ಚುಟುಕು ಕವನ-51
🌹ಜನನ🌹
ಜನನ ಮರಣದ ನಡುವೆ ಬದುಕು
ಮೂರು ದಿನದ ಜೀವನ ಕೆದಕು
ನೋವು ನಲಿವಲಿ ಕಳೆದ ಹುಳುಕು
ಕುಡಿಸಿದೆ ಬದುಕು ನೀರು ಗುಟುಕು
🌹 ಹುಟ್ಟು 🌹
ಹುಟ್ಟಿದ ಮೇಲೆ ಸಾವು ನಿಶ್ಚಿತ
ಜೀವನದಲ್ಲಿ ಬಾಳುವ ದಾರಿ ಉಚಿತ
ಸುಖ ದುಖ್ಖಳೆರಡು ಬಾಳಲಿ ಖಚಿತ
ಗೆಲ್ಲಬೇಕು ನಾವು ನಮ್ಮ ನಾಡಿ ಮಿಡಿತ
🌹 ಆರಂಭ 🌹
ಜೀವನವೆಂಬ ದಾರೀಲಿ ಸಂಸಾರದ ಆರಂಭ
ಪಾಪ ಪುಣ್ಯದ ಮೇಲೆ ಬದುಕು ಪ್ರಾರಂಭ
ನೋವು ನಲಿವುಗಳು ಆಧಾರ ಸ್ಥಂಭ
ನೀರಿನ ಮೇಲಿನ ಗುಳ್ಳೆಯಂತೆ ನಮ್ಮ ಬಿಂಬ
*********ರಚನೆ**********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment