ವಚನಗಳು -15
ಭಕ್ತಿಯಿಲ್ಲದ ಪೂಜೆ
ಪ್ರೀತಿಯಿಲ್ಲದ ಮನಸ್ಸು
ರುಚಿಯಿಲ್ಲದ ಊಟ
ಮನಸ್ಸಿಲ್ಲದೇ ಮಾಡುವ ಕಾಯಕ
ನಮ್ಮ ಬದುಕಲಿ ಸುಖವ ನೀಡದು
ನೋಡ ನಮ್ಮ ಬಸವಣ್ಣ
ಸಂಸಾರವೆಂಬ ಸಾಗರದಲ್ಲಿ
ಐಶ್ವರ್ಯ ಎಂಬ ಸಿರಿ ಬಂದು
ಜೀವನದಿ ದೂರಾಸೆ ತುಂಬಲು
ಭಕ್ತಿಯಲಿ ಪೂಜೆಯ ಕಾಯಕ ಮಾಡು
ಒಲಿದಾನು ನಮ್ಮ ಬಸವಣ್ಣ ನೋಡು
ಪುಣ್ಯವೆಂದರೆ ಏನು
ಪಾಪವೆಂದರೆ ಏನು
ಕರ್ಮವೆಂದರೆ ಏನು
ಮರ್ಮವೆಂದರೆ ಏನು
ಭಕ್ತಿಯಲಿ ಕೈಇಡಿದ ಕಾಯಕವ ಮಾಡು
ಎಲ್ಲವೂ ಅರಿವುದು ನೋಡು ನಮ್ಮ ಬಸವಣ್ಣ
***************ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment