ಚುಟುಕು ಕವನ-50
🌹ಮಳೆ ನೀರನು ಉಳಿಸಿ🌹
ಹನಿ ಹನಿ ನೀರಿಗೆ ಬೆಲೆ ಇದೆ ತಮ್ಮ
ನೀರನು ಪೋಲು ಮಾಡಬೇಡ ತಿಮ್ಮ
ನೀರಿನ ಹಾಹಾಕಾರ ಜಗದ ಎಲ್ಲೆಡೆ ಡುಮ್ಮ
ನೀರನು ಕೂಡಿಸಿ ಸೇರಿಸು ಒಂದೆಡೆ ಬೊಮ್ಮ
ಭೂಮಿಯು ಬಾಯಿ ತೆರೆದಿಹುದು
ಬರಡು ನೆಲ ನಾಲಿಗೆ ಚಾಚಿಹುದು
ಸೂರ್ಯನ ಕಿರಣ ಸುಡಿತಿಹುದು
ಮರ, ಪ್ರಾಣಿ ಪಕ್ಷಿ, ಬಾಯನ್ನು ಬಿಟ್ಟಿಹುದು
ನೀರು ಇಲ್ಲದೇ ಭೂಮಿಯು ಸ್ಮಶಾನ
ಕಳೆಬರಹದಂತೆ ಮನುಷ್ಯನ ಜೀವನ
ನೀರು ನಮಗೆ ದೇವತೆಗಳ ಸುರಪಾನ
ಜೀವಗಳಿಗೆ ನೀರು ಬೇಕು ಕಾಯ್ದು ಕಾಪಾಡೋಣ
*********ರಚನೆ********
ಡಾ.ಚಂದ್ರಶೇಖರ್ ಸಿ. ಹೆಚ್
Comments
Post a Comment