ಬಂದಿಯಾದೆ ನಾನು




ಓ ದೇವನೆ ಕೇಳು ಬಂದಿಯಾದೆ ನಾನು

ಈ ಕೋಣೆವೊಳಗೆ

ಆಸೆಗಳ ಕಿತ್ತು ಕನಸುಗಳು ಸತ್ತ ಈ ಮನೆ ಒಳಗೆ

ಯಾರ ಬೇಡಲಿ ನಾನು ಓ ದೇವಾ ಹೇಳು

ನನ್ನ ಕಣ್ಣೀರ ಮೋರೆಯ ನಿನ್ನೊಮ್ಮೆ ಕೇಳು


ಹೃದಯ ಸೊರಗಿದೆ ಇಂದು ನೋವಿನಲಿ ಬೆಂದು

ಮನವು ಕರಗದೆ ನಿನಗೆ ನೋಡಿ ನನ್ನ ಇಂದು

ಪ್ರೀತಿ ಮಾತುಗಳು ಇಲ್ಲಿ ಸವಿಯಂತೆ ಇಲ್ಲ

ನೋವಿನಲಿ ಚಡಪಡಿಸಿ ಮನ ಅಳುತಿದೆಯಲ್ಲ


ಕಾಡಿ ಬೇಡಿದರು ಕಾಣರರು ಇಲ್ಲಿ

ದೇಹವೆಂಬ ಸರಕು ದಾಹಕೆ

 ಬಲಿಯಾಗಿಹುದು ನೋಡಿಲ್ಲಿ

ಎಂದು ದೋರಕುವುದು ನನಗೆ ಇಲ್ಲಿಂದ ಮುಕ್ತಿ

ಒಮ್ಮೆ ದಯೆ ತೋರು ತೋರಿ ನಿನ್ನ ಶಕ್ತಿ 


ಓ ದೇವನೆ ಕೇಳು ಬಂದಿಯಾದೆ ನಾನು

ಈ ಕೋಣೆವೊಳಗೆ

ಆಸೆಗಳ ಕಿತ್ತು ಕನಸುಗಳು ಸತ್ತ ಈ ಮನೆವೊಳಗೆ

ಯಾರ ಬೇಡಲಿ ನಾನು ಓ ದೇವಾ ಹೇಳು

ನನ ಕಣ್ಣೀರ ಮೋರೆಯ ನಿನ್ನೊಮ್ಮೆ ಕೇಳು


ಗೆಜ್ಜೆಯ ಸದ್ದಿಲಿ ಬೋರ್ಗರೆವ ಮಳೆಯಂತೆ

ಕೈಬಳೆಗಳು ಏಕೊ ನುಚ್ಚು ನೂರು ಆದಂತೆ

ಹೇಗೆ ಬೇಡಲಿ ನಿನ್ನ ಕಣ್ಣೀರು ಬಸಿದು ಇನ್ನ

ಮುಕ್ತಿ ನೀಡು ದೇವನೇ ತೊಳೆದು ದಾರಿದ್ರ್ಯವನ


ಪಂಜರದ ಗಿಳಿಯಂತೆ ನಾನು ಬಂದಿ ಹೀಗ 

ಮನವು ಹಾರಲು ಬಯಸಿದೆ ರೆಕ್ಕೆ ಬಡಿದು ಬೇಗ

ಪಂಜರದಿ ನನ್ನ ಕನಸ್ಸುಗಳು ಸತ್ತು ಹೋಗಿ 

ಹೇಗೆ ಬಾಳಲಿ ನಾನು ಇಲ್ಲಿ ಬಂದಿಯಾಗಿ


ನನ್ನ ನೆರಳೆ ನನ್ನ ಕಾಡಿತಿಹುದು ಯಾಕೊ 

ನಿದಿರೆ ಬಾರದ ದಿನಗಳೇಕೋ ಸಾಕೊ 

ಯಾರಿಗಾಗಿ ಬದುಕಲೆಂತು ಸುಮ್ಮನೆ

ಒಮ್ಮೆ ನೀ ಬಂದು ರಕ್ಷಿಸು ಓ ದೇವನೆ 


ಓ ದೇವನೆ ಕೇಳು ಬಂದಿಯಾದೆ ನಾನು

ಈ ಕೋಣೆವೊಳಗೆ

ಆಸೆಗಳ ಕಿತ್ತು ಕನಸುಗಳು ಸತ್ತ ಈ ಮನೆ ಒಳಗೆ

ಯಾರ ಬೇಡಲಿ ನಾನು ಓ ದೇವಾ ಹೇಳು

ನನ ಕಣ್ಣೀರ ಮೋರೆಯ ನಿನ್ನೊಮ್ಮೆ ಕೇಳು


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20