ವಚನಗಳು -23





ಮನದ ಮಾತು ಸುಳ್ಳಾದೊಡೆ 

ಊಣ್ಣುವ ಅನ್ನ ಕೆಂಪಾದದೊಡೆ 

ಕುಡಿವ ಹಾಲು ವಿಷವದೊಡೆ

ಬೇಲಿ ಎದ್ದು ಹೊಲ ಮೆದೊಡೆ

ಯಾರನ್ನು ಬೇಡಲಿ ಶಿವನೇ..... ನಮ್ಮ ಬಸವಣ್ಣ


ನಾನು ಎನ್ನುವವರ ಅಳಿವು ನೋಡ

ನಮ್ಮವ ಎನ್ನುವುದು ಒಳಿತು ನೋಡ

ಕುಡಿ ಬಾಳು ಸ್ವರ್ಗ ನೋಡ 

ಭಕ್ತಿಯಲಿ ಮಿಂದು ಪೂಜಿ ಮಾಡ 

ಕಾಯಕದಿ ಶಿವನ ಅವತಾರ ಕಾಣುವುದು.... ನಮ್ಮ ಬಸವಣ್ಣ 


ಜಗದಿ ಜನರು ಸ್ವಾರ್ಥದಿ ಹುಚ್ಚೇದ್ದು ಕುಣಿವಾಗಾ

ನ್ಯಾಯವನು ಅನ್ಯಾಯ ತುಳಿವಾಗ

ಧರ್ಮವು ಅಧರ್ಮದಿ ನಲುಗುವಾಗ

ಕಾಲವು ವಿಧಿಯ ಕೈಗೊಂಬೆ ಆಗಿರುವಾಗ 

ಕಾಯಕದಿ ಬೇಡು ಕಾಲಬೈರವನ..... ನಮ್ಮ ಬಸವಣ್ಣ


***********ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35