ವಚನಗಳು -24
ಮನಸ್ಸು ಸತ್ತ ಮೇಲೆ ಕನಸ್ಸಿಗೆ ಎಲ್ಲಿದೆ ಬೆಲೆ
ಹೃದಯ ಸತ್ತ ಮೇಲೆ ರಕ್ತಕೆ ಎಲ್ಲಿದೆ ಬೆಲೆ
ಮನುಷ್ಯತ್ವ ಸತ್ತ ಮೇಲೆ ಮನುಷ್ಯನಿಗೆ ಎಲ್ಲಿದೆ ಬೆಲೆ
ಮಾಡುವ ಕಾಯಕದಿ ಶಿವನ ಕಾಣು ನೀಡುವನು
ನೆಲೆ ಬೆಲೆ ನಮ್ಮ ಬಸವಣ್ಣ
ಅದೃಷ್ಟವ ನಂಬಿದರೆ ಜೀವನ ನಡೆಯದು
ಮಾತಿನಲ್ಲಿ ಮನೆಯ ಕಟ್ಟಲಾಗದು
ಏಣಿ ಹಾಕಿದರೆ ಆಕಾಶದಿ ನಕ್ಷತ್ರ ನಿಲುಕದು
ಕಾಯಕದಿ ಪರಶಿವನ ಬೇಡು ಜೀವನ
ಸಾಕ್ಷಾತ್ಕರವಾಗುವುದು ನಮ್ಮ ಬಸವಣ್ಣ
ಕುಡಿದು ಕುಣಿವವನು ಸ್ವರ್ಗ ಕಾಣ
ಬಂಗಿಯಲಿ ತೇಲುವವನು ಸ್ವರ್ಗ ಕಾಣ
ರಾಮರಸದಿ ನೆನೆವ ಸ್ವರ್ಗ ಕಾಣ
ಕಾಯಕದಿ ನೆನೆದು ಪರಶಿವನ ಅವತಾರ ಕಾಣ
ನಮ್ಮ ಬಸವಣ್ಣ
***********ರಚನೆ **************
ಡಾ. ಚಂದ್ರಶೇಖರ. ಸಿ.. ಹೆಚ್
100% currect
ReplyDelete