ಸೆರಗಿನ ಕೆಂಡ
ಸೆರಗಿನ ಅಂಚಿನಲಿ ಕೆಂಪು ಕೆಂಡ
ಬಡತನವೆಂಬ ಬಿಸಿ ಬಿಸಿ ದಂಡ
ಬಾಳುತಿರುವೆ ಧೈರ್ಯದಿ ಬಂಡ
ಜೀವನವು ನೋವಿನಲಿ ಮಂಡ
ಕಲ್ಲು ಕುಟ್ಟುತ ಸಾಗಿದೆ ಬದುಕು
ಪುಡಿಗಲ್ಲುಗಳೇ ನಮ್ಮ ಸರಕು
ತಿನ್ನುತ್ತಾ ಸಾಗಿದೆ ರೋಟ್ಟಿ ಮುರುಕು
ನನ್ನ ಕಂದಗೆ ಹಸಿವಿನ ಚುರುಕು
ಬಿಸಿಲು ಲೆಕ್ಕಿಸದೆ ನಮ್ಮ ಕೆಲಸ
ಊಟಕಾಗಿ ಮಾಡಬೇಕು ದಿವಸ
ಎಲ್ಲಿದೆ ನಮಗೆ ಬಾಳಲಿ ಹರುಷ
ಬಡತನ ಕಿತ್ತಿದೆ ನಮ್ಮ ಸಂತೋಷ
ತೂಗು ಉಯ್ಯಾಲೆಯಲಿ ಮಗು
ತೂಗುತಾ ಸಾಗಿದೆ ಅದರ ನಗು
ಅದುವೇ ನನ್ನ ಸೆರಗಿನ ರಂಗು
ನನ್ನ ಅದೃಷ್ಟದ ಒಲವಿನ ಬೆರಗು
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment