ಸುರಿವ ಮನದ ಮಳೆ

 



ಖುಷಿಯಲ್ಲಿ ಸುರಿದ ಮಳೆಗೆ

            ಪ್ರೀತಿ   ಹನಿಯಾಯ್ತು

ಸಿಡಿಲಿನ ಹೊಡೆತಕೆ ಸಿಕ್ಕ

            ಮನಸ್ಸು ಸುಟ್ಟಯ್ತು

ಆಕಾಶದಿ ನೀಲಿಯ ಮೋಡ

         ಕನಸಂತೆ ತಿಳಿಯಾಯ್ತು


ಮಳೆ ಹನಿಯು ಭೂಮಿಗೆ ಬಿದ್ದು

     ಮನದ ಮಣ್ಣು ಹಸಿರಾಯ್ತು

ಕನಸ್ಸುಗಳ ಭಾನ ಗೂಡಲಿ

      ನಕ್ಷತ್ರಗಳ ಊರಾಯ್ತು

ಆಕಾಶದಿ ಇರುಳ ನಲ್ಮೆಯ

    ಚಂದ್ರನ ಸುರಾ ಬೆಳಕಾಯ್ತು


ತಂಗಾಳಿಯಲಿ ಬೀಸುವ ಗಾಳಿಗೆ

ಜೇವನ ಸಮುದ್ರಅಲೆಯಾಯ್ತು

ಅಲೆಗೆ ಸಿಕ್ಕ ನನ್ನ ಬದುಕಿನ

   ದೋಣಿಯೂ ತೇಲೋಯ್ತು



ದಡ ಸಿಗದೇ ಬುಡ ಅಲುಗಿ ನೀರಿನ

ರಬಸಕೆ ದಡ ಸೇರಾಯ್ತು

ನನ್ನ ಒಲವ ಸುರಿವ ಮಳೆ

ಕನಸ್ಸಾದ ನನಸ್ಸುಗಳ ಮುತ್ತಾಯ್ತು


***********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa