ಚುಟುಕು ಕವನ-54
🌹 ನೇಸರ 🌹
ಅಮ್ಮಾ ನೋಡು ನೇಸರ ಏಕೋ ನೆತ್ತರು ಕುಡಿದಿಹನು
ಕೆಂಪಗೆ ಕಾಣುತ್ತ ಬೆಳಕಿನ ಕಿರಣದಿ ಹೊಳೆದಿಹನು
ಆಕಾಶವೆಲ್ಲ ಹೊಳಪು ಇವನ ಬೆಳಕಿನ ಕಿರಣದಿಂದ
ಭೂಮಿಗೂ ಕೂಡ ನಗುವು ನೇಸರನ ಸೊಬಗಿಂದ
🌹 ರವಿ 🌹
ಒರೆಗಣ್ಣಲ್ಲಿ ರವಿಯು ಏಕೋ ಭುವಿಯ ನೋಡಿದನು
ನೀಲಿ ಬಾನಲಿ ಸುಮ್ನೆ ಕೂತು ಮೆತ್ತಗೆ ನಗುತಿಹನು
ಮೊಡವು ಬಂದು ರವಿಯ ಮರೆ ಮಾಡಿರಲೂ
ಸುಡುತ್ತ ಇಂದೆ ಮುಂದೆ ಬಂದರೆ ಭುವಿಯು ಅಳುತಿರಲು
🌹ಸೂರ್ಯ🌹
ನಗುವಿನ ಮೊಗದ ಚೆಲುವ ಸೂರ್ಯ ಹುಟ್ಟಿರಲು
ಸಂಜೆ ಬಂದ ಹುಣ್ಣಿಮೆ ಚಂದ್ರ ನಗುತಿಹನು
ರಾತ್ರಿಯ ಕತ್ತಲಲಿ ಮರೆಯಾಗಿ ಕಳೆಯುವ ಮುಗಿಲು
ಬೆಳಿಗ್ಗೆ ಎದ್ದರೆ ಚಂದಿರನು ಕಳೆದು ಹೋಗೋ ದಿಗಿಲು
🌹 ಭಾನು 🌹
ನೀಲಿ ಭಾನಲಿ ಸೂರ್ಯನ ಬೆಳಕುಂಟು
ಚಂದಿರನು ಮರೆಯೋಗೋ ಭಯವುಂಟು
ನಕ್ಷತ್ರಗಳು ನಾಚಿ ಕಣ್ಮರೆಯಾಗಿರಲು
ಮೋಡಗಳು ಓಡಿ ಸೂರ್ಯನ ಮರೆ ಮಾಡಿಹುದು
Comments
Post a Comment