ಪುನರವಿವಾಹ




ಮದುವೆ ಎಂಬ ಒಲವ ಬಂಧನ

ಮನಸ್ಸುಗಳ ಪ್ರೀತಿ ಸಮ್ಮಿಲನ 

ಸೇರುವ ಸಲುಗೆಯಲಿ ನಯನ

ಬೆರೆವುದು ಇಬ್ಬರ ತನು ಮನ


ಬಯಸಿ ನನ್ನವಳ ಪಡೆದು

ಅವಳ ಕೆನ್ನೆಯ ಇಡಿದು

ಹೃದಯದಲಿ ಮಾತು ಬೆಸೆದು

ಮನಸ್ಸು ಹುಚ್ಚೇದು ಕುಣಿದಅಂತೇ


ಕಾಣದ ವಿಧಿಯ ಕೈ ಆಟದಿ

ಹಣೆಬರಹ ಬರೆದವನ ಮೋಸದಿ

ಬಂಧನ ಮುರಿದು ಬೇರೆ ಆದ ಜೀವ

ಕಳೆಯುತ ಮನದ ನೋವ


ಸಮಯ ಸರಿದು ಜೇವನ ಬರಿದು

ಬೇಕು ಸಂಗಾತಿ ಬದುಕ ಒಡತಿ

ಮನವೆಕೋ ಬಯಸಿದೆ ಪುನರವಿವಾಹ

ಬದುಕಿಗಾಗಿ ಮತ್ತೊಮ್ಮೆ ಮೋಹ


ವಾತ್ಸಲ್ಯ ಇದ್ದಲಿ ಅನುರಾಗ

ಕಲೆತು ಹರಿವ ಶುಭ ಯೋಗ

ಪ್ರಣಯದ ಹಕ್ಕಿಗಳ ಭೋಗ

ಪ್ರೀತಿಯ ಒಲವಿನ ಸುಯೋಗ


ಇರದೇ ಹೋದರೆ ಒಂದು ಎಂದು

ಬಾಳ್ಬೇಕು ಖುಷಿಯ ಕೊಂದು

ಮನವೆರಡು ಜೀವದಿ ನೊಂದು 

ಬದುಕು ಬೆಂಕಿಯಲಿ ಬೆಂದು


ಮೊದಲನಂತೆ ಖುಷಿಯಿಲ್ಲ

ಮನಸ್ಸಿನ ಕಥೆ ವ್ಯಥೆಯೆಲ್ಲಾ

ಇಬ್ಬರ ನಡುವೆ ಅನುಬಂಧ

ಸತಿಪತಿ ಎಂಬ ಸಂಬಂಧ


ಕಾಲವ ಮುಂದೆ ನೂಕುತ

ಮನಸ್ಸುಗಳ ಕುಲುಮೆ ಬೇಯುತ

ಜೊತೆಗಿದ್ದೇವೆ ಎಂದು ಸಾರುತ

ಬಿಸದಿರಲಿ ಚಂಡ ಮಾರುತ



**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35