲ
ಮೂತಿಯಲಿ ಸಿಟ್ಟು ನೋಡಿ ನನ್ನ ಮನಸು ಚಂಚಲ
ಕಣ್ಣ ನೋಟ ಬಾಣದಾಗೆ ನನ್ನ ಚುಚ್ಚಿ ಇಂದು ಕೊಂದಿದೆ
ಮೈಮಾಟ ನನ್ನಲಿ ಇಂದು ನೂರು ಕನಸು ತಂದಿದೆ
🌹 ನೀಲವೇಣಿ 🌹
ಪ್ರೀತಿ ಪರದೆ ಮೇಲೆ ನೀಲವೇಣಿ ನಿನ್ನಾ ನೋಡಲು ಕಾತುರ
ಕಾದು ಕಾದು ಕೂತ ನನಗೆ ದಾಟಿದ ಆಗೆ ಆಯ್ತು ಸರೋವರ
ಬಯಸಿ ಬಂದ ನನಗೆ ನೀನು ಕೊಟ್ಟೆ ತಾಮ್ರದ ಚೆಂಬು
ಸುತ್ತಿ ಸುತ್ತಿ ಕೊನೆಗೆ ನಾನು ಇಡಿದ ಆಗೆ ಆಯ್ತು ಬಿದಿರು ಬಂಬು
🌹 ಕೂದಲು 🌹
ನಲ್ಲೆ ನಿನ್ನ ಮುಂಗುರುಳ ಕೂದಲು ನೋಡಿ ನಾ ಸೋತೆ
ಏಕೋ ಏನೋ ತಿಳಿಯದೇನೆ ನನ್ನ ನಾ ದಿನವೂ ಮರೆತೇ
ಏಳ ಹೊರಟೆ ಹುಚ್ಚು ಪ್ರೀತಿಯನ್ನ ನಿನಗೆ
ಕೊಟ್ಟೆ ಕೈಯನ್ನು ಏಕೆ ಮತ್ತೆ ನೀನು ಕೊನೆಗೆ
********ರಚನೆ*********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment