ಅಮ್ಮನ ಏನ್ನುತ
ಕಾಣದ ಕೈಯೊಂದು
ಬೀಸಿ ಕರೆಯಿತು ನನ್ನ
ನಾ ಈ ಜಗವ ತಿರುಗಿ
ನೋಡುವ ಮುನ್ನ
ಮನಸ್ಸಿನಲಿ ಕರೆದವರ
ಒಲವ ಬಿಂಬ
ನಾ ಬಂದು ಈ ಭೂಮಿಗೆ
ಸೇರುವ ಜಂಬ
ನೋವುಗಳ ಬಚ್ಚಿಟ್ಟು
ನನ್ನ ಹಡೆದಳು
ಭೂಮಿಗೆ ಬಂದೆ ನಾನು
ಹೆತ್ತವಳ ದಯೆಯಿಂದ
ಅಳುವ ನನಗೆ
ಅಮೃತವೆರೆದಳು
ಪ್ರೀತಿ ನೆರಳಲಿ ನನ್ನ
ಪೊರೆದಳು
ಬೆಳೆದು ಅಂಬೆಗಲಿಟ್ಟು ನಿಂತು
ನಡೆದೇ ನಾನು
ಕೂಗಿದ ಮೊದಲ ಪದ
ಅಮ್ಮ ಎಂದು
ಹೆತ್ತವಳ ಕಣ್ಣಲಿ
ನೀರು ಬಂದು
ತಬ್ಬಿದಳು ನನ್ನ ಮುದ್ದು
ಕಂದ ಎಂದು
ತಾಯಿ ಅಕ್ಕರೆ ಎಷ್ಟು ಇತ
ನನ್ನ ಸಲವುತ
ಬೆಳೆದೆ ನಾನು ಪ್ರೀತಿಯಲಿ
ಅಮ್ಮ ಎನ್ನುತ
ಅಮ್ಮ ಎನ್ನುವುದೇ
ಒಂದು ಸಂಭ್ರಮ
ಮಧುರ ಬಾಂಧವ್ಯದ
ಒಲವ ಸಂಗಮ
ಅವಳ ಕರುಳ ಬಳ್ಳಿ
ನನಾಗಿ ಬೆಳೆದೆ
ಅಮ್ಮ ಎನ್ನುತ
ಜೀವನವ ಕಳೆದೆ
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Beautiful kavigale
ReplyDelete