Posts

Showing posts from May, 2022

ಭರವಸೆಯ ಸಂಖ್ಯೆ

Image
ಬದುಕು ಭರವಸೆಯ ಆಸೆಗಳ ನೂರಂಕೆ ಕೊಟ್ಟು ಪಡೆಯುವ ನೋವು ನಲಿವಿನ ಸಂಖ್ಯೆ ಮರೆಯದ ಮಾತುಗಳು ನೆನಪುಗಳ ಕೊಂಕೆ ಕಾಡುವುದು ಪ್ರೀತಿ ಪ್ರಣಯದ ವಯಸ್ಸು ಮಂಕೆ ಸಾಗುವ ದಾರಿಯಲಿ ನದಿ ಹರಿದಂತೆ ಕಷ್ಟ ಸುಖ ಎಡರು ತೂಡರುಗಳ ತುಳಿದು ಹರಿವ ಚಲಕೆ ನಿಂತ ನೀರಾಗದೆ ಹರಿವ ಮನದ ಬಯಕೆ ಹಳೆತನವ ತೊಳೆದು ಹೊಸತನದ ಅಲಿಂಗನಕೆ ಸಾಗುತ ಮುಂದೆ ತಿರುಗಿ ನೋಡದೆ ಹಿಂದೆ ಕಟ್ಟಿ ಹಿಟ್ಟು ಕೊಂಡ ನೆನಪುಗಳ ಭಯವೊಂದೇ ಕಾಡದೆ ಹಿದ್ದರೆ ಸಾಕು ನನ್ನ ಕಹಿಯಂತೆ ನಗುತಾ ಹೊರಡುವ ನಾವು ತಿಂದ ಸವಿಯಂತೆ ಮನಕೆ ಬಡಿದು ಮತ್ತೆ ಸಾಗುವ ಕನಸ್ಸುಗಳು ಕಾಣದೆ ದಾರಿಯಲಿ ನನಸಾಗದೆ ಹೋದ ಬಯಕೆಗಳು ಜೀವನ ಹರಿವ ರಭಸಕೆ ಕೊಚ್ಚಿ ಹೋದ ಆಸೆಗಳು ಎಲ್ಲೊ ಅವಿತು ದಡದಿ ಮೊಳೆತು ಮತ್ತೆ ಚಿಗುರಿದ ಕನಸುಗಳು **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಒಂಟಿ ನಾನು

Image
  ಈ ಒಂಟಿ ಬಾಳಿನಲಿ ಬೆಳದಿಂಗಳು ನಾನು ಮೋಡಸುರಿದ ತುಂತುರು ಮಳೆ ಹನಿ ನೀನು ಹನಿ ನೀರು ಮೈ ಸೋಕಿದ ಮಧುರ ನೀನು ನಿನಗಾಗಿ ಕಾದು ಕುಳಿತ ಪ್ರೇಮಿ ನಾನು ತಂಗಾಳಿಯ ಗಾಳಿಗೆ ಅಲೆಗಳು ಎದ್ದು ಅಲೆಗಳ ರಬಸಕೆ ನಾ ಮುಳುಗಿ ಬಿದ್ದು ದಡದಿ ಕಾಯುವ ನಿನ್ನ ಸೇರಲೆ ನಿನ್ನ ಮನದಲಿ ನಾನು ಜಾರಲೆ ತಿರುಗುತ್ತಿರುವ ಭೂಮಿಯಲಿ ಪಯಣ ನಮದು ಒಮ್ಮೆ ಸೇರಿ ಕನಸ್ಸು ಹೇರುವ ಬಯಕೆ ನನ್ನದು ಹರಿವ ನದಿಯ ನೀರಿನಂತೆ ಮನಸು ಶುಭ್ರ ಕಲ್ಲ ಮೇಲೆ ಜಾರಿದಂಗೆ ಮನಸ್ಸು ಛಿದ್ರ  ಪ್ರೀತಿ ಮನಕೆ ಸೇರುವಸೆ ಕಡಲ ತೀರ ಹೊತ್ತು ಸಾಗುತಿಹಾ ನೆನಪು ಅಲೆಗೆ ಬಾರ ಕನಸು ಮುರಿದು ಬಡಿದಂತೆ ದಡಕೆ ಮತ್ತೆ ಮತ್ತೆ ನೆನಪಾಗೋ ಪ್ರೀತಿ ಬಯಕೆ ಒಂಟಿಯಾಗಿ ಕಾಯುತಿಹೆ ನಿನಗಾಗಿ ಅಲೆಗಳ ದಡಕೆ ಚುಂಬಿಸುವ ರೀತಿ ನನಗಾಗಿ ಇಂದೆ ಇಂದೆ ದೂರ ಸರಿದು ಏಕೊ ಮನಸು ಬರಿದು ಮರಳಿ ಮರಳಿ ನನ್ನ ಅಲೆಗಳ ತೀರಕೆ ಕರೆದು ************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮಂಜು ತಬ್ಬಿದಂತೆ

Image
ನನ್ನ ಒಲವ ಅರಗಿಣಿ ನೀನು ಹೃದಯದ  ರಾಣಿ ನೀನು ಮನದ ಕಾಮನಬಿಲ್ಲು ನೀನು ಕನಸ ಕಾರ್ಮೋಡವೆ ನೀನು ಮೋಡದಿ ಬೀಳುವ ಮಂಜಿನಲಿ ನನ್ನ ನಲ್ಲೆಯ ಪ್ರೀತಿ ಒಲವಿನಲಿ ನಡೆಯುವ ಜೋಡಿ ಹಕ್ಕಿಯಂತೆ ಕುಣಿಯುವ ನವಿಲ ನಾಟ್ಯದಂತೆ ಕಾಣದ ಹನಿಯೊಂದು ಮೈ ತಾಗಿ ನನ್ನ ಮನದಿ ಭಾವನೆಗಳು ಕೂಗಿ ಬದುಕ ಬಯಕೆಗಳು ಮಾಗಿ ಸುರಿವ ಮಳೆ ಹನಿಯಾಯಿತೇ ಪ್ರೀತಿ ಗೆಜ್ಜೆಯ ಸದ್ದು ಹೆಜ್ಜೆ ಇಟ್ಟಾಗ ಕೇಳಿ ನಡೆವ ದಾರಿಯಲಿ ಒಲವ ತಂಗಾಳಿ  ಮಧುರ ಮನಸ್ಸಿನ ನಲಿವ ಹೋಳಿ  ಬಣ್ಣದಿ ಮಿಂದು ನನ್ನ ತಬ್ಬಿದಂತೆ ಚಳಿ ಕೊರೆವ ಚಳಿಯಲಿ ಕಣ್ಣ ಹನಿ ಪ್ರೀತಿ ಮುತ್ತಿನ ಮಂಜ ಹನಿ ನನ್ನೆದೆಗೆ ತಬ್ಬಿ ಬಾಚಿ ಅಪ್ಪಿದಂತೆ ನನ್ನ ಉಸಿರು ಹೆಸರ ಕೂಗಿದಂತೆ  *********ರಚನೆ********** ಡಾ. ಚಂದ್ರಶೇಖರ. ಸಿ. ಹೆಚ್

ಬಂದಿಯಾದೆ ನಾನು

Image
ಓ ದೇವನೆ ಕೇಳು ಬಂದಿಯಾದೆ ನಾನು ಈ ಕೋಣೆವೊಳಗೆ ಆಸೆಗಳ ಕಿತ್ತು ಕನಸುಗಳು ಸತ್ತ ಈ ಮನೆ ಒಳಗೆ ಯಾರ ಬೇಡಲಿ ನಾನು ಓ ದೇವಾ ಹೇಳು ನನ್ನ ಕಣ್ಣೀರ ಮೋರೆಯ ನಿನ್ನೊಮ್ಮೆ ಕೇಳು ಹೃದಯ ಸೊರಗಿದೆ ಇಂದು ನೋವಿನಲಿ ಬೆಂದು ಮನವು ಕರಗದೆ ನಿನಗೆ ನೋಡಿ ನನ್ನ ಇಂದು ಪ್ರೀತಿ ಮಾತುಗಳು ಇಲ್ಲಿ ಸವಿಯಂತೆ ಇಲ್ಲ ನೋವಿನಲಿ ಚಡಪಡಿಸಿ ಮನ ಅಳುತಿದೆಯಲ್ಲ ಕಾಡಿ ಬೇಡಿದರು ಕಾಣರರು ಇಲ್ಲಿ ದೇಹವೆಂಬ ಸರಕು ದಾಹಕೆ  ಬಲಿಯಾಗಿಹುದು ನೋಡಿಲ್ಲಿ ಎಂದು ದೋರಕುವುದು ನನಗೆ ಇಲ್ಲಿಂದ ಮುಕ್ತಿ ಒಮ್ಮೆ ದಯೆ ತೋರು ತೋರಿ ನಿನ್ನ ಶಕ್ತಿ  ಓ ದೇವನೆ ಕೇಳು ಬಂದಿಯಾದೆ ನಾನು ಈ ಕೋಣೆವೊಳಗೆ ಆಸೆಗಳ ಕಿತ್ತು ಕನಸುಗಳು ಸತ್ತ ಈ ಮನೆವೊಳಗೆ ಯಾರ ಬೇಡಲಿ ನಾನು ಓ ದೇವಾ ಹೇಳು ನನ ಕಣ್ಣೀರ ಮೋರೆಯ ನಿನ್ನೊಮ್ಮೆ ಕೇಳು ಗೆಜ್ಜೆಯ ಸದ್ದಿಲಿ ಬೋರ್ಗರೆವ ಮಳೆಯಂತೆ ಕೈಬಳೆಗಳು ಏಕೊ ನುಚ್ಚು ನೂರು ಆದಂತೆ ಹೇಗೆ ಬೇಡಲಿ ನಿನ್ನ ಕಣ್ಣೀರು ಬಸಿದು ಇನ್ನ ಮುಕ್ತಿ ನೀಡು ದೇವನೇ ತೊಳೆದು ದಾರಿದ್ರ್ಯವನ ಪಂಜರದ ಗಿಳಿಯಂತೆ ನಾನು ಬಂದಿ ಹೀಗ  ಮನವು ಹಾರಲು ಬಯಸಿದೆ ರೆಕ್ಕೆ ಬಡಿದು ಬೇಗ ಪಂಜರದಿ ನನ್ನ ಕನಸ್ಸುಗಳು ಸತ್ತು ಹೋಗಿ  ಹೇಗೆ ಬಾಳಲಿ ನಾನು ಇಲ್ಲಿ ಬಂದಿಯಾಗಿ ನನ್ನ ನೆರಳೆ ನನ್ನ ಕಾಡಿತಿಹುದು ಯಾಕೊ  ನಿದಿರೆ ಬಾರದ ದಿನಗಳೇಕೋ ಸಾಕೊ  ಯಾರಿಗಾಗಿ ಬದುಕಲೆಂತು ಸುಮ್ಮನೆ ಒಮ್ಮೆ ನೀ ಬಂದು ರಕ್ಷಿಸು ಓ ದೇವನೆ  ಓ ದೇವನೆ ಕೇಳು ಬಂದಿಯಾದೆ ನಾನು ಈ ಕೋಣೆವೊಳಗೆ ಆಸೆಗಳ ಕಿತ್ತು ಕನಸುಗಳು ಸತ್ತ ಈ ಮನೆ ಒಳಗೆ ಯಾರ

ಚುಕ್ಕಿ ಚಂದ್ರಮ

Image
ಭಾನಂಗಳದಿ ಹೊಳೆವ ಚಂದ್ರಮ ನೋಡುತ ಇರುಳ ಕಳೆವೆ ಅನುಪಮ  ನಕ್ಷತ್ರಗಳ ಗೂಡಿನಲ್ಲಿ ಬೆಳಗುವೆ ಸುತ್ತುತ ಭೂಮಿಯನ್ನು ಅಲೆವೆ ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ ನೀಲಿ ಆಕಾಶದಿ ನಿನ್ನದೇ ತಾನೇ ಸಾಮ್ರಾಜ್ಯ ಹುಣ್ಣಿಮೆ ಬೆಳಕ ಚೆಲ್ಲಿ ಚಲಿಸುತಾ ರಾಜ್ಯ ಮೋಡದ ನಡುವೆ ಕತ್ತಲು ಬೆಳಕ ವ್ಯಾಜ್ಯ  ಓಡುತ ರಾತ್ರಿಯಲಿ ನಿನ್ನೆ ನೀನು ಮರೆವೆ ಕಾಣದೊಂದು ಕಾಡಿನಲ್ಲಿ ಅವಿತು ಕೂತು ಕರೆವೆ ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ  ಮುಸ್ಸಂಜೆಯ ಬಾನಿನಲ್ಲಿ ನಿನ್ನದೇ ಛಾಯೆ ಒಲವು ಬೆಸೆವ ರಾತ್ರಿಯೇ ಆ ನಿನ್ನ ಮಾಯೆ ಹಕ್ಕಿಗಳ ಸದ್ದಿನಲ್ಲಿ ತಾಂಗಳಿಲಿ ಚುಕ್ಕಿ ಚಂದ್ರಮ ತಾರೆಗಳ ಬೀದಿಯಲ್ಲಿ ಏನೋ ಸಂಭ್ರಮ ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ   ನಕ್ಷತ್ರಗಳ ತೋಟ ನಗುವ ನಿನ್ನ ನೋಟ  ಬದುಕು ಸೆಳೆವ ಸುಂದರ ಮೈಮಾಟ  ಇರುಳ ರಾತ್ರಿಯಲಿ ಬೆಳುಕು ಚೆಲ್ಲಿ ಕಾಟ  ಕಣ್ಣ ಅಂಚಿನಲಿ ಕಾಣತಾ ನಲಿವ ಓಟ ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ  ********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -23

Image
ಮನದ ಮಾತು ಸುಳ್ಳಾದೊಡೆ  ಊಣ್ಣುವ ಅನ್ನ ಕೆಂಪಾದದೊಡೆ  ಕುಡಿವ ಹಾಲು ವಿಷವದೊಡೆ ಬೇಲಿ ಎದ್ದು ಹೊಲ ಮೆದೊಡೆ ಯಾರನ್ನು ಬೇಡಲಿ ಶಿವನೇ..... ನಮ್ಮ ಬಸವಣ್ಣ ನಾನು ಎನ್ನುವವರ ಅಳಿವು ನೋಡ ನಮ್ಮವ ಎನ್ನುವುದು ಒಳಿತು ನೋಡ ಕುಡಿ ಬಾಳು ಸ್ವರ್ಗ ನೋಡ  ಭಕ್ತಿಯಲಿ ಮಿಂದು ಪೂಜಿ ಮಾಡ  ಕಾಯಕದಿ ಶಿವನ ಅವತಾರ ಕಾಣುವುದು.... ನಮ್ಮ ಬಸವಣ್ಣ  ಜಗದಿ ಜನರು ಸ್ವಾರ್ಥದಿ ಹುಚ್ಚೇದ್ದು ಕುಣಿವಾಗಾ ನ್ಯಾಯವನು ಅನ್ಯಾಯ ತುಳಿವಾಗ ಧರ್ಮವು ಅಧರ್ಮದಿ ನಲುಗುವಾಗ ಕಾಲವು ವಿಧಿಯ ಕೈಗೊಂಬೆ ಆಗಿರುವಾಗ  ಕಾಯಕದಿ ಬೇಡು ಕಾಲಬೈರವನ..... ನಮ್ಮ ಬಸವಣ್ಣ ***********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -25

Image
ಸಾವು ಎಂದು ಮನುಷ್ಯನ ನೋಡಿ ಬಾರದು ಕಾಲವೆಂದು ಭೂಮಂಡಲವಾ ನೋಡಿ ತಿರುಗದು ನಡೆಯುತ್ತಿರುವ ಕಾಲದಲ್ಲಿ ವಿಧಿಯ ಆಟ ನಡೆವುದು ಮನುಜ ನೀನು ಕಾಯಕದಿ ಕಾಲ ಭೈರವನ  ನೆನುವುದು ನಮ್ಮ ಬಸವಣ್ಣ ಮನಸು ಮುರಿದ ಮೇಲೆ ಪ್ರೀತಿಗೆ ಇಲ್ಲ ನೆಲೆ ವಿಶ್ವಾಸ ಕಳೆದುಕೊಂಡ ಮೇಲೆ ಸ್ನೇಹಕೆ ಎಲ್ಲಿ ನೆಲೆ ಮಾತು ಮುರಿದ ಮೇಲೆ ವಾಗ್ದಾನಕೆ ಎಲ್ಲಿದೆ ಬೆಲೆ ಕಾಯಕದಿ ಲಿಂಗವ ನೆನೆದು ಪಡೆ ನೀನು ಬೆಲೆ ನಮ್ಮ ಬಸವಣ್ಣ ಸುಡುವ ಬೆಂಕಿಗೆ ಕಬ್ಬಿಣ ಕೂಡ ಕರಗುವುದು ಮನದ ಆಸೆಗೆ ತನುವು ಕೂಡ ಕುಣಿಯುವುದು ಪ್ರೀತಿ ಬಯಕೆಗೆ ಹೃದಯ ಕೂಡ ಬೇಯುವುದು ಕಾಯಕವ ಮಾಡು ಕೈಲಾಸದಿ ಶಿವನು ಕೂಡ ಒಲಿಯುವನು ನಮ್ಮ ಬಸವಣ್ಣ ************ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -24

Image
ಮನಸ್ಸು ಸತ್ತ ಮೇಲೆ ಕನಸ್ಸಿಗೆ ಎಲ್ಲಿದೆ ಬೆಲೆ ಹೃದಯ ಸತ್ತ ಮೇಲೆ ರಕ್ತಕೆ ಎಲ್ಲಿದೆ ಬೆಲೆ ಮನುಷ್ಯತ್ವ ಸತ್ತ ಮೇಲೆ ಮನುಷ್ಯನಿಗೆ ಎಲ್ಲಿದೆ ಬೆಲೆ ಮಾಡುವ ಕಾಯಕದಿ ಶಿವನ ಕಾಣು ನೀಡುವನು  ನೆಲೆ ಬೆಲೆ ನಮ್ಮ ಬಸವಣ್ಣ ಅದೃಷ್ಟವ ನಂಬಿದರೆ ಜೀವನ ನಡೆಯದು ಮಾತಿನಲ್ಲಿ ಮನೆಯ ಕಟ್ಟಲಾಗದು ಏಣಿ ಹಾಕಿದರೆ ಆಕಾಶದಿ ನಕ್ಷತ್ರ ನಿಲುಕದು ಕಾಯಕದಿ ಪರಶಿವನ ಬೇಡು ಜೀವನ  ಸಾಕ್ಷಾತ್ಕರವಾಗುವುದು ನಮ್ಮ ಬಸವಣ್ಣ ಕುಡಿದು ಕುಣಿವವನು ಸ್ವರ್ಗ ಕಾಣ ಬಂಗಿಯಲಿ ತೇಲುವವನು ಸ್ವರ್ಗ ಕಾಣ ರಾಮರಸದಿ ನೆನೆವ ಸ್ವರ್ಗ ಕಾಣ  ಕಾಯಕದಿ ನೆನೆದು ಪರಶಿವನ ಅವತಾರ ಕಾಣ ನಮ್ಮ ಬಸವಣ್ಣ ***********ರಚನೆ ************** ಡಾ. ಚಂದ್ರಶೇಖರ. ಸಿ.. ಹೆಚ್ 

ಕಹಿಯಾ ಚೂರಿ

Image
  ಬದುಕು ಮುಗಿಸಿದ ಕಥೆ ನೂರು ನೋವಿನ ವ್ಯಥೆ ಕೇಳುವರು ಯಾರು ಮನದಿ ಒಮ್ಮೆ ನಗುವ ಆಸೆ ನನಗೆ ಕಣ್ಣೀರು ಕುದಿಯುತಿದೆ ಕುಳಿತು ಕಣ್ಣ ರೆಪ್ಪೆ ಒಳಗೆ ಒಮ್ಮೊಮ್ಮೆ ಕನಸು ನನಸ ಆದ  ಹಾಗೆ ಮನವು ನೋವಿಂದ ಹಗುರಾದ ಆಗೇ ಹೇಳಲು ಏಕೊ ಮಾತು ಬಾರದು ನೋವಲಿ ಬೆಂದ ಕಹಿಯಾ ಚೂರಿದು ಮುಂದೆ ಸಾಗುತ  ಬದುಕ ಪಯಣ ಸವಿದು ಜೋಡಿ ಎತ್ತಿನಂಗೆ ನೋಗವ ಕಟ್ಟಿ ಎಳೆದು ಮಧುರ ಕ್ಷಣಗಳು ನನ್ನಯ ಮನವ ಕಲಕಿತು ಹಾಗೆ ಹೃದಯವು ಸವಿ ಹಾಡು ಹೇಳಿತು  ನಡೆವ ದಾರಿಯಲಿ ನೋವುಗಳು ಎಷ್ಟು ಬಿಡದ ಮನದ ಆಸೆ ಹುಚ್ಚುಗಳು ಅಷ್ಟು ಬಿಟ್ಟುಬಿಡಲೇ ನನ್ನ ಕನಸುಗಳು ಇಷ್ಟು ನನ್ನ ಮನದಿ ಕೊಳೆತ ಆಸೆಗಳು ಬಹಳಷ್ಟು ಮೂಡದಿರಲಿ ನಗುವ ಬಾಳಲಿ ಬೇಸರ ಕಾಯುತಿರುವೆ ನಾನು ಮೂಡಲು ನೇಸರ ಯಾಕೋ ಏನೋ ನನ್ನ ಬಿಡದ ಅವಸರ ತಾಳದಲ್ಲಿ ಬೇರೆತಂತೆ ಮಧುರ ಗಾನ ಸ್ವರ *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಬಾಲ್ಯದ ಆಟ

Image
ಬಾಲ್ಯದ ಆಟ ಬದುಕಿನ ತುಂಟಾಟ ಪ್ರೀತಿಲಿ ಆಡಿದ ಮಕ್ಕಳ ಆಟ ಕಲಿಸಿತು ನಮಗೆ ಗೆಲುವಿನ ಪಾಠ ನಾವು ಆಡಿ ಕುಣಿದ ನಲಿವಿನ ಆಟ  ಬದುಕು ನೆನಪಿನ ಬಣ್ಣ ಬರೆದವನು ವಿಧಿಯಣ್ಣ ನೋಡು ತೆರೆದುಪ್ರೀತಿ ಕಣ್ಣ ನೀ ಹೋಗುವ ಕೊನೆ ಮಣ್ಣ ಬಾಳು ಬುಗುರಿಯ ಆಟ ಕಾಣದ ಕಣ್ಣಿನ ನೋಟ ಕಲಿಯಬೇಕು ನಾವು ಪಾಠ ಚಾಟಿಯಲಿ ತಿರುಗುವ ಆಟ ಬದುಕು ಒಂದು ಕುಂಟೆ ಪಿಲ್ಲೆ ಅಡುತ್ತಿರುವಳು ನನ್ನ ನಲ್ಲೆ ಮನೆಯಿಂದ ಮನೆಗೆ ಹಾರಿ ಅ ಅಮ್ಮಟೆ ಅಮ್ಮಾಟೆ ಸಾರಿ ಜೀವನ ಎಂಬುದು ಗೋಲಿ ನಾವು ಇಲ್ಲಿ ಸೃಷ್ಟಿಯ ಕೂಲಿ ಆ ದೇವರೇ ನಮ್ಮ ಪ್ರೀತಿ ಮಾಲಿ ಗೆದ್ದವನು ಗೆದ್ದಂತೆ ನಡೆಯಲಿ  ಜೀವನಒಂದು ಚಿನ್ನಿ  ದಾಂಡು ಆಡುವವನ ಆಟದಿ ದಾಂಡು ಒಡೆದ ಒಡೆತಕೆ ಎಗುರಿತು ಚಿನ್ನಿ ಇಡಿದವ ಕ್ಯಾಚು ನಮ್ಮ ಚೆನ್ನಿ ಚಿಣ್ಣರ ಒಲವಿನ ಕೋಲಾಟ ಕೊಲನು ಇಡಿದು ಕಲ್ಲಿಗೆ ತಟ್ಟಿ ಇಡಿಯಲು ಬಂದವಾ ಮುಟ್ಟಿ ಓಡಿದೆವು ನಾವು ಕಲ್ಲು ಕುಟ್ಟಿ ಮರಳಿನ ಮೇಲೆ ಹೊಂಗೆಯ ನೆರಳು ಮರದ ಮೇಲೆ ಕೋತಿಗಳು ಹನ್ನೆರಡು ಮುಟ್ಟಲು ಬಂದ ಕೋತಿಯು ಜಿಗಿದು ಮರದ ಕೊಂಬೆ ಕೊಂಬೆಗೆ ನೆಗೆದು ಆಡಿದ ಆಟವೆ ನಮ್ಮ ಮರಕೊತಿ ಆಡುತಾ ಬೆಳೆದೆವು ನಾವು ಟಿಕ್ಕಿ ಬೆಂಕಿಪೋಟ್ಟನ ತಿಪ್ಪೆಲಿ ಎಕ್ಕಿ ಟಿಕ್ಕಿ ಕಟ್ಟಿ ಕಲ್ಲಲಿ ಕುಟ್ಟಿ ಒಡೆದು ಗೆದ್ದು ಬಿಗಿದೆವು ಪೆಟ್ಟಿಗೆಯಲಿ ಜಡಿದು  ಹಾರಿತು ನಮ್ಮ ಬಣ್ಣದ ಗಾಳಿ ಪಟ ಏರಿತು ತೇಲಿ ಮುಗಿಲ್ಲೆತ್ತರಕೆ ಇಡಿದ ದಾರದಿ ಸುತ್ರದಾರನಾ ಆಟ ದಾರವು ಹರಿದರೆ ಸಾವು ಗಾಳಿಪಟಕೆ ಒಡೀಸೆದೆವು ನಾವು ಸೈಕಲ್ ಟೈರು ಶಾಲೆಗೆ ಒಮ್ಮೊಮ್ಮೆ

ಮುನಿಸು

Image
ಬರೆಯುವಾಸೆ ನನಗೆ ಪ್ರಣಯ ಪ್ರೇಮ ಗೀತೆ ನಿನಕಂಡ ಮನಸ್ಸು ಬರೆಯಿತೆಕೆ ಮೂಖ ವಾರ್ತೆ ಒಲವು ಏಕೊ ಏನೋ ನನ್ನ ಕರೆಯಲಿಲ್ಲ ನಿನ್ನ ನೋಡಿದ ನೆನೆಪು ನಾ ಮರೆಯಲಿಲ್ಲ ದೂರದ ಊರಿನಿಂದ ಅಳಿಯ ಮನೆಗೆ ಬಂದ ಗಂಟು ಮೊರೆ ಕಟ್ಟಿ ಮನದ ಬಾಗಿಲಲ್ಲಿ ನಿಂದ ಯಾಕೋ ಎಂತೋ ಏನೋ ಕೇಳಿದೆ ಒಳಿತು ಮನದಿ ಆಸೆ ಹೊತ್ತು ಕನಸ್ಸು ಆಗ ತಿಳೀತು ಯಾಕೋ ನನ್ನ ರಾಜ ಏಕೆ ನೀನು ಮಂಕು ಕುಣಿಯಲು ಬಾರದವಗೆ ನೆಲವು ತಾನೇ ಡೊಂಕು ಮನಸ್ಸು ಮುರಿದೆ ನಾನು ಮಾತು ಆಡಿ ಕೊಂಕು ಹೃದಯ ಕಲಕಿ ನಂಗೆ ಹಿಡಿದಂತೆ ಸೋಂಕು ಇಗೆ ಇದ್ರೆ ಎಗೆ ಜೊತೆ ಒಮ್ಮೆ ಮಾತಾಡು ನನ್ನ ಜೊತೆ ಹೊರಡು ಸುತ್ತೋಣ ಕಾಡು ಮೆಡು ನಡೆವ ನಾವು ಜೋಡು ಗಿಣಿಗಳಂತೆ ಕುಕ್ಕಿ ಕುಕ್ಕಿ ತಿಂದ ಅಳಿಲುಗಡಕ ಮಾವಿನಂತೆ ಮನಸು ಕಲೆತು ಬೆರೆತು ಬರೆದ ಪ್ರೇಮ ಗೀತೆ ಮುನಿಸು ಮಾಯವಾದ ಒಲವ ಹಾಡ ಕವಿತೆ ಜೋಡಿ ಜೋಡಿಯಾಗಿ ಸುತ್ತುತ ಊರು ಮರೆತು ನಮ್ಮ ಮುನಿಸ ಜಾತ್ರೆ  ಜೋರು ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕವಿತೆ ನೀನು

Image
ಆ ಆ ತ ನ ನಾನಾ ನನ  ಹೆ ಹೃದಯ ನೀನು ಬಡಿತ ನಾನು.......... ನಾನು ನೀನು ಸವಿಯಾದ ಬದುಕ ಪ್ರಣಯ ಗೀತೆಯಂತೆ ಹೆ  ಹೃದಯ ನೀನು ಬಡಿತ ನಾನು.........   ನಿನ್ನ ಒಲವ ಸ್ನೇಹ ಸಿಹಿ ಮತ್ತು ತಂದಿದೆ ನಿನ್ನ ಒಲವ ಸ್ನೇಹ ಮತ್ತು ತಂದಿದೆ ನಿನ್ನ ಜೊತೆ ಕೂಡಿ ಬಾಳೋ ಆಸೆ ಬಂದಿದೆ ಹೇಯ್ ಹೇಯ ನಿನ್ನ ಜೊತೆ ಕೂಡಿ ಬಾಳೋ ಆಸೆ ಬಂದಿದೆ ನನ್ನಾಸ್ಸೇ ನಿನ್ನಲ್ಲಿ ಪ್ರೀತಿಯಾಗಿ ಮನಸ್ಸು ಕರೆದು ಬಂದು ಹೋಗಿ  ಹೆ  ರಾಗ ನೀನು ತಾಳ ನಾನು.......  ನಿನ್ನ ಹಾಡು ಕೇಳಿ ಆ ಕೋಗಿಲೆಯು ಕೂಗಿದೆ  ನಿನ್ನ ಹಾಡು ಕೇಳಿ ಕೋಗಿಲೆಯು ಕೂಗಿದೆ ನಿನ್ನ ನಗುವ ನೋಡಿ ಮನವು ಮೂಕವಾಗಿದೆ ನಿನ್ನ ನೋಟ ಕಂಡು ಕಲ್ಲು ಶಿಲೆಯಾಗಿದೆ  ಹೇಯ ಹೇಯ ನಿನ್ನ ನೋಟ ಕಂಡು ಕಲ್ಲು ಶಿಲೆಯಾಗಿದೆ  ನಿನ್ನಿಂದ ಪ್ರೀತಿ ಹಾಡು ಕೇಳಿ ಕುಣಿವ ಆಸೆ ಹೆ  ಮಾತು ನೀನು ಮೌನ ನಾನು............  ನಿನ್ನ ಕಂಡ ನನ್ನ ಮನುವು ಉಯ್ಯಾಲೆಯಂತೆ ತೂಗಿದೆ ನಿನ್ನ ಕಂಡ ನನ್ನ ಮನುವು ಉಯ್ಯಾಲೆಯಂತೆ ತೂಗಿದೆ  ನನ್ನ ಮನವು ಏಕೊ ನಿನ್ನೆ ಬೇಡಿದೆ ಹೆಯೇ ಹೇಯ ನನ್ನ ಮನವು ಏಕೊ ನಿನ್ನೆ ಬೇಡಿದೆ ಹೆ ಮನಸ್ಸು ನೀನು ಕನಸ್ಸು ನಾನು...,........ ನಿನ್ನ ಮನಸ್ಸು ನನ್ನೇ ಬೇಡಿದೆ ಒಲವ ರಾಗದಿ ಮರೆತು ಹೋಗಿದೆ ನಿನ್ನ ಮನಸ್ಸು ನನ್ನೇ ಬೇಡಿದೆ ಒಲವ ರಾಗದಿ ಮರೆತು ಹೋಗಿ ನಮ್ಮಿಬ್ಬರ ಪ್ರೀತಿ ಕೊನೆಯಗಲಾರದೆಂದು  ಹೆ  ಕವನ ನೀನು ಕವಿಯು ನಾನು............. ನಾನು ನೀನು ಇಂಪಾಗಿ ಹಾಡೋ ಹಾಡಿನಂತೆ ನಾನು ನೀನು ಮರೆತು ಕುಣಿವ ನಾಟ್ಯದಂತೆ

ಒಲವ ಸಿಹಿ ಮುತ್ತು

Image
ಒಲವ ಸಿಹಿಮುತ್ತು ಜೇನಾಯಿತೇ ನಿನ್ನ ಮನವೆಕೋ ನನ್ನ ಕರೆಯಿತೇ ಮನದ ಮೌನ ರಾಗಾ ಹಾಡಾಯಿತೇ ಕೂಗಿ ಕರೆದ ಧ್ವನಿಯು ಸ್ವರವಾಯಿತೇ ಎಷ್ಟು ಸಾರಿ ನೋಡಿದರು ಅಳಿಸದ ಛಾಯೆ ಅವಳ ನೆನಪು ನನ್ನ ಕಾಡೋ ಮಾಯೆ ಬಣ್ಣಗಳ ಕುಂಚದಲ್ಲಿ ಅರಳಿದ ಅರಗಿಣಿ ಬಾಳ ಪುಟದಲ್ಲಿ ಮುದ್ದಿನ ಗಣಿ ಮಾತು ಮಾತಿಗೆ ಕನಸ್ಸಯ್ತುಮೌನ ಮೌನದ ಮನಸ್ಸು ನನ್ನೆದೆಯ ಪ್ರಾಣ ಹೃದಯದಲ್ಲಿ ಅರಳಿದ ನಗುವ ಪ್ರೀತಿ ಕವಿತೆ ಬಾಡದಿರಲಿ ಮಲ್ಲಿಗೆ ಕನಸ್ಸು ಮರೆತು ವನಿತೆ ಬದುಕು ಬಯಸಿದ ಒಲವು ಎಷ್ಟು ಸುಂದರ ನೋಟದಿ ಸೆರೆಯಾದ ಅನುಭವ ಮಧುರ  ಕೈಗೆ ಕೈ ತಾಗಿ ಮನಸ್ಸು ಮಾತು ಚೆಂದ  ನಿನ್ನ ನೆನಪ ಸವಿಯೇ ಪ್ರೀತಿ ಅಂದ  ಎ ಹುಡುಗಿ ಹೇಳಬಾರದೇ ಮಾತು ನನ್ನದೇಯ ಗೂಡಿನಲಿ ನೀ ಅವಿತು ಕುಳಿತು ಬಡಿವ ಹೃದಯದಿ ಸದ್ದು ನಿನದೆ ಹರಿವ ರಕ್ತದಲ್ಲಿ ಒಲವ ದಾರಿ ನನದೆ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನನಸಾ ಕನಸ್ಸು

Image
ಬದುಕು ಭರವಸೆಯ ನೂರಾಸ್ಸೇ ಮನಸ್ಸು ಕನಸ್ಸುಗಳ ಸವಿಕುಸ್ಸೇ ಹೃದಯ ಮಿಡಿತದಿ ಹೂವ್ವಾಸ್ಸೇ ನೀನೆ ನನ್ನ ಮನದ ಒಲವ ಆಸೇ ಕನಸ್ಸುಗಳ ಹಾದಿಯಲಿ ಕೊಲಮಿಂಚು ಮನದ ಆಸೆಗೆ ಗುಡುಗಿನ ವಂಚು ಸುರಿವ ಮಳೆ ಹನಿಯಾಗುವ ಸಂಚು ಹನಿ ಬಿದ್ದ ಹೂವು ಜಡೆಯಾಗುವ ಕುಂಚು ಏರಿಳಿತದ ಜೀವನದಿ ನೋವು ಸಹಜ ತುಂಬಿರಲಿ ಬಾಳಲಿ ಪ್ರೀತಿ ಕಣಜ ಮನ ಶುಭ್ರವಾಗಿರಲಿ ನದಿಯಂತೆ ಜಲಜ ಪಯಣದಿ ಸಾಗಬೇಕು ವಿಧಿ ಆಟದಂತೆ ಮನುಜ ಯಾರಿಗೂ ಕಾಣದ ಖುಷಿ ಮನದಿ ಬದುಕಬೇಕು ಬಾಳು ನೋವಿನ ಕಣದಿ ಕೊಡಬೇಡ ದೇವಾ ಬಾಳು ಬೇರೆಯವರ ಹೃಣದಿ ನೀನಿಟ್ಟಂಗೆ ಆಗಲಿ ಒಲವ ಸರದಿ  ಕಾಣದ ತೀರದಿ ನಾ ಬಂದಿಯಾದೆ ನೂರಾಸ್ಸೇ ಒತ್ತು ನಾ ಚಿಂದಿಯಾದೆ ನನ್ನಾಸೆ ಕಿತ್ತು ನೀ ಏಕೆ ಮೂಕವಾದೆ ನಡೆಯಲಿ ಒಲವ ತೇರು ಮರೆತು ಬಾದೆ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಏಕಾಂತದ ಮೌನ

Image
ಏಕಾಂತದಿ ಒಲವ  ಮೌನ ನನ್ನೆದೆಯ ತಾಕಿರಲು ನಿನ್ನ ನಯನ ಉಸಿರು ಉಸಿರು ಹೇಳಿದೆ ಗಾನ ಮನದ ಪಿಸು ಮಾತಿನ ಕವನ ಮನದ ಮೌನವು ಏಕೆ ಇಗೆ ಒಲವು ಮುಂಜಾನೆ ಬೆಳಕ ಹಾಗೆ ಕಿರಣ ಚೆಲುವ ಹೂವೊಂದು  ತಾಗಿ ಹೂವು ಮನದಿ ಒಲವಲಿ ಬಾಗಿ ನೋಟದಿ ನುಡಿದಿದೆ ಪ್ರೀತಿ ನಮನ ಇರುಳ ಕತ್ತಲೆಗೆ ಚಂದ್ರನ ಹೊಳಪು ನಕ್ಷತ್ರಗಳು ನಗುತಾ ಮಿಣುಕು ನೋಡುತ ಹಾಗೆ ಮನವು ಮೌನ ನುಡಿದಿದೆ ನನ್ನೆದೆಯ ಪ್ರೀತಿ ಗಾನ  ಮನದಿ ಕನಸ್ಸುಗಳ ಸವಿನೆನಪು ಕಾಡಿದೆ ಏಕೊ ಬಿಡದೆ ನೆರಳಂತೆ ನೆರಳು ಮರೆಯಾಗೋ ಒಳಗೆ ಮೂಡಿದೆ ಏಕಾಂತದಿ ಒಲವ ಮೌನ ಹಸಿರು ವನದ ಕಾಡಿನಲ್ಲಿ ಎಲೆಗಳ ಚಟ ಪಟ ಸದ್ದು ಕೇಳಿ ತಂಗಾಳಿಯ ಸುಯ್ ಎನ್ನುವ ಗಾಳಿ ಹಾಡಿದೆ ಮನದಿ ಏಕಾಂತದ ಮೌನದ ಹೋಳಿ ಹುಲ್ಲು ಬಯಲ ಹಾಸಿನಲ್ಲಿ ಹಸಿರೂದ್ದು ಹುಟ್ಟ ಭೂಮಿ ನೋಡಿ ಹಸು ಎಮ್ಮೆ ಕರುಗಳು ತಿಂದು ಕರುವು ಹಸುವನು ಅಂಬ ಎಂದು ಕೋಗಿದೆ ಮನವು ಕಲಕೋ ಏಕಾಂತದ ಮೌನ  **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಅಮ್ಮನ ಏನ್ನುತ

Image
ಕಾಣದ ಕೈಯೊಂದು          ಬೀಸಿ ಕರೆಯಿತು ನನ್ನ ನಾ ಈ ಜಗವ ತಿರುಗಿ           ನೋಡುವ ಮುನ್ನ ಮನಸ್ಸಿನಲಿ ಕರೆದವರ            ಒಲವ  ಬಿಂಬ ನಾ ಬಂದು ಈ ಭೂಮಿಗೆ            ಸೇರುವ ಜಂಬ ನೋವುಗಳ  ಬಚ್ಚಿಟ್ಟು             ನನ್ನ ಹಡೆದಳು ಭೂಮಿಗೆ ಬಂದೆ  ನಾನು             ಹೆತ್ತವಳ ದಯೆಯಿಂದ ಅಳುವ ನನಗೆ                       ಅಮೃತವೆರೆದಳು  ಪ್ರೀತಿ ನೆರಳಲಿ ನನ್ನ               ಪೊರೆದಳು ಬೆಳೆದು ಅಂಬೆಗಲಿಟ್ಟು ನಿಂತು              ನಡೆದೇ ನಾನು ಕೂಗಿದ ಮೊದಲ ಪದ              ಅಮ್ಮ ಎಂದು ಹೆತ್ತವಳ ಕಣ್ಣಲಿ               ನೀರು ಬಂದು ತಬ್ಬಿದಳು ನನ್ನ ಮುದ್ದು                ಕಂದ ಎಂದು ತಾಯಿ ಅಕ್ಕರೆ ಎಷ್ಟು ಇತ               ನನ್ನ ಸಲವುತ ಬೆಳೆದೆ ನಾನು ಪ್ರೀತಿಯಲಿ               ಅಮ್ಮ ಎನ್ನುತ ಅಮ್ಮ ಎನ್ನುವುದೇ                ಒಂದು ಸಂಭ್ರಮ ಮಧುರ ಬಾಂಧವ್ಯದ                 ಒಲವ ಸಂಗಮ ಅವಳ ಕರುಳ ಬಳ್ಳಿ                   ನನಾಗಿ ಬೆಳೆದೆ ಅಮ್ಮ ಎನ್ನುತ                   ಜೀವನವ ಕಳೆದೆ  **********ರಚನೆ *********   ಡಾ. ಚಂದ್ರಶೇಖರ. ಸಿ. ಹೆಚ್

ಪುನರವಿವಾಹ

Image
ಮದುವೆ ಎಂಬ ಒಲವ ಬಂಧನ ಮನಸ್ಸುಗಳ ಪ್ರೀತಿ ಸಮ್ಮಿಲನ  ಸೇರುವ ಸಲುಗೆಯಲಿ ನಯನ ಬೆರೆವುದು ಇಬ್ಬರ ತನು ಮನ ಬಯಸಿ ನನ್ನವಳ ಪಡೆದು ಅವಳ ಕೆನ್ನೆಯ ಇಡಿದು ಹೃದಯದಲಿ ಮಾತು ಬೆಸೆದು ಮನಸ್ಸು ಹುಚ್ಚೇದು ಕುಣಿದಅಂತೇ ಕಾಣದ ವಿಧಿಯ ಕೈ ಆಟದಿ ಹಣೆಬರಹ ಬರೆದವನ ಮೋಸದಿ ಬಂಧನ ಮುರಿದು ಬೇರೆ ಆದ ಜೀವ ಕಳೆಯುತ ಮನದ ನೋವ ಸಮಯ ಸರಿದು ಜೇವನ ಬರಿದು ಬೇಕು ಸಂಗಾತಿ ಬದುಕ ಒಡತಿ ಮನವೆಕೋ ಬಯಸಿದೆ ಪುನರವಿವಾಹ ಬದುಕಿಗಾಗಿ ಮತ್ತೊಮ್ಮೆ ಮೋಹ ವಾತ್ಸಲ್ಯ ಇದ್ದಲಿ ಅನುರಾಗ ಕಲೆತು ಹರಿವ ಶುಭ ಯೋಗ ಪ್ರಣಯದ ಹಕ್ಕಿಗಳ ಭೋಗ ಪ್ರೀತಿಯ ಒಲವಿನ ಸುಯೋಗ ಇರದೇ ಹೋದರೆ ಒಂದು ಎಂದು ಬಾಳ್ಬೇಕು ಖುಷಿಯ ಕೊಂದು ಮನವೆರಡು ಜೀವದಿ ನೊಂದು  ಬದುಕು ಬೆಂಕಿಯಲಿ ಬೆಂದು ಮೊದಲನಂತೆ ಖುಷಿಯಿಲ್ಲ ಮನಸ್ಸಿನ ಕಥೆ ವ್ಯಥೆಯೆಲ್ಲಾ ಇಬ್ಬರ ನಡುವೆ ಅನುಬಂಧ ಸತಿಪತಿ ಎಂಬ ಸಂಬಂಧ ಕಾಲವ ಮುಂದೆ ನೂಕುತ ಮನಸ್ಸುಗಳ ಕುಲುಮೆ ಬೇಯುತ ಜೊತೆಗಿದ್ದೇವೆ ಎಂದು ಸಾರುತ ಬಿಸದಿರಲಿ ಚಂಡ ಮಾರುತ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಓ ಒಲವೆ

Image
ಕಣ್ಣ ನೋಟದಿ ಸೆರೆಯಾದ           ಕುಸುಮವೇ ಮನಸ್ಸಿನ ಅಳದಿ ಒಲವಾದ            ಪಾರಿಜಾತವೇ ಹೃದಯದಿ ಬಡಿವ ಇಂಪಾದ             ಸಂಗೀತವೇ ಕನಸ್ಸಲು ಕುಣಿವ ನವಿಲ              ನಾಟ್ಯವೇ ಗುಡುಗಿನಲಿ ಮಿಂಚಾಗಿ ಸಿಡಿಲು         ಬಡಿದಂತಾಯ್ತು ನನ್ನ ಒಲವ ಕನಸ್ಸಿನ ಮಳೆ         ಬಂದಾಯ್ತು ನನ್ನ ಉಸಿರ ತಂಪು ಗಾಳಿ ನಿನ್ನ         ಕರೆದಂತಾಯ್ತು ಮನದ ಆಸೆ ಎಲ್ಲಾ ಹೂ ಬಿಟ್ಟು          ಹಸಿರಾದಂತಯ್ತು ಬೇಸಿಗೆಯ ಸುಡೋ ಬಿಸಿಯಲಿ            ತಂಪಾದ ಪ್ರೀತಿ ಒಲವ ಮನದ ಅಲೆಯಲಿ             ತೇಲುವ ರೀತಿ ವಿರಹದ ಬಿಸಿ ತಾಪಕೆ ಮಂಜು             ಕರಗುವ ನೀತಿ ಮನಸ್ಸುಗಳು ಕದಡಿ ಮುದುಡಿ             ನಲುಗುವ ಭೀತಿ  ಕನಸ್ಸುಗಳು ನಿರಂತೆ ಹರಿದು         ನನ್ನೆದೆಯ ತಾಕಿ ಗುಳಿ ಬಿದ್ದ ಕೆನ್ನೆಯ ಗುಂಡಿಗೆ         ನನ ನೂಕಿ ಮುದ್ದಾದ ನಿನ ನಗುವಿಗೆ     ನಾನು ಗಿರಾಕಿ ಮಾತುಗಳ ಸಪ್ಪಳಕೆ ಕಟ್ಟಬೇಕು         ಮುತ್ತಿನ ಬಾಕಿ ಕಣ್ಣ ನೋಟ ಏಕೋ ಕಾಡಿದೆ      ಕಾಮನಬಿಲ್ಲಂತೆ ಎಳು ಬಣ್ಣಗಳು ಹೇಳಿದೆ      ನಾಟಿದ ಕನಸ್ಸ ನಂತೆ ಬಣ್ಣದಿ ನಾನು ನಿನ್ನಲ್ಲಿ ಬೆರೆತ         ಹೋಳಿಯಂತೆ  ಪ್ರೀತಿಯ ಮಧುರ ಬಾವದಿ ನೋಟ          ಬೇರೆತಂತೆ ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನನ್ನವಳು

Image
  ನಗುವ ನಲಿವಾದವಳು ನನ್ನವಳು ಪ್ರೀತಿಯ ಮುದ್ದು ಅರಗಿಣಿ ಅಂತಾವಳು ಮನಸಸ್ಸಿನ ಅಲೆಯೇ ನನ್ನವಳು ಸಮುದ್ರದಿ ಕಪ್ಪೆ ಚಿಪ್ಪಾಗಿಹಳು ಬಳುಕುವ ಬಳ್ಳಿ ನನ್ನವಳು ವಿಳ್ಯದೆಲೆಯಂತೆ ಮನಕೆ ಹಬ್ಬಿಹಳು ಜಿನುಗುವ ಜೇನುಗೂಡು ನನ್ನವಳು ಸಿಹಿಯಾದ ಜೇನು ತುಪ್ಪವಾಗಿಹಳು ಹಾಲಿನ ನೊರೆಯಂತೆ ನನ್ನವಳು ತುಟಿಗೆ ಸವರಿದ ಸಿಹಿಯಾಗಿಹಳು ಸುಮುದುರ ಸಂಗೀತ ನನ್ನವಳು ಮಧುರ ಬಾವದ ಹಾಡಗಿಹಳು ಕನಸ್ಸಲಿ ಕಂಡ ಪ್ರೇಯಸಿ ನನ್ಮವಳು ಭೂಮಿಗಿಳಿದ ಅಪ್ಸರೆಯಾಗಿಹಳು ನೋಟದಲ್ಲಿ ಚೂರಿ ನನ್ನವಳು ಹೃದಯ ಗೆದ್ದ ಸುಂದರಿಯಾಗಿಹಳು ಮಾತಿಗೂ ಸಿಗದ ಮೌನ ನನ್ನವಳು ತಂಗಾಳಿಯಲಿ ಪಿಸುಗುಟ್ಟೀಹಳು ಬಂಗಾರದ ಪೆದ್ದು ಗಣಿ ನನ್ನವಳು ಇರುಳಿನಲಿ ಒಳೆವ ಹುಣ್ಣಿಮೆ ಚಂದ್ರನ ಬೆಳಕಾಗಿಹಳು  ***********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -22

Image
ಕುಲ ಯಾವುದು ಕುಲ ಯಾವುದು ಕೆಳದಿರಯ್ಯ ಜೀವವಿರುವ ಸಕಲ ಜೀವಿಗಳು ಒಂದೇ ಕುಲ ಸಾವಿಗೆ ಕುಲವಿಲ್ಲ ಎಲ್ಲರೂ ಸಾಯಲೇಬೇಕಲ್ಲವೇ ತಿನ್ನುವ ಅನ್ನ ಕುಲ ಕೇಳುವುದೇನಯ್ಯ  ಮಾಡುವ ಕಾಯಕ ಕುಲ ಕೇಳುವುದೇ ನಮ್ಮ ಬಸವಣ್ಣ ಭರದ ಹಳ್ಳದಿ ನೀರು ಹರಿದೊಡೆ ಬಂಜರು ಭೂಮಿಗೆ ಮಳೆ ಬಂದೊಡೆ ಭಕ್ತಿಯೇ ಇಲ್ಲದವನಿಗೆ ಶಿವ ಒಲಿದೊಡೆ ಕೆಲಸ ಇಲ್ಲದವನಿಗೆ ಕಾಯಕ ಸಿಕ್ಕೊಡೆ ಸುಖದ ಸಾಗರ ತೆರೆದಂತೆ  ನಮ್ಮ ಬಸವಣ್ಣ ಇಷ್ಟವ ನೆರವೇರಿಸುವ ಇಷ್ಟಲಿಂಗ ಆತ್ಮ ಶುದ್ದಿ ಇಡುವ ಆತ್ಮಲಿಂಗ ಆಸೆಗಳ ಸಿದ್ದಿಸುವ ಸಿದ್ದಲಿಂಗ ಜ್ಯೋತಿ ಬೆಳಗುವ ಜ್ಯೋತಿರಲಿಂಗ ಕಾಯಕದಿ ಕೈಲಾಸ ಕಾಣು ಪೂಜಿಸಿ ಶಿವಲಿಂಗ ನಮ್ಮ ಬಸವಣ್ಣ ************ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -21

Image
ಹೃದಯದಿ ಶ್ರೀಮಂತನಾಗು ಮನಸ್ಸಿನಲಿ ಮಡಿವಂತನಾಗು ಕಷ್ಟಗಳಿಗೆ ಧೈರ್ಯವಂತನಾಗು ಮಾತಿನಲ್ಲಿ ವಿಚಾರವಂತನಾಗು ನಡತೆಯಲಿ ಆಚಾರವಂತನಾಗು  ಪ್ರಕೃತಿಯ ಆರಾಧಕನಾಗು ಲಿಂಗಕೆ ನಿಷ್ಠಾವಂತನಾಗು  ಕಾಯಕಕೆ ಭಕ್ತಿವಂತನಾಗು ನಮ್ಮ ಬಸವಣ್ಣ ಮೇಲು ಕೀಳು ಮರೆತುಬಿಡು ಎಲ್ಲಾ ತನ್ನವರೆಂದು ತಿಳಿದೂಬಿಡು ಮೋಸ ಮಾಡಿದವರ ಪರಶಿವನಿಗೆ ಬಿಟ್ಟು ಬಿಡು  ಕಾಯಕವ ಶ್ರದ್ದೆಯಿಂದ ಕಲಿತು ಮಾಡಿಬಿಡು ಮನಸ್ಸಿಗೆ ತೃಪ್ತಿ ಸಿಗುವುದು ನಮ್ಮ ಬಸವಣ್ಣ ಜೀವನದಿ ಘಮ ಇದ್ದಾಗ ಮಲ್ಲಿಗೆ ಏಕೆ ಎಲ್ಲರೂ ನಮ್ಮವರೆ ಆದಾಗ ನಂಬಿಕೆ ಪ್ರಶ್ನೆ ಏಕೆ ಇಷ್ಟಗಳು ನೆರವೇರಿದಾಗ ಹಣದ ಹಂಗೇಕೆ  ಕೈ ತುಂಬಾ ಕೆಲಸವಿರಲು ಏಕಾಂತದ ಹಂಗೇಕೆ ನಮ್ಮ ಬಸವಣ್ಣ ************ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್ 

ತಾಯಿ

Image
ಹೆತ್ತವಳು, ಹೊತ್ತವಳು, ಸಾಕಿ ಸಲಹಿ, ಹಾಲುಣಿಸಿ, ಹಸಿವ ನಿಗಿಸಿ ಪೋಷಿಸಿದವಳು ತಾಯಿ ಅಲ್ಲವೆ  ಅಂಬೇಗಾಲು ನಾನು ಇಡುವಾಗ, ತೆವಳಿ ನಡೆವಾಗ, ಬೀಳದಂತೆ  ಜೋಪಾನ ಮಾಡಿದವಳು ತಾಯಿ ಅಲ್ಲವೆ  ಮಗುವಿನಲ್ಲಿ ಸುಸು ಮಾಡಿ ಬಟ್ಟೆಗಳು ಒದ್ದೆಯಾದಾಗ ಒಂಚೂರು ಬೇಸರಿಸದೆ ನಮನ್ನು ಶುಭ್ರ ಮಾಡಿದವಳು ನಮ್ಮ ತಾಯಿ ಅಲ್ಲವೆ  ಅರ್ಧ ರಾತ್ರಿಯಲಿ ನಾನೆದ್ದು ಅಳುವಾಗ ನಿದ್ದೆಗೆಟ್ಟು, ನೀ ದಣಿದರು ಜೋಗುಳ ಆಡಿದವಳು ನಮ್ಮ ತಾಯಿ ಅಲ್ಲವೆ  ನಾವು ಬೆಳೆದು ದೊಡ್ಡವರಾದರು  ಮನೆಯ ಮರವನು ಪೋಶಿಸುವಂತೆ ನಮ್ಮನ್ನು ಬೆಳಿಸಿದವಳು ತಾಯಿ ಅಲ್ಲವೆ  ಕಷ್ಟದಲಿ ನಾವು ಬೆಂದು ಮನದಿ ನೊಂದು ಹಣಕಾಗಿ ಕಂಗಲಾದಾಗ, ಬರಣಿಯಿಂದ ದುಡ್ಡು ಕೊಟ್ಟವಳು ತಾಯಿ ಅಲ್ಲವೆ  ಊಟ ಮಾಡದೆ ನಾವು ಇರುವಾಗ ನಮ್ಮ ಹೊಟ್ಟೆಯ ಹಸಿವ ಕಂಡು ಕೈತುತ್ತ ಕೊಟ್ಟವಳು ತಾಯಿ ಅಲ್ಲವೆ  ನಾನು ಜೀವನದಿ ಸೋತು, ಆತಶಾನಾಗಿ ಬೇಸರದಿ ಕೈ ಕಟ್ಟಿ ಕುಳಿತಾಗ ನನಗಾಗಿ ಕಣ್ಣೀರು ಸುರಿಸಿದವಳು ತಾಯಿ ಅಲ್ಲವೇ ನೋವು ನಲಿವುಗಳಲ್ಲು ನಮ್ಮಗೆ  ಧೈರ್ಯ ಕೊಟ್ಟವಳು ಜೊತೆಗೆ  ಇದ್ದವಳು ತಾಯಿ ಅಲ್ಲವೆ ಎಲ್ಲಾ ನೋವು ದಾಟಿ, ಹೆತ್ತ ಮಕ್ಕಳು, ನೀನೊಬ್ಬ ದಡ್ಡಿ, ಏನು ತಿಳಿಯದು ಎಂದು ಜಗಳವಾಡುವಾಗ ಸಿಟ್ಟನ್ನು ಸಹಿಸಿ, ನಾನೇಕೆ ಹೆತ್ತೆ  ಎಂದು ಕೊರಗದೆ, ಸಹನೆ , ಶಾಂತಿ, ವಿನಯದಿ  ಕ್ಷಮಯದರಿತ್ರಿ ತಾಯಿ ಅಲ್ಲವೆ   ತಣ್ಣನೆಯ ಬಾಳಿನಲಿ ಬಿರುಗಾಳಿ ಬಿಸಿದರು, ತಡೆದವಳು ನಮ್ಮ ಪ್ರತಿ ಹೆಜ್ಜೆಯಲು ಉಸಿರಾಗಿ, ಬಲವಾಗಿ, ಚಲವಾಗಿ ನಿಂತವಳು ನಮ್ಮ  ತ

ವಚನಗಳು- 20

Image
ಮೆರೆದವರೆಲ್ಲಾ ಉರಿಯುಲೇಬೇಕು ಉರಿದವರೆಲ್ಲಾ ಕಲೆಯಲೇಬೇಕು ಕಲೆತವರೆಲ್ಲಾ ಬೇರೆಯಲೇಬೇಕು ಬೇರೆತವರೆಲ್ಲಾ  ಪರಶಿವನ ನೆನೆಯಲೇಬೇಕು ನಮ್ಮ ಬಸವಣ್ಣ ಆಡುಮುಟ್ಟದ ಸೋಪಿಲ್ಲ ಸತ್ಸಂಗ ಮಾಡಿ ಕೆಟ್ಟವರಿಲ್ಲ ಕಾಯಕವ ಮಾಡಿ ನೊಂದವರಿಲ್ಲ ಲಿಂಗವ ಪೂಜಿದರೆ ಮುಕ್ತಿ ದೊರಕುವುದು ನಮ್ಮ ಬಸವಣ್ಣ ಉರಿದುದೆಲ್ಲ ಕೆಂಡವಾಗುವುದು ಕೆಂಡವೆಲ್ಲ ಬೂದಿಯಾಗುವುದು ಬೂದಿಯೆಲ್ಲಾ ಗೋಬ್ಬರವಾಗುವುದು  ಕುದಿಯುವವರೆಲ್ಲ ಅವಿಯಾಗುವವರು  ಲಿಂಗವ ಮೆಚ್ಚಿ ನಡೆವರೆಲ್ಲಾ ಕೈಲಾಸ ಕಾಣುವರು ನಮ್ಮ ಬಸವಣ್ಣ  ************ರಚನೆ ************ ಡಾ. ಚಂದ್ರಶೇಖರ. ಸಿ. ಹೆಚ್ 

ಲಿವಿಂಗ್ ರಿಲೇಶನ್ ಶಿಪ್

Image
ಹುಡುಗಿಯ ಕಂಡು ನಲಿವ ಹುಡುಗ ಏಕೋ ಏನೋ ಮರೆತು ಜಗವ ಆಸೆಗಳ ಬುತ್ತಿ ಹೊತ್ತು ಕನಸ್ಸುಗಳ ಬುಡವ ಕಿತ್ತು ತನ್ನೆದೆಯ ತಾಳಕೆ ಕುಣಿವ ನವಿಲೊಂದು ಕಂಡು ಮನಸ್ಸು ಗರಿ ಬಿಚ್ಚಿ ಹಾರಿ ಕನಸ್ಸಿನ ರಾಣಿಯ ಸೇರುವ ಬಯಕೆ ಮನೆ ಮಂದಿ ನೋಡಿ ಹಿರಿಯರು ಕೂಡಿ ಮದುವೆಯ ತಾಳಕೆ ಕುಣಿವ ಹೆಣ್ಣು ಗಂಡುಗಳ ಅವಿನಾಬಾವ ಸಂಬಂಧ ಅರಿಸಿನ ದಾರದಿ ಬೆಸೆದು ಹೋಗುವ ಬಾಳು ಎಳ್ಳೆಜ್ಜೆಯ ಸಪ್ತಪದಿಯಲಿ ಸಂಸಾರ ಸಾಗರ ದಾಟುವ ಗೋಳು ಸತಿಪತಿಯಾಗಿ ಜೀವನವು ಸಾಗಿ ನೋವು ನಲಿವುಗಳಲಿ ಮಾಗಿ ಬದುಕು ತೂಗುವ ಜೋಕಾಲಿಯಾಗಿತ್ತು ಹಿಂದು ತನ್ನ ಕಣ್ಣ ನೋಟಕೆ ಕಂಡವಳ ಕುಡಿ ನೋಟಕೆ ಸೋತು ಮನಸ್ಸು ಕನಸ್ಸುಗಳ ಜಿದ್ದಾ ಜಿದ್ದಿಗೆ ಬಿದ್ದು  ಸಂಸಾರ ನಡೆದಾಯತಿ ಯಾರು ಇಲ್ಲದ ಮನೆಯ ನಾಲ್ಕು ಗೋಡೆಯಲಿ ನಾವಿಕ ನೂಕುವ ನೀರಿನ ತೆಪ್ಪದಂತೆ ತಾಳಿಯಿಲ್ಲದ ಕೊರಳು ಕುಂಕುಮವಿಲ್ಲದ ಹಣೆಯು ನೆರಳಿನಲಿ ಬದುಕುತ ಕಳೆವ ಜೋಡಿ  ದೂರದಿ ಕಾಣುವ ಎರಡು ಹಕ್ಕಿಯಂತೆ ಇದ್ದುಷ್ಟು ದಿನ ಸುಖವಾ ಉಂಡು ಸಂಸಾರ ನೌಕೆಯಲಿ ಸಾಗಲು ಬಯಸಿ ದೂರ ಏಕೋ ಸೇರದು ತೀರ ಬಂದು ಬಳಗದಿಂದ ಉಳಿವ ದೂರ ಎಳೆಯುತಾ ಬದುಕ ಬಾರ ಇಷ್ಟೇ ನಾವು ನಡೆವ ಬದುಕು ಕಳೆವುದು ಒಲವ ತೀರಿದ ಉಳುಕು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಬೈಕ್ ರೈಡ್

Image
  ಬಾರೆ ಹುಡಿಗಿ ಹೋಗಣ ಬೈಕ್ ರೈಡ್ ತಬ್ಬಿ ಇಡೋಕೋ ಹಾಗಬೇಡ ಸ್ಲೀಡೆ  ನೀನೆ ನನ್ನ ಲವ್ ಸ್ವೀಟ್ ಮೈಡ್ ಬಾರೆ ನನ್ನ ಲೈಫ್ ಗಾಡಿ ಗೈಡ್ ತಬ್ಬಿಕುತ್ತರೆ ಏನೋ ಒಂಥರ ತ್ರಿಲ್ಲಿಂಗ್ ನಿನ್ನ ಕಿಸ್ಸು ನಂಗೆ ಏಕೋ ತಂತು ಫೀಲಿಂಗ್ ಎಕ್ಸಲೇಟರ್ ಕೊಡುವೆ ತಬ್ಬಿ ಇಡೋಕೋ ಡಾರ್ಲಿಂಗ್ ಮಾಡ್ಲಾ ಒಮ್ಮೆ ನಾ ಬೈಕ್ ವೀಲಿಂಗ್ ಬಾರೆ ಹುಡುಗಿ ಹೋಗೋಣ ಬೈಕ್ ರೈಡ್ ಜಾಲಿ ಮೂಡಲಿ ಸುತ್ತೋಣ ಕಾಡು ಒಮ್ಮೆ ಹೇಳು ನೀ ಲವ್ ಹಾಡು ಬೈಕ್ ಫುಲ್ ಸ್ಪೀಡ್ ಅಯ್ತೆ ನೋಡು  ನನ್ನ ಮುದ್ದೂ ಹುಡುಗಿ ನೀನು ನಾನು ನಿನ್ನ ಕ್ಯೂಟ್ ಹುಡುಗ ನಾನು  ನೋಡೊತ ಹೋರಾಟವಿ ಸನ್ ಮೂನ್ ಹೇಳು ಇನ್ನು ಬೇಕು ನಮಗೆ ಏನು ಬಾರೆ ಹುಡುಗಿ ಹೋಗೋಣ ಬೈಕ್ ರೈಡ್ ಮೈ ಮೈ ತಾಗಿ ಬಾಡಿ ಹೀಟಗಾಯ್ತಿ ನೋಡು ನೀನು ಇದ್ರೆ ಏನೋ ಚೆಂದ ಅಪ್ಪಿ ಕೂತಾರೆ ಪರಮಾನಂದ  ಒಮ್ಮೆ ಕ್ಲಚ್ ಹೋತ್ತಿ ಗೇರ್ ಹಾಕಿದರೆ ಸ್ಪೀಡ್ ನಿನ್ ಅಪ್ಪಿ ಇಡಿದರೆ ಮೈ ಜುಮ್ ಜುಮ್ ನೋಡು ಚಿನ್ನ ಓಡಿಲೇ ಒಮ್ಮೆ ನಾ ಹಾರ್ನ್ ನನಗಾಗಿ ನೀನು ಇನ್ನು ಬಾರ್ನ **********-ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -19

Image
ವಿಧಿಯಾಟ ಬಲ್ಲವರು ಯಾರು ಹಣೆಬರಹ ತಿದ್ದುವರು ಯಾರು ಸಾವಿನಿಂದ ಅವಿತು ಕುಳಿತರೆ ಬಿಟ್ಟೋಗುವುದೇ ವಿಧಿ ಲಿಖಿತ ಸಾವು ಇದ್ದಷ್ಟು ದಿನ ಶಿವ ಮೆಚ್ಚುವ ಕಾಯಕ ಮಾಡು ನಮ್ಮ ಬಸವ ವಣ್ಣ ದುಚ್ಚಟಾಗಳ ಬಿಟ್ಟೋಡೆ ನಾನು ಒಳ್ಳೆಯವನೆಂದು ನಂಬಿಸಿಡೋದೇ ಮುತ್ತಿನಂತ ಮಾತು ಹಾಡಿದೊಡೆ ಸೂಳೇ ಗರತಿ ಅದೂಡೆ  ಕಳ್ಳ ಕಳ್ಳನೇ ಅಲ್ಲವೇ ನಮ್ಮ ಬಸವಣ್ಣ ಆಸೆ ಆಮಿಷವೋಡ್ಡಿ ಶುದ್ಧ ಮನಸ್ಸನ್ನು ನಾಶ ಮಾಡಿ ಸಂಶಯವ ಹುಟ್ಟಿಸಿ ಸಂಬಂಧ ಹಾಳು ಮಾಡಿ ಶುದ್ಧನಂತೆ ನಾಟಕಬೇಡ ಮರುಳೆ.. ನಮ್ಮ ಬಸವಣ್ಣ ******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್ 

ಹಕ್ಕಿ ಗೂಡು

Image
  ನೀಲಿ ಬಾನಿನಲ್ಲಿ ಹಾರುವ ಹಕ್ಕಿಯೇ ರೆಕ್ಕೆಪುಕ್ಕ ಬಡಿದು ಹಾರುವ ಹಕ್ಕಿಯೇ ಚುಯ ಚುಯ ಗುಟ್ಟಿ ಕೂಗುವ ಹಕ್ಕಿಯೇ ಹೊಟ್ಟೆಗಾಗಿ ಕಿಟಗಳ ಹುಡುಕುವ ಹಕ್ಕಿಯೇ ಮರದ ಮೇಲೆ ಗೂಡು ಕಟ್ಟಲು ಹೊತ್ತು ತಂದೆ ನೀ ಕಡ್ಡಿ ಹುಲ್ಲು ಎಣೆದೆ ನೀ ಸುಂದರ ಗೂಡು ನಿನ್ನ ಮನೆಯ ಸುಂದರ ನೋಡು ಗುಬ್ಬಚ್ಚಿ ಗೂಡನು ಮರದಿ ಜೋತು ಬಿಟ್ಟು  ಗೂಡಿನಲಿ ಎರಡು ಮೊಟ್ಟೆ ಇಟ್ಟು ಪ್ರೀತಿಯಿಂದ ಬಿಸಿ ಕಾವ ಕೊಟ್ಟು ತಂದಿಟ್ಟೆ ಮರಿ ಹಕ್ಕಿಗೆ ಸ್ವಲ್ಪ ಹಿಟ್ಟು ಹಾರುತ ಹೊಡಿದೆ ನೀ ಹಕ್ಕಿಗಳ ಬಿಟ್ಟು  ಹಕ್ಕಿಗಳು ಕೂಗುತಾ ನಿನ್ನ ಕರೆದು ಹಾರಲು ಬಯಸಿ ನೆಲಕೆ ಬಿದ್ದು ಬಡಿದು ರೆಕ್ಕೆ ಹಾರಿ ಗೂಡು ತೊರೆದು ಗುಬ್ಬಚ್ಚಿ ಗೂಡು ಜೋತಡೈತಿ ನೋಡು *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಸುರಿವ ಮನದ ಮಳೆ

Image
  ಖುಷಿಯಲ್ಲಿ ಸುರಿದ ಮಳೆಗೆ             ಪ್ರೀತಿ   ಹನಿಯಾಯ್ತು ಸಿಡಿಲಿನ ಹೊಡೆತಕೆ ಸಿಕ್ಕ             ಮನಸ್ಸು ಸುಟ್ಟಯ್ತು ಆಕಾಶದಿ ನೀಲಿಯ ಮೋಡ          ಕನಸಂತೆ ತಿಳಿಯಾಯ್ತು ಮಳೆ ಹನಿಯು ಭೂಮಿಗೆ ಬಿದ್ದು      ಮನದ ಮಣ್ಣು ಹಸಿರಾಯ್ತು ಕನಸ್ಸುಗಳ ಭಾನ ಗೂಡಲಿ       ನಕ್ಷತ್ರಗಳ ಊರಾಯ್ತು ಆಕಾಶದಿ ಇರುಳ ನಲ್ಮೆಯ     ಚಂದ್ರನ ಸುರಾ ಬೆಳಕಾಯ್ತು ತಂಗಾಳಿಯಲಿ ಬೀಸುವ ಗಾಳಿಗೆ ಜೇವನ ಸಮುದ್ರಅಲೆಯಾಯ್ತು ಅಲೆಗೆ ಸಿಕ್ಕ ನನ್ನ ಬದುಕಿನ    ದೋಣಿಯೂ ತೇಲೋಯ್ತು ದಡ ಸಿಗದೇ ಬುಡ ಅಲುಗಿ ನೀರಿನ ರಬಸಕೆ ದಡ ಸೇರಾಯ್ತು ನನ್ನ ಒಲವ ಸುರಿವ ಮಳೆ ಕನಸ್ಸಾದ ನನಸ್ಸುಗಳ ಮುತ್ತಾಯ್ತು ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -18

Image
ಮೋಸ ಮಾಡಿ ಜನರು ಬದುಕುತ್ತಿಹರು ನ್ಯಾಯವನೇ ಹಿಡಿದು ಹುಡುಕುತ್ತಿಹರು ಪ್ರೀತಿಯಿಂದ ಸುಲಿಗೆ ಮಾಡುತ್ತಿಹರು ಅಸಾಮಾನತೆಯಲಿ  ಬೆಯುತ್ತಿಹರು  ನೀ ಹೇಳಿದ ಸಮಾನತೆಯ ನುಂಗಿ ಕುಡಿಯುತ್ತಿಹರು ನಮ್ಮ ಬಸವಣ್ಣ ಕೊಲೆಗಾರರು ಕುಣಿಯುತ್ತಿರುವಾಗ ದರೋಡೆಕೋರರು ಮೇರುಯುತ್ತಿರುವಾಗ ಸುಲಿಗೆಕೋರರು ಬಲಿಯುತ್ತಿರುವಾಗ  ಪ್ರಜೆಗಳ ಅಳುವವರು ನಲಿಯುತ್ತಿರುವಾಗ ಸಮಾನತೆ ಇರುವುದು ಸುರಿವ ಬೇವರೀಗಷ್ಟೇ ನಮ್ಮ ಬಸವಣ್ಣ ಭ್ರಷ್ಟಾಚಾರ ಸುಡುತಿದೆ ಇಂದು ಮೇಲು ಕೀಳಿನ ಅನ್ಯಾಯಕೆ ಕೊನೆ ಎಂದು ಮುಗ್ದ ಜನರು ಮೋಸಕೆ ಬಲಿ ಇಂದು ನೀ ಸಾರಿದ ಸಮಾನತೆ ಸಿಗುವುದು ಎಂದು ಓ ಕಾಯಕ ಯೋಗಿ ಬಸವಣ್ಣ ***********ರಚನೆ,*************       ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -15

Image
ಭಕ್ತಿಯಿಲ್ಲದ ಪೂಜೆ ಪ್ರೀತಿಯಿಲ್ಲದ ಮನಸ್ಸು ರುಚಿಯಿಲ್ಲದ ಊಟ ಮನಸ್ಸಿಲ್ಲದೇ ಮಾಡುವ ಕಾಯಕ ನಮ್ಮ ಬದುಕಲಿ ಸುಖವ ನೀಡದು  ನೋಡ ನಮ್ಮ ಬಸವಣ್ಣ ಸಂಸಾರವೆಂಬ ಸಾಗರದಲ್ಲಿ ಐಶ್ವರ್ಯ ಎಂಬ ಸಿರಿ ಬಂದು ಜೀವನದಿ ದೂರಾಸೆ ತುಂಬಲು ಭಕ್ತಿಯಲಿ ಪೂಜೆಯ ಕಾಯಕ ಮಾಡು  ಒಲಿದಾನು ನಮ್ಮ ಬಸವಣ್ಣ ನೋಡು ಪುಣ್ಯವೆಂದರೆ ಏನು ಪಾಪವೆಂದರೆ ಏನು ಕರ್ಮವೆಂದರೆ ಏನು ಮರ್ಮವೆಂದರೆ ಏನು ಭಕ್ತಿಯಲಿ ಕೈಇಡಿದ ಕಾಯಕವ ಮಾಡು ಎಲ್ಲವೂ ಅರಿವುದು ನೋಡು ನಮ್ಮ ಬಸವಣ್ಣ ***************ರಚನೆ ************** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -14

Image
ಹೊಟ್ಟೆಯೊಳಗಿನ ಕಿಚ್ಚು ತನನೇ ಸುಡುವುದು ಅನ್ಯರಿಗೆ ಕೆಡುಕು ಬಯಸಬೇಡ ಓ ಮನುಜ ಇದ್ದಷ್ಟು ದಿನ ಬೆವರು ಹರಿಸಿ ಕಾಯಕ ಮಾಡು ಕೇಡು ಬಗೆವವರ ಶಿವ ನೋಡುವ ನಮ್ಮ ಬಸವಣ್ಣ  ಒಡೆದಾಡಿ ಬಡಿದಾಡಿ ಆಸ್ತಿಗಾಗಿ ಕಲಹವ ಮಾಡಿ ತನ್ನವರು ಶತ್ರುಗಳಾಗಿ ನೆಮ್ಮದಿಯು ಹಾಳಾಗಿ ಜೀವನ ಸ್ಮಶಾನದಂತೆ ನಿನಗೆ ಕಾಣುವ ಒಳಗೆ ಮನಕ್ಕೆ ನೆಮ್ಮದಿ ನೀಡುವ ಕಾಯಕವ ಕೈಗೆತ್ತಿಕೊ ನಮ್ಮ ಬಸವಣ್ಣನ  ನೆನೆ ಕೈಲಾಸ ದೊರಕುವುದು ನೋಡ ಎತ್ತು ಏರಿಗೆ ಎಳೆದರೆ ಹೆಮ್ಮೆ ನೀರಿಗೆ ಎಳೆವುದು ತನೊಂದು ಬಗೆದರೆ ದೈವವು ಇನ್ನೊಂದು ಬಗೆವುದು ಅಂದುಕೊಳ್ಳುವುದು ಒಂದೂ ಹಾಗುವುದು ಮತ್ತೊಂದು ಎಲ್ಲವ ಬದಿಗಿಟ್ಟು ಕಾಯಕವ ಮಾಡು  ನಮ್ಮ ಬಸವಣ್ಣ ಹೇಳಿದ ಕೈಲಾಸದಲಿ ದೊರೆವುದು ಮುಕ್ತಿ 

ಸೆರಗಿನ ಕೆಂಡ

Image
  ಸೆರಗಿನ ಅಂಚಿನಲಿ ಕೆಂಪು ಕೆಂಡ ಬಡತನವೆಂಬ ಬಿಸಿ ಬಿಸಿ ದಂಡ ಬಾಳುತಿರುವೆ ಧೈರ್ಯದಿ ಬಂಡ ಜೀವನವು ನೋವಿನಲಿ ಮಂಡ ಕಲ್ಲು ಕುಟ್ಟುತ ಸಾಗಿದೆ ಬದುಕು ಪುಡಿಗಲ್ಲುಗಳೇ ನಮ್ಮ ಸರಕು ತಿನ್ನುತ್ತಾ ಸಾಗಿದೆ ರೋಟ್ಟಿ ಮುರುಕು ನನ್ನ ಕಂದಗೆ ಹಸಿವಿನ ಚುರುಕು ಬಿಸಿಲು ಲೆಕ್ಕಿಸದೆ ನಮ್ಮ ಕೆಲಸ ಊಟಕಾಗಿ ಮಾಡಬೇಕು ದಿವಸ ಎಲ್ಲಿದೆ ನಮಗೆ ಬಾಳಲಿ ಹರುಷ ಬಡತನ ಕಿತ್ತಿದೆ ನಮ್ಮ ಸಂತೋಷ ತೂಗು ಉಯ್ಯಾಲೆಯಲಿ ಮಗು ತೂಗುತಾ ಸಾಗಿದೆ ಅದರ ನಗು ಅದುವೇ ನನ್ನ ಸೆರಗಿನ ರಂಗು  ನನ್ನ ಅದೃಷ್ಟದ ಒಲವಿನ ಬೆರಗು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಉಸಿರು ನನ್ನವಳು

Image
ಮನದ ಒಳಗೆ                   ನೂರೆಂಟು ಬಯಕೆ ಕನಸ್ಸು ಹೊತ್ತಾ                   ಪ್ರೀತಿಯ ಹರಕೆ ನಿನ್ನಾಸ್ಸೇ ಬಿತ್ತಿದೆ                    ಈ ಪ್ರೀತಿ ಮನಕೆ ಬರುವೆಯಾ ಚೆಲುವೆ                     ನನ್ನ ಹೃದಯಕೆ  ನನ್ನವಳ ಸವಿ ಮಾತು      ಕೇಳಿ ನಾ ಪ್ರೇಮಿಯಾದೆ ಅವಳ ಸಡಗರವ       ನೋಡಿ ನಾ ಪ್ರೇಕ್ಷಕನಾದೆ ನೆಪವೊಂದು ಸಾಕು        ಅವಳ ತುಂಟಾಟಕೆ ಕುಣಿದಿದೆ ಹೃದಯ        ನನ್ನವಳ ಕುಡಿನೋಟಕೆ ಪ್ರೀತಿಯ ಬಣ್ಣವ ಅಂಚುವ        ಕಾಮನಬಿಲ್ಲು ನನ್ನವಳು ಮೋಡದಿ ಮರೆಯಲಿ         ಸುರಿವ ಮಳೆಯಿವಳು ತಂಗಾಳಿಯಲಿ ಬೀಸುವ         ತಣ್ಣನೆ ಉಸಿರಿವಳು ನನ್ನನೇ ಅವರಿಸಿರುವ         ಮುದ್ದಾದ ಹಸಿರಿವಳು ಉಸಿರಿಗೆ ಸೋತೆ          ನಾ ಪ್ರೀತಿ ಅಲೆಯಲಿ ನಗುತಾ ನಾ ಬಿದ್ದೆ          ನನ್ನವಳ ಬಲೆಯಲಿ ಮುದ್ದಾದ ಹುಡಿಗಿಗೆ          ಏನೆಂದು ಹೆಸರಿಡಿಲಿ ನಿನ್ನ ಹೆಸರೇ ನನ್ನ          ಉಸಿರು ನಿನಗೆ ತಿಳಿದಿರಲಿ ************ರಚನೆ ********   ಡಾ. ಚಂದ್ರಶೇಖರ. ಸಿ. ಹೆಚ್

ಆರದಿರಲಿ ದೀವಿಗೆ

Image
ಮನೆಗೆ ಊರ ದೇವರು ದೀಪವನ್ನು ಹಚ್ಚಿಹರು ಕಷ್ಟಗಳು ಉರಿದು ಉರಿದು  ಸುಖದ ಬೆಳುಕು ಚೆಲ್ಲಲ್ಲಿ ಆರದಿರಲಿ ಮನೆಯ ದೀವಿಗೆ ಮನಸ್ಸಿನಲ್ಲಿ ಅಶಾಂತಿ ತೊಲಗಿ ನೆಮ್ಮದಿಯ ಬದುಕು ಬೆಳಗಿ ಬಾಳು ಸುಖದಿ ಕುಣಿಯಲಿ ಸಂಸಾರ ಸಂತಸದಿ ತೆಲಲಿ ಮನದ ಶಾಂತಿ ದೀವಿಗೆ ಆರದಿರಲಿ ನನ್ನಾಸ್ಸೇ ಒಲವಿನ ಹೂವೆ ಬಳಿ ಬಂದು ಲವ್ ಯು ಅನುವೆ ನಮ್ಮಿಬ್ಬರ ಪ್ರೀತಿ ಪಯಣ ಶುರುವಾಯ್ತು ಹಾಗೆ ತನನ ಆರದಿರಲಿ ಒಲವ ದೀವಿಗೆ  ಮನೆಯಲ್ಲಿ ಒಂದು ಸಾವು ಮನೆಮಂದಿಗೆ ಬರಿ ನೋವು ದೇಹ ಸಮಾಧಿ ಮಣ್ಣು ಸೇರಲು ಹಾರುತ್ತಿರುವ ಆತ್ಮಕೆ ಶಾಂತಿ ಸಿಗಲಿ ಮನೆ ನೆಮ್ಮದಿಯ ದೀವಿಗೆ ಆರದಿರಲಿ ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್