ಕವಿತೆ ನೀನು



ಆ ಆ

ತ ನ ನಾನಾ ನನ 

ಹೆ

ಹೃದಯ ನೀನು

ಬಡಿತ ನಾನು..........


ನಾನು ನೀನು ಸವಿಯಾದ ಬದುಕ

ಪ್ರಣಯ ಗೀತೆಯಂತೆ


ಹೆ 

ಹೃದಯ ನೀನು

ಬಡಿತ ನಾನು.........  


ನಿನ್ನ ಒಲವ ಸ್ನೇಹ ಸಿಹಿ ಮತ್ತು ತಂದಿದೆ

ನಿನ್ನ ಒಲವ ಸ್ನೇಹ ಮತ್ತು ತಂದಿದೆ

ನಿನ್ನ ಜೊತೆ ಕೂಡಿ ಬಾಳೋ ಆಸೆ ಬಂದಿದೆ


ಹೇಯ್ ಹೇಯ

ನಿನ್ನ ಜೊತೆ ಕೂಡಿ ಬಾಳೋ ಆಸೆ ಬಂದಿದೆ


ನನ್ನಾಸ್ಸೇ ನಿನ್ನಲ್ಲಿ ಪ್ರೀತಿಯಾಗಿ

ಮನಸ್ಸು ಕರೆದು ಬಂದು ಹೋಗಿ 


ಹೆ 

ರಾಗ ನೀನು

ತಾಳ ನಾನು....... 


ನಿನ್ನ ಹಾಡು ಕೇಳಿ ಆ ಕೋಗಿಲೆಯು ಕೂಗಿದೆ 

ನಿನ್ನ ಹಾಡು ಕೇಳಿ ಕೋಗಿಲೆಯು ಕೂಗಿದೆ

ನಿನ್ನ ನಗುವ ನೋಡಿ ಮನವು ಮೂಕವಾಗಿದೆ


ನಿನ್ನ ನೋಟ ಕಂಡು ಕಲ್ಲು ಶಿಲೆಯಾಗಿದೆ 

ಹೇಯ ಹೇಯ ನಿನ್ನ ನೋಟ ಕಂಡು ಕಲ್ಲು ಶಿಲೆಯಾಗಿದೆ 

ನಿನ್ನಿಂದ ಪ್ರೀತಿ ಹಾಡು ಕೇಳಿ ಕುಣಿವ ಆಸೆ


ಹೆ 

ಮಾತು ನೀನು

ಮೌನ ನಾನು............


 ನಿನ್ನ ಕಂಡ ನನ್ನ ಮನುವು ಉಯ್ಯಾಲೆಯಂತೆ ತೂಗಿದೆ

ನಿನ್ನ ಕಂಡ ನನ್ನ ಮನುವು ಉಯ್ಯಾಲೆಯಂತೆ ತೂಗಿದೆ 

ನನ್ನ ಮನವು ಏಕೊ ನಿನ್ನೆ ಬೇಡಿದೆ

ಹೆಯೇ ಹೇಯ

ನನ್ನ ಮನವು ಏಕೊ ನಿನ್ನೆ ಬೇಡಿದೆ


ಹೆ

ಮನಸ್ಸು ನೀನು

ಕನಸ್ಸು ನಾನು...,........


ನಿನ್ನ ಮನಸ್ಸು ನನ್ನೇ ಬೇಡಿದೆ

ಒಲವ ರಾಗದಿ ಮರೆತು ಹೋಗಿದೆ

ನಿನ್ನ ಮನಸ್ಸು ನನ್ನೇ ಬೇಡಿದೆ


ಒಲವ ರಾಗದಿ ಮರೆತು ಹೋಗಿ

ನಮ್ಮಿಬ್ಬರ ಪ್ರೀತಿ ಕೊನೆಯಗಲಾರದೆಂದು 


ಹೆ 

ಕವನ ನೀನು

ಕವಿಯು ನಾನು.............


ನಾನು ನೀನು ಇಂಪಾಗಿ ಹಾಡೋ ಹಾಡಿನಂತೆ

ನಾನು ನೀನು ಮರೆತು ಕುಣಿವ ನಾಟ್ಯದಂತೆ


ಹೆ 

ಕವನ ನೀನು

ಕವಿಯು ನಾನು................


******ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್


Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35