ನನ್ನವಳು
ನಗುವ ನಲಿವಾದವಳು ನನ್ನವಳು
ಪ್ರೀತಿಯ ಮುದ್ದು ಅರಗಿಣಿ ಅಂತಾವಳು
ಮನಸಸ್ಸಿನ ಅಲೆಯೇ ನನ್ನವಳು
ಸಮುದ್ರದಿ ಕಪ್ಪೆ ಚಿಪ್ಪಾಗಿಹಳು
ಬಳುಕುವ ಬಳ್ಳಿ ನನ್ನವಳು
ವಿಳ್ಯದೆಲೆಯಂತೆ ಮನಕೆ ಹಬ್ಬಿಹಳು
ಜಿನುಗುವ ಜೇನುಗೂಡು ನನ್ನವಳು
ಸಿಹಿಯಾದ ಜೇನು ತುಪ್ಪವಾಗಿಹಳು
ಹಾಲಿನ ನೊರೆಯಂತೆ ನನ್ನವಳು
ತುಟಿಗೆ ಸವರಿದ ಸಿಹಿಯಾಗಿಹಳು
ಸುಮುದುರ ಸಂಗೀತ ನನ್ನವಳು
ಮಧುರ ಬಾವದ ಹಾಡಗಿಹಳು
ಕನಸ್ಸಲಿ ಕಂಡ ಪ್ರೇಯಸಿ ನನ್ಮವಳು
ಭೂಮಿಗಿಳಿದ ಅಪ್ಸರೆಯಾಗಿಹಳು
ನೋಟದಲ್ಲಿ ಚೂರಿ ನನ್ನವಳು
ಹೃದಯ ಗೆದ್ದ ಸುಂದರಿಯಾಗಿಹಳು
ಮಾತಿಗೂ ಸಿಗದ ಮೌನ ನನ್ನವಳು
ತಂಗಾಳಿಯಲಿ ಪಿಸುಗುಟ್ಟೀಹಳು
ಬಂಗಾರದ ಪೆದ್ದು ಗಣಿ ನನ್ನವಳು
ಇರುಳಿನಲಿ ಒಳೆವ ಹುಣ್ಣಿಮೆ ಚಂದ್ರನ ಬೆಳಕಾಗಿಹಳು
***********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment