ಚುಟುಕು ಕವನ-47




       🌹ಮದುವೆ🌹

ಕನಸು ಬಿತ್ತು ಹದಿಹರೆಯದ ವಯಸ್ಸಲ್ಲೇ

ಪ್ರೀತಿ  ಚಿಗುರಿ ಬಂತು ನನ್ನ ಮನದಲ್ಲೇ

ಇದುವೇ ಸವಿ ಮದುವೆ ಕರೆಯೋಲೆ

ಊರಲಿ ನಮ್ಮಿಬ್ಬರ ದಿಬ್ಬಣ ಹೊರಟಿತಲ್ಲೇ 


        🌹ಕಲ್ಯಾಣ🌹

ಪ್ರೀತಿ ಬೆಳಕು ಚೆಲ್ಲಿದೆ ನಿಲ್ಲದಂತೆ

ಮನಸು ಮನಸುಗಳ ಸಮ್ಮಿಲನವಂತೆ

ನನಗೂ ನಿನಗೂ ಕಲ್ಯಾಣವಂತೆ

ನಮ್ಮಿಬ್ಬರ ನಡುವೆ ಮೂರು ಗಂಟಂತೆ 

ಈ ಬಂಧನ ಬೀಡಿಸದ ನಂಟಂತೆ


             🌹ವಿವಾಹ🌹

ಹೆಣ್ಣು ಗಂಡಿನ ನಡುವೆ ವಿವಾಹ

ತನು ಮನದ ನಡುವೆ ಪ್ರವಾಹ

ನಲ್ಲೆ ಬಳಿ ಬಂದಳು ಇನ್ನು ಸನಿಹ

ಮರೆತು ಹೋಯಿತು ಕಾಡಿದ ವಿರಹ


***********ರಚನೆ********

ಡಾ.ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35