ವಚನಗಳು -18
ಮೋಸ ಮಾಡಿ ಜನರು ಬದುಕುತ್ತಿಹರು
ನ್ಯಾಯವನೇ ಹಿಡಿದು ಹುಡುಕುತ್ತಿಹರು
ಪ್ರೀತಿಯಿಂದ ಸುಲಿಗೆ ಮಾಡುತ್ತಿಹರು
ಅಸಾಮಾನತೆಯಲಿ ಬೆಯುತ್ತಿಹರು
ನೀ ಹೇಳಿದ ಸಮಾನತೆಯ ನುಂಗಿ ಕುಡಿಯುತ್ತಿಹರು
ನಮ್ಮ ಬಸವಣ್ಣ
ಕೊಲೆಗಾರರು ಕುಣಿಯುತ್ತಿರುವಾಗ
ದರೋಡೆಕೋರರು ಮೇರುಯುತ್ತಿರುವಾಗ
ಸುಲಿಗೆಕೋರರು ಬಲಿಯುತ್ತಿರುವಾಗ
ಪ್ರಜೆಗಳ ಅಳುವವರು ನಲಿಯುತ್ತಿರುವಾಗ
ಸಮಾನತೆ ಇರುವುದು ಸುರಿವ ಬೇವರೀಗಷ್ಟೇ ನಮ್ಮ ಬಸವಣ್ಣ
ಭ್ರಷ್ಟಾಚಾರ ಸುಡುತಿದೆ ಇಂದು
ಮೇಲು ಕೀಳಿನ ಅನ್ಯಾಯಕೆ ಕೊನೆ ಎಂದು
ಮುಗ್ದ ಜನರು ಮೋಸಕೆ ಬಲಿ ಇಂದು
ನೀ ಸಾರಿದ ಸಮಾನತೆ ಸಿಗುವುದು ಎಂದು
ಓ ಕಾಯಕ ಯೋಗಿ ಬಸವಣ್ಣ
***********ರಚನೆ,*************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment