ಚುಟುಕು ಕವನ -34

 


        🌹ಕನಸು🌹

ಸುಂದರ ಕನಸು ಬೀಳುತೈತ ಮನಸ್ಸಿನೊಳಗೆ

ವಯಸ್ಸಿನ ಕುಲುಮೆ ಕೂಗುತೈತ. ಹರೆಯದೊಳಗೆ 

ವಸಂತದಲ್ಲಿ ಹಕ್ಕಿ ಹಾಡುತೈತ ಗೂಡಿನೊಳಗೆ

ಜಿಟಿ ಜಿಟಿ ಮಳೆ ಬೀಳುತ್ತೈತ ಮುಂಗಾರಿನೊಳಗೆ


       🌹 ಸವಿಗನಸು 🌹

ನಲ್ಲೆ ಬಾಡಿಗೆ ಕೋಡುವೆ ಸವಿಗನಸನು

ಕಾಡುವೆ ಏಕೆ ಈ ಹುಚ್ಚು ಮನಸನು

ಹರೆಯವೇ ಒಂಥರಾ ಎದೆಯೊಳಗೆ ತಲ್ಲಣ 

ಆಕಾಶದೋಳಗೆ ಬಿಡಿಸುವೆ ನಾನು ನಿನ್ನ ಚಿತ್ರಣ


     🌹ಹಗಲುಗನಸು🌹

ಹಗಲುಗನಸು ಕಾಣ ಬೇಡವೋ ತಮ್ಮ

ಬದುಕು ಒಂದು ಸುಖ ದುಃಖದ ಗುಮ್ಮ

ಜೀವನದ ಸಾಗರದಲ್ಲಿ ಈಜಬೇಕು ತಿಮ್ಮ

ದಡದಲ್ಲಿ ಕಾದಿದೆ ಜಯದ ಹೊನಲು ಡುಮ್ಮ


*********ರಚನೆ********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35