ಓ ಒಲವೆ




ಕಣ್ಣ ನೋಟದಿ ಸೆರೆಯಾದ

          ಕುಸುಮವೇ

ಮನಸ್ಸಿನ ಅಳದಿ ಒಲವಾದ

           ಪಾರಿಜಾತವೇ

ಹೃದಯದಿ ಬಡಿವ ಇಂಪಾದ

            ಸಂಗೀತವೇ

ಕನಸ್ಸಲು ಕುಣಿವ ನವಿಲ

             ನಾಟ್ಯವೇ


ಗುಡುಗಿನಲಿ ಮಿಂಚಾಗಿ ಸಿಡಿಲು

        ಬಡಿದಂತಾಯ್ತು

ನನ್ನ ಒಲವ ಕನಸ್ಸಿನ ಮಳೆ

        ಬಂದಾಯ್ತು

ನನ್ನ ಉಸಿರ ತಂಪು ಗಾಳಿ ನಿನ್ನ

        ಕರೆದಂತಾಯ್ತು

ಮನದ ಆಸೆ ಎಲ್ಲಾ ಹೂ ಬಿಟ್ಟು

         ಹಸಿರಾದಂತಯ್ತು


ಬೇಸಿಗೆಯ ಸುಡೋ ಬಿಸಿಯಲಿ

           ತಂಪಾದ ಪ್ರೀತಿ

ಒಲವ ಮನದ ಅಲೆಯಲಿ

            ತೇಲುವ ರೀತಿ

ವಿರಹದ ಬಿಸಿ ತಾಪಕೆ ಮಂಜು

            ಕರಗುವ ನೀತಿ

ಮನಸ್ಸುಗಳು ಕದಡಿ ಮುದುಡಿ

            ನಲುಗುವ ಭೀತಿ 


ಕನಸ್ಸುಗಳು ನಿರಂತೆ ಹರಿದು

        ನನ್ನೆದೆಯ ತಾಕಿ

ಗುಳಿ ಬಿದ್ದ ಕೆನ್ನೆಯ ಗುಂಡಿಗೆ

        ನನ ನೂಕಿ

ಮುದ್ದಾದ ನಿನ ನಗುವಿಗೆ

    ನಾನು ಗಿರಾಕಿ

ಮಾತುಗಳ ಸಪ್ಪಳಕೆ ಕಟ್ಟಬೇಕು 

       ಮುತ್ತಿನ ಬಾಕಿ


ಕಣ್ಣ ನೋಟ ಏಕೋ ಕಾಡಿದೆ

     ಕಾಮನಬಿಲ್ಲಂತೆ

ಎಳು ಬಣ್ಣಗಳು ಹೇಳಿದೆ

     ನಾಟಿದ ಕನಸ್ಸ ನಂತೆ

ಬಣ್ಣದಿ ನಾನು ನಿನ್ನಲ್ಲಿ ಬೆರೆತ

        ಹೋಳಿಯಂತೆ 

ಪ್ರೀತಿಯ ಮಧುರ ಬಾವದಿ ನೋಟ 

        ಬೇರೆತಂತೆ


********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್



Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20