ನನಸಾ ಕನಸ್ಸು
ಬದುಕು ಭರವಸೆಯ ನೂರಾಸ್ಸೇ
ಮನಸ್ಸು ಕನಸ್ಸುಗಳ ಸವಿಕುಸ್ಸೇ
ಹೃದಯ ಮಿಡಿತದಿ ಹೂವ್ವಾಸ್ಸೇ
ನೀನೆ ನನ್ನ ಮನದ ಒಲವ ಆಸೇ
ಕನಸ್ಸುಗಳ ಹಾದಿಯಲಿ ಕೊಲಮಿಂಚು
ಮನದ ಆಸೆಗೆ ಗುಡುಗಿನ ವಂಚು
ಸುರಿವ ಮಳೆ ಹನಿಯಾಗುವ ಸಂಚು
ಹನಿ ಬಿದ್ದ ಹೂವು ಜಡೆಯಾಗುವ ಕುಂಚು
ಏರಿಳಿತದ ಜೀವನದಿ ನೋವು ಸಹಜ
ತುಂಬಿರಲಿ ಬಾಳಲಿ ಪ್ರೀತಿ ಕಣಜ
ಮನ ಶುಭ್ರವಾಗಿರಲಿ ನದಿಯಂತೆ ಜಲಜ
ಪಯಣದಿ ಸಾಗಬೇಕು ವಿಧಿ ಆಟದಂತೆ ಮನುಜ
ಯಾರಿಗೂ ಕಾಣದ ಖುಷಿ ಮನದಿ
ಬದುಕಬೇಕು ಬಾಳು ನೋವಿನ ಕಣದಿ
ಕೊಡಬೇಡ ದೇವಾ ಬಾಳು ಬೇರೆಯವರ ಹೃಣದಿ
ನೀನಿಟ್ಟಂಗೆ ಆಗಲಿ ಒಲವ ಸರದಿ
ಕಾಣದ ತೀರದಿ ನಾ ಬಂದಿಯಾದೆ
ನೂರಾಸ್ಸೇ ಒತ್ತು ನಾ ಚಿಂದಿಯಾದೆ
ನನ್ನಾಸೆ ಕಿತ್ತು ನೀ ಏಕೆ ಮೂಕವಾದೆ
ನಡೆಯಲಿ ಒಲವ ತೇರು ಮರೆತು ಬಾದೆ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment