ವಚನಗಳು -22
ಕುಲ ಯಾವುದು ಕುಲ ಯಾವುದು ಕೆಳದಿರಯ್ಯ
ಜೀವವಿರುವ ಸಕಲ ಜೀವಿಗಳು ಒಂದೇ ಕುಲ
ಸಾವಿಗೆ ಕುಲವಿಲ್ಲ ಎಲ್ಲರೂ ಸಾಯಲೇಬೇಕಲ್ಲವೇ
ತಿನ್ನುವ ಅನ್ನ ಕುಲ ಕೇಳುವುದೇನಯ್ಯ
ಮಾಡುವ ಕಾಯಕ ಕುಲ ಕೇಳುವುದೇ ನಮ್ಮ ಬಸವಣ್ಣ
ಭರದ ಹಳ್ಳದಿ ನೀರು ಹರಿದೊಡೆ
ಬಂಜರು ಭೂಮಿಗೆ ಮಳೆ ಬಂದೊಡೆ
ಭಕ್ತಿಯೇ ಇಲ್ಲದವನಿಗೆ ಶಿವ ಒಲಿದೊಡೆ
ಕೆಲಸ ಇಲ್ಲದವನಿಗೆ ಕಾಯಕ ಸಿಕ್ಕೊಡೆ
ಸುಖದ ಸಾಗರ ತೆರೆದಂತೆ ನಮ್ಮ ಬಸವಣ್ಣ
ಇಷ್ಟವ ನೆರವೇರಿಸುವ ಇಷ್ಟಲಿಂಗ
ಆತ್ಮ ಶುದ್ದಿ ಇಡುವ ಆತ್ಮಲಿಂಗ
ಆಸೆಗಳ ಸಿದ್ದಿಸುವ ಸಿದ್ದಲಿಂಗ
ಜ್ಯೋತಿ ಬೆಳಗುವ ಜ್ಯೋತಿರಲಿಂಗ
ಕಾಯಕದಿ ಕೈಲಾಸ ಕಾಣು ಪೂಜಿಸಿ ಶಿವಲಿಂಗ ನಮ್ಮ ಬಸವಣ್ಣ
************ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment