ವಚನಗಳು -14




ಹೊಟ್ಟೆಯೊಳಗಿನ ಕಿಚ್ಚು ತನನೇ ಸುಡುವುದು

ಅನ್ಯರಿಗೆ ಕೆಡುಕು ಬಯಸಬೇಡ ಓ ಮನುಜ

ಇದ್ದಷ್ಟು ದಿನ ಬೆವರು ಹರಿಸಿ ಕಾಯಕ ಮಾಡು

ಕೇಡು ಬಗೆವವರ ಶಿವ ನೋಡುವ ನಮ್ಮ ಬಸವಣ್ಣ 


ಒಡೆದಾಡಿ ಬಡಿದಾಡಿ ಆಸ್ತಿಗಾಗಿ ಕಲಹವ ಮಾಡಿ

ತನ್ನವರು ಶತ್ರುಗಳಾಗಿ ನೆಮ್ಮದಿಯು ಹಾಳಾಗಿ

ಜೀವನ ಸ್ಮಶಾನದಂತೆ ನಿನಗೆ ಕಾಣುವ ಒಳಗೆ

ಮನಕ್ಕೆ ನೆಮ್ಮದಿ ನೀಡುವ ಕಾಯಕವ ಕೈಗೆತ್ತಿಕೊ

ನಮ್ಮ ಬಸವಣ್ಣನ  ನೆನೆ ಕೈಲಾಸ ದೊರಕುವುದು ನೋಡ


ಎತ್ತು ಏರಿಗೆ ಎಳೆದರೆ ಹೆಮ್ಮೆ ನೀರಿಗೆ ಎಳೆವುದು

ತನೊಂದು ಬಗೆದರೆ ದೈವವು ಇನ್ನೊಂದು ಬಗೆವುದು

ಅಂದುಕೊಳ್ಳುವುದು ಒಂದೂ ಹಾಗುವುದು ಮತ್ತೊಂದು

ಎಲ್ಲವ ಬದಿಗಿಟ್ಟು ಕಾಯಕವ ಮಾಡು

 ನಮ್ಮ ಬಸವಣ್ಣ ಹೇಳಿದ ಕೈಲಾಸದಲಿ ದೊರೆವುದು ಮುಕ್ತಿ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20