ವಚನಗಳು -25





ಸಾವು ಎಂದು ಮನುಷ್ಯನ ನೋಡಿ ಬಾರದು

ಕಾಲವೆಂದು ಭೂಮಂಡಲವಾ ನೋಡಿ ತಿರುಗದು

ನಡೆಯುತ್ತಿರುವ ಕಾಲದಲ್ಲಿ ವಿಧಿಯ ಆಟ ನಡೆವುದು

ಮನುಜ ನೀನು ಕಾಯಕದಿ ಕಾಲ ಭೈರವನ

 ನೆನುವುದು ನಮ್ಮ ಬಸವಣ್ಣ


ಮನಸು ಮುರಿದ ಮೇಲೆ ಪ್ರೀತಿಗೆ ಇಲ್ಲ ನೆಲೆ

ವಿಶ್ವಾಸ ಕಳೆದುಕೊಂಡ ಮೇಲೆ ಸ್ನೇಹಕೆ ಎಲ್ಲಿ ನೆಲೆ

ಮಾತು ಮುರಿದ ಮೇಲೆ ವಾಗ್ದಾನಕೆ ಎಲ್ಲಿದೆ ಬೆಲೆ

ಕಾಯಕದಿ ಲಿಂಗವ ನೆನೆದು ಪಡೆ ನೀನು ಬೆಲೆ ನಮ್ಮ ಬಸವಣ್ಣ


ಸುಡುವ ಬೆಂಕಿಗೆ ಕಬ್ಬಿಣ ಕೂಡ ಕರಗುವುದು

ಮನದ ಆಸೆಗೆ ತನುವು ಕೂಡ ಕುಣಿಯುವುದು

ಪ್ರೀತಿ ಬಯಕೆಗೆ ಹೃದಯ ಕೂಡ ಬೇಯುವುದು

ಕಾಯಕವ ಮಾಡು ಕೈಲಾಸದಿ ಶಿವನು ಕೂಡ

ಒಲಿಯುವನು ನಮ್ಮ ಬಸವಣ್ಣ


************ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa