ವಚನಗಳು -21
ಹೃದಯದಿ ಶ್ರೀಮಂತನಾಗು
ಮನಸ್ಸಿನಲಿ ಮಡಿವಂತನಾಗು
ಕಷ್ಟಗಳಿಗೆ ಧೈರ್ಯವಂತನಾಗು
ಮಾತಿನಲ್ಲಿ ವಿಚಾರವಂತನಾಗು
ನಡತೆಯಲಿ ಆಚಾರವಂತನಾಗು
ಪ್ರಕೃತಿಯ ಆರಾಧಕನಾಗು
ಲಿಂಗಕೆ ನಿಷ್ಠಾವಂತನಾಗು
ಕಾಯಕಕೆ ಭಕ್ತಿವಂತನಾಗು ನಮ್ಮ ಬಸವಣ್ಣ
ಮೇಲು ಕೀಳು ಮರೆತುಬಿಡು
ಎಲ್ಲಾ ತನ್ನವರೆಂದು ತಿಳಿದೂಬಿಡು
ಮೋಸ ಮಾಡಿದವರ ಪರಶಿವನಿಗೆ ಬಿಟ್ಟು ಬಿಡು
ಕಾಯಕವ ಶ್ರದ್ದೆಯಿಂದ ಕಲಿತು ಮಾಡಿಬಿಡು
ಮನಸ್ಸಿಗೆ ತೃಪ್ತಿ ಸಿಗುವುದು ನಮ್ಮ ಬಸವಣ್ಣ
ಜೀವನದಿ ಘಮ ಇದ್ದಾಗ ಮಲ್ಲಿಗೆ ಏಕೆ
ಎಲ್ಲರೂ ನಮ್ಮವರೆ ಆದಾಗ ನಂಬಿಕೆ ಪ್ರಶ್ನೆ ಏಕೆ
ಇಷ್ಟಗಳು ನೆರವೇರಿದಾಗ ಹಣದ ಹಂಗೇಕೆ
ಕೈ ತುಂಬಾ ಕೆಲಸವಿರಲು ಏಕಾಂತದ ಹಂಗೇಕೆ ನಮ್ಮ ಬಸವಣ್ಣ
************ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment