ಲಿವಿಂಗ್ ರಿಲೇಶನ್ ಶಿಪ್
ಹುಡುಗಿಯ ಕಂಡು ನಲಿವ ಹುಡುಗ
ಏಕೋ ಏನೋ ಮರೆತು ಜಗವ
ಆಸೆಗಳ ಬುತ್ತಿ ಹೊತ್ತು ಕನಸ್ಸುಗಳ ಬುಡವ ಕಿತ್ತು
ತನ್ನೆದೆಯ ತಾಳಕೆ ಕುಣಿವ ನವಿಲೊಂದು ಕಂಡು
ಮನಸ್ಸು ಗರಿ ಬಿಚ್ಚಿ ಹಾರಿ
ಕನಸ್ಸಿನ ರಾಣಿಯ ಸೇರುವ ಬಯಕೆ
ಮನೆ ಮಂದಿ ನೋಡಿ ಹಿರಿಯರು
ಕೂಡಿ ಮದುವೆಯ ತಾಳಕೆ ಕುಣಿವ
ಹೆಣ್ಣು ಗಂಡುಗಳ ಅವಿನಾಬಾವ ಸಂಬಂಧ
ಅರಿಸಿನ ದಾರದಿ ಬೆಸೆದು ಹೋಗುವ ಬಾಳು
ಎಳ್ಳೆಜ್ಜೆಯ ಸಪ್ತಪದಿಯಲಿ ಸಂಸಾರ ಸಾಗರ ದಾಟುವ ಗೋಳು
ಸತಿಪತಿಯಾಗಿ ಜೀವನವು ಸಾಗಿ
ನೋವು ನಲಿವುಗಳಲಿ ಮಾಗಿ
ಬದುಕು ತೂಗುವ ಜೋಕಾಲಿಯಾಗಿತ್ತು
ಹಿಂದು ತನ್ನ ಕಣ್ಣ ನೋಟಕೆ
ಕಂಡವಳ ಕುಡಿ ನೋಟಕೆ ಸೋತು
ಮನಸ್ಸು ಕನಸ್ಸುಗಳ ಜಿದ್ದಾ ಜಿದ್ದಿಗೆ ಬಿದ್ದು
ಸಂಸಾರ ನಡೆದಾಯತಿ
ಯಾರು ಇಲ್ಲದ ಮನೆಯ ನಾಲ್ಕು ಗೋಡೆಯಲಿ
ನಾವಿಕ ನೂಕುವ ನೀರಿನ ತೆಪ್ಪದಂತೆ
ತಾಳಿಯಿಲ್ಲದ ಕೊರಳು ಕುಂಕುಮವಿಲ್ಲದ ಹಣೆಯು
ನೆರಳಿನಲಿ ಬದುಕುತ ಕಳೆವ ಜೋಡಿ
ದೂರದಿ ಕಾಣುವ ಎರಡು ಹಕ್ಕಿಯಂತೆ
ಇದ್ದುಷ್ಟು ದಿನ ಸುಖವಾ ಉಂಡು
ಸಂಸಾರ ನೌಕೆಯಲಿ ಸಾಗಲು ಬಯಸಿ ದೂರ
ಏಕೋ ಸೇರದು ತೀರ ಬಂದು ಬಳಗದಿಂದ ಉಳಿವ ದೂರ
ಎಳೆಯುತಾ ಬದುಕ ಬಾರ
ಇಷ್ಟೇ ನಾವು ನಡೆವ ಬದುಕು
ಕಳೆವುದು ಒಲವ ತೀರಿದ ಉಳುಕು
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment