ಚುಟುಕು ಕವನ -32




     🌹 ಚೆಲುವು 🌹

ಚೆಲುವಿನ ಮೊಗದ ಸುಂದರಿಯೇ

ನನ್ನಯ ಪ್ರೀತಿಯ ಕಿನ್ನರಿಯೇ

ಮಿಂಚಿನ ನಗುವಿನ ಮೋಹಿನಿಯೇ

ಓದಲು ಬಾರದ ಕೈಪಿಡಿಯೇ 


     🌹ಸೌಂದರ್ಯ🌹

ನನ್ನ ಅರಮನೆಯ ಸೌಂದರ್ಯ ರಾಣಿ ನೀನು

ಕತ್ತಲೆ ದೂಡಿದ ಬೆಳಕಿನ ಪ್ರಜ್ವಲ ಕಿರಣ ನೀನು

ಕನಸ್ಸಲು ಕಾಡುವ ಮುದ್ದಾದ ಕವಿತೆ ನೀನು

ಪದಗಳಿಗೆ ಸಿಗದೇ ಮಿಂಚುವ ಕವನ ನೀನು 


          🌹ರೂಪ🌹


ನಿನ್ನಯ ಪ್ರೀತಿಯು ಮೌನದ ರೂಪ

ಕಣ್ಣಿನ ನೋಟ ಕಾಡುವ ಸ್ವರೂಪ

ಹದಿಹರೆಯದ ಬಾಳು ಬಿಸಿ ಬಿಸಿ ತಾಪ

ಯಾರಿಗೆ ಹೇಳಲಿ ದೇವರ ಕೊಟ್ಟ ಶಾಪ


         🌹 ಲಕ್ಷಣ 🌹

ನೋಡಲು ಲಕ್ಷಣದ ಮೊಗದವಳೇ

ಬಿಳಿಯ ಬಣ್ಣದ ಚೆಲುವುಾಳೆ

ಕಣ್ಣಿನ ನೋಟದಿ ನಗೆ ಬೀರೋಳೆ

ನನ್ನನು ಪ್ರೀತಿಯಲಿ ಕೊಂದವಳೇ

ಯಾರು ನೀನು ನನ್ನವಳೇ


***********ರಚನೆ*********

ಡಾ.ಚಂದ್ರಶೇಖರ್. ಸಿ ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35