ಶಿಶು ಗೀತೆ

 


      🌹ಬಾರೆ ಚಿನ್ನಮ್ಮ 🌹


ತೆವಳಿ  ಅಂಬೆಗಾಲು ಇಟ್ಟು  ಬಾರೆ ಚಿನ್ನಮ್ಮ

ನನ್ನ ಪ್ರೀತಿ ಮುದ್ದು ದ್ರುವ ತಾರೆ ನೀನಮ್ಮ 

ಮುಂದೆ ಮುಂದೆ ಸಾಗಿ ನೀನು ಬರಲು

ನಾನು ಸಿದ್ಧ ನಿನ್ನ ಭುಜದ ಮೇಲೆ ಹೊರಲು


ಕಾಲಿನ ಗೆಜ್ಜೆ ಸದ್ದು ನೀ ಇಡುವ ಹೆಜ್ಜೆಯಲ್ಲಿ

ಕುಣಿವೆ ನಾನು ಪ್ರತಿದಿನವು ನಿನ್ನ ನಗುವಿನಲ್ಲಿ 

ಕೂಸುಮರಿ ಮಾಡಿ ನಿನ್ನ ನಾನು ಕುಣಿಸುವೆ

ಚಂದ್ರನನ್ನು ತೋರಿ ನಿನ್ನ ನಾನು ನಗಿಸುವೆ 


ಮುದ್ದು ನಗುವಿನಲ್ಲಿ ನೋವನ್ನು ಮರೆಯುವೆ

ನಿನ್ನ ಜೊತೆ ಆಡಿ ಹರುಷವನ್ನು ಪಡೆಯುವೆ

ನೀನು ತಾನೇ ನನ್ನ ಪ್ರೀತಿ ಯುಗವು

ನೀನು ನಕ್ಕರೆ ಅದುವೇ ಈ ಜಗದ ಗೆಲುವು 


ಬಾರೆ ಬಾರೆ ನನ್ನ ಒಲವ ಚಿನ್ನಮ್ಮ

ನೀನು ತಾನೇ ನನ್ನ ಮುದ್ದು ಕಂದಮ್ಮ

ಓಡಿ ಓಡಿ ಬಾರೆ ನನ್ನ ಪ್ರೀತಿ ಗುಂಡಮ್ಮ 

ನಾನು ತೋರಿಸುವೆನು  ನಿನಗೆ ಗುಮ್ಮಾ


********ರಚನೆ**********

ಡಾ.ಚಂದ್ರಶೇಖರ್ ಸಿ .ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35