ಮುನಿಸು
ಬರೆಯುವಾಸೆ ನನಗೆ ಪ್ರಣಯ ಪ್ರೇಮ ಗೀತೆ
ನಿನಕಂಡ ಮನಸ್ಸು ಬರೆಯಿತೆಕೆ ಮೂಖ ವಾರ್ತೆ
ಒಲವು ಏಕೊ ಏನೋ ನನ್ನ ಕರೆಯಲಿಲ್ಲ
ನಿನ್ನ ನೋಡಿದ ನೆನೆಪು ನಾ ಮರೆಯಲಿಲ್ಲ
ದೂರದ ಊರಿನಿಂದ ಅಳಿಯ ಮನೆಗೆ ಬಂದ
ಗಂಟು ಮೊರೆ ಕಟ್ಟಿ ಮನದ ಬಾಗಿಲಲ್ಲಿ ನಿಂದ
ಯಾಕೋ ಎಂತೋ ಏನೋ ಕೇಳಿದೆ ಒಳಿತು
ಮನದಿ ಆಸೆ ಹೊತ್ತು ಕನಸ್ಸು ಆಗ ತಿಳೀತು
ಯಾಕೋ ನನ್ನ ರಾಜ ಏಕೆ ನೀನು ಮಂಕು
ಕುಣಿಯಲು ಬಾರದವಗೆ ನೆಲವು ತಾನೇ ಡೊಂಕು
ಮನಸ್ಸು ಮುರಿದೆ ನಾನು ಮಾತು ಆಡಿ ಕೊಂಕು
ಹೃದಯ ಕಲಕಿ ನಂಗೆ ಹಿಡಿದಂತೆ ಸೋಂಕು
ಇಗೆ ಇದ್ರೆ ಎಗೆ ಜೊತೆ ಒಮ್ಮೆ ಮಾತಾಡು
ನನ್ನ ಜೊತೆ ಹೊರಡು ಸುತ್ತೋಣ ಕಾಡು ಮೆಡು
ನಡೆವ ನಾವು ಜೋಡು ಗಿಣಿಗಳಂತೆ
ಕುಕ್ಕಿ ಕುಕ್ಕಿ ತಿಂದ ಅಳಿಲುಗಡಕ ಮಾವಿನಂತೆ
ಮನಸು ಕಲೆತು ಬೆರೆತು ಬರೆದ ಪ್ರೇಮ ಗೀತೆ
ಮುನಿಸು ಮಾಯವಾದ ಒಲವ ಹಾಡ ಕವಿತೆ
ಜೋಡಿ ಜೋಡಿಯಾಗಿ ಸುತ್ತುತ ಊರು
ಮರೆತು ನಮ್ಮ ಮುನಿಸ ಜಾತ್ರೆ ಜೋರು
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment