ಚುಟುಕು ಕವನ-48
🌹ಜಗಳ🌹
ಮೋಸದ ಮಾಯೆಗೆ ಜಗಳವೆಂಬ ನಂಟು
ಪ್ರೀತಿಯಾ ಛಾಯೆಗೆ. ನೆನಪಿನ ಗಂಟು
ಬೇಕು ಬೇಡ ಎಲ್ಲವು. ಜೀವನದಿ ಉಂಟು
ಬದುಕಿನ ದಾರಿ ತಿಳಿಯದ ಒಗಟು
🌹ಕಲಹ🌹
ಹೆಣ್ಣು ಗಂಡುಗಳ ನಡುವೆ ಪ್ರೀತಿಯ ಕಲಹ
ಅರಿಯದ ಮನಕೆ ನೆನಪುಗಳೇ ವಿರಹ
ಕಲಿತು ಬಾಳಬೇಕು ಇಲ್ಲಿ ಎಲ್ಲವೂ ಸರಳ
ನ್ಯಾಯ ನೀತಿ ಮರೆತರೆ ಗೆಲುವೆ ವಿರಳ
🌹ತರ್ಕ🌹
ಬುದ್ಧಿಹೀನನಾಗಿ ತರ್ಕ ಮಾಡಬೇಡ
ಮೋಸವನ್ನು ಮಾಡಿ ಸುಳ್ಳು ಹೇಳಬೇಡ
ನ್ಯಾಯವು ಸುಮ್ಮನೇ ಸತ್ತಿದೆ ಏಕೋ ಇಲ್ಲಿ
ಹಸಿಯಾದ ಬಣ್ಣದಿ ನೆತ್ತರು ಚೆಲ್ಲಿ
*********ರಚನೆ********
ಡಾ.ಚಂದ್ರಶೇಖರ್. ಸಿ ಹೆಚ್
Comments
Post a Comment